ದೆಹಲಿ : ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ ಮತ್ತು ಸಂಗಡಿಗರಿಗೆ ಜಾಮೀನು ನೀಡಿರುವ ಹೈಕೋರ್ಟ್ ವಿರುದ್ದ ಸುಪ್ರೀಂ ಕೋರ್ಟ್ ಗರಂ ಆದ ಘಟನೆ ಇಂದು ನಡೆದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾ.ಪಾರ್ದಿವಾಲಾ ನೇತೃತ್ವದ ದ್ವಿ-ಸದಸ್ಯ ಪೀಠ ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ಈ ವೇಳೆ ಕೋರ್ಟ್ ಆರೋಪಿಗಳು ನಿರಪರಾಧಿ ಅನ್ನೋ ರೀತಿ ಹೈಕೋರ್ಟ್ ಬೇಲ್ ಕೊಟ್ಟಿದೆ. ನಿಮಗೂ ಕೂಡ ಈ ರೀತಿ ಅನ್ನಿಸುತ್ತಿಲ್ವಾ? ಎಲ್ಲಾ ಕೇಸ್‌ಗಳಲ್ಲೂ ಹೈಕೋರ್ಟ್ ಹೀಗೆ ಮಾಡುತ್ತಾ? ವಿಚಾರಣಾ ನ್ಯಾಯಾಲಯ ತಪ್ಪು ಮಾಡಿದ್ರೆ ತಪ್ಪಾಗಿದೆ ಅನ್ನಬಹುದು.
ಹೈಕೋರ್ಟ್ ಹೀಗೆ ಮಾಡಿದ್ರೆ ಹೇಗೆ? ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡುವುದಿಲ್ಲ ಏಂದು ಸುಪ್ರೀಂ ಕೋರ್ಟ್ ಹೇಳಿದೆ. ಸುದೀರ್ಘ ವಿಚಾರಣೆಯಲ್ಲಿ ಪ್ರತಿಯೊಬ್ಬ ಆರೋಪಿಗಳ ಬಗ್ಗೆಯೂ ಆಳವಾದ ವಿಚಾರಣೆ ನಡೆದ ಕೋರ್ಟ್ ಎ-1 ಪವಿತ್ರಾಗೌಡ ಬಗ್ಗೆ ಗಂಭೀರವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಇಷ್ಟೆಲ್ಲಾ ಅನಾಹುತಕ್ಕೆ ಪವಿತ್ರಾಗೌಡ ಕಾರಣ ಅಂದಿದೆ.
ಇಡೀ ರಾದ್ಧಾಂತಕ್ಕೆ ಪವಿತ್ರಾಗೌಡ ಕಾರಣ. ಸಮಸ್ಯೆ ಮೂಲವೇ ನೀವು.. ನಿಮ್ಮಿಂದಲೇ ಆಗಿದ್ದು.. ಯಾಕೆ ನಿಮಗೆ ಬೇಲ್ ಕೊಡಬೇಕು? ಇಷ್ಟೆಲ್ಲಾ ‘ಸಾಕ್ಷ್ಯ ಇದ್ದರೂ.. ಬೇಲ್ ಯಾಕೆ ಕೊಡಬೇಕು? ಇದು ಬರೀ ಕೊಲೆ ಅಲ್ಲ.. ವ್ಯವಸ್ಥಿತ ಪಿತೂರಿ, ಷಡ್ಯಂತ್ರ. ಸಾಕ್ಷ್ಯ ಇದ್ದರೂ ಯಾಕೆ ಜಾಮೀನು ಮುಂದುವರಿಸಬೇಕು? ದರ್ಶನ್-ಪವಿತ್ರಾಗೌಡಗೆ ಏನು ಸಂಬಂಧ? ಎ1 ಪವಿತ್ರಾಗೌಡ ಪವನ್‌ಗೆ 55 ಬಾರಿ ಕರೆ ಮಾಡಿದ್ಯಾಕೆ? ಅಂತಲೂ ಜಡ್ಜ್ ಪಾರ್ದಿವಾಲ ಪ್ರಶ್ನೆ ಮಾಡಿದ್ರು.
ಜಡ್ಜ್ ಪ್ರಶ್ನೆಗೆ ಉತ್ತರಿಸಿದ ಪವಿತ್ರಾಗೌಡ ಪರ ವಕೀಲರು, ಕೊಲೆಗೂ ಪವಿತ್ರಾಗೌಡಗೂ ಸಂಬಂಧ ಇಲ್ಲ. ರೇಣುಕಾಸ್ವಾಮಿ ಕಿಡ್ನ್ಯಾಪ್ ಪವಿತ್ರಾಗೆ ಗೊತ್ತಿರಲಿಲ್ಲ. ಪವಿತ್ರಾಗೆ ಅಪಹರಣಕಾರರ ಪರಿಚಯವೂ ಇಲ್ಲ. ರೇಣುಕಾಗೆ ಚಪ್ಪಲಿಯಲ್ಲಿ ಹೊಡೆದು ಪವಿತ್ರಾ ವಾಪಸ್ ಆಗಿದ್ದಾರೆ ಅಂತ ವಾದಿಸಿದ್ರು.
- ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ
- ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ
- ರಾಯಚೂರು: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರ
- ಚಿಕ್ಕಬಳ್ಳಾಪುರ: ಪ್ರಯಾಣಿಕರನ್ನು ಬಿಸಿಲಿನಲ್ಲಿ ನಿಲ್ಲಿಸಿ ಸರಕು ಮೂಟೆಗಳನ್ನು ಸಾಗಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡ್ರೈವರ್, ಕಂಡಕ್ಟರ್
- ವಿಜಯನಗರಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಚಿನ್ನದ ಪದಕ

