ಮೈಸೂರು: ಮಹಾರಾಜರ ಕುಟುಂಬದ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ದ್ವೇಷ, ಅಪಥ್ಯ ಭಾವನೆ ಇದೆ. ದೇವರಾಜ ಅರಸುಗಿಂತ ದೊಡ್ಡವರು ನಾನು ಹೇಳಿದ್ದರು. ಆದರೆ ಈಗ ನಾಲ್ವಡಿ ಕೃಷ್ಣರಾಜ ಮಹಾರಾಜರಿಗಿಂತಾ ದೊಡ್ಡವರಾಗಿದ್ದಾರೆ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಅನಧಿಕೃತ ವರ್ಗಾವಣೆ ಖಾತೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಕ್ಕಳಿಗೆ ಆಸ್ತಿ ಮಾಡಿ ಕೊಡಬಹುದು, ತಲೆಯಲ್ಲಿ ಬುದ್ದಿ ತುಂಬಿಸಲು ಆಗಲ್ಲ. ಡಾ. ಯತೀಂದ್ರ ಸಿದ್ದರಾಮಯ್ಯರ ಮಾತಲ್ಲ. ಇದು ಸಿದ್ದರಾಮಯ್ಯ ಅವರ ಅಂತರಾಳದ ಭಾವನೆ ಕೂಡ ಎಂದು ವ್ಯಂಗ್ಯ ಮಾಡಿದ್ದಾರೆ.
10 ವರ್ಷ ಸಿಎಂ ಆಗಿ ಬಿಟ್ಟರೆ ನಾಡದೇವತೆ ಚಾಮುಂಡಿ ಗಿಂತಾ ದೊಡ್ಡವರು ಆಗಿ ಬಿಡುತ್ತಾರೆ. ಯತೀಂದ್ರ ಅವರೇ ನಿಮ್ಮಪ್ಪನ ಕೊಡುಗೆ ಏನಯ ಹೇಳಿ? ಕೆ.ಆರ್. ಆಸ್ಪತ್ರೆಗೆ ಸುಣ್ಣ ಹೊಡೆಸಲು ನಿಮ್ಮಪ್ಪನ ಕೈಯಲ್ಲಿ ಆಗಿಲ್ಲ. ಮೈಸೂರಿಗೆ ನಿಮ್ಮಪ್ಪನ ಕೊಡುಗೆ ಏನು ಹೇಳಿ? ನಿಮ್ಮ ಅಮ್ಮ ಅಪ್ಪ ಸೇರಿ ಮೂಡಾದಲ್ಲಿ ಸೈಟ್ ಹೊಡೆದರು ಅದೇನಾ ನಿಮ್ಮ ಅಪ್ಪನಾ ಕೊಡುಗೆ ಯತೀಂದ್ರ? ನಾಲ್ವಡಿ ಮಹಾರಾಜರು ನಾಡ ಬೆಳಗಿದರು ಎಂದು ಪ್ರಶ್ನಿಸಿದ್ದಾರೆ.
ಶುದ್ದ ಕುಡಿಯುವ ನೀರಿನ ಘಟಕ ಕಟ್ಟಿ ಜಲಾಶಯ ಕಟ್ಟಿದ ರೀತಿ ಫೋಸ್ ಕೊಡುವುದು ಬಿಡಿ. ವರ್ಗಾವಣೆಯಲ್ಲಿ ಒಳ್ಳೆಯ ಕಮಾಹಿ ಮಾಡಿಕೊಂಡು ಅರಾಮಾಗಿ ಇದ್ದೀರಿ. ಯತೀಂದ್ರ ಅವರೇ ನಿಮ್ಮ ಅಪ್ಪನ ಕೊಡುಗೆ ಏನು ಹೇಳಿ. ಉಡಾಫೆ ಮಾತಾಡಿಕೊಂಡು ಓಡಾಡಿದ್ದೆ ಸಿಎಂ ಸಿದ್ದರಾಮಯ್ಯ ಸಾಧನೆ ಎಂದು ಟಾಂಗ್ ನೀಡಿದ್ದಾರೆ.
- ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
- ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆ
- ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
- ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
- ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

