ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬೇಲ್ ರದ್ದಾಗಿ ಮತ್ತೆ ಜೈಲು ಸೇರಿದ್ದಾರೆ. ಜೈಲಿನಲ್ಲಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಹೊಸ ಫೋಟೋ ರಿಲೀಸ್ ಆಗಿದೆ. ಆ ಫೋಟೋದಲ್ಲಿ ನಟ ದರ್ಶನ್ ಬೋಳು ತಲೆ, ಸುಕ್ಕು ಗಟ್ಟಿದ ಮುಖ ಕಂಡು ಬಂದರೆ, ಇತ್ತ ಪವಿತ್ರಾ ಗೌಡ ಮಾತ್ರ ನಗುಮುಖದಲ್ಲೇ ಇರುವುದು ಕಾಣಬಹುದು.
ಇತ್ತೀಚೆಗೆ ತಾನೇ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದ ದರ್ಶನ್ ಮುಡಿಕೊಟ್ಟಿದ್ದರು. ಹಾಗಾಗಿ ಅವರು ಪೊಲೀಸ್ ಠಾಣೆಯಲ್ಲಿ ತೆಗೆದ ಫೋಟೋದಲ್ಲಿ ತಲೆಯಲ್ಲಿ ಕೂದಲು ಇಲ್ಲ. ಸದ್ಯ ನವಸಮಾಜಕ್ಕೆ ಸಿಕ್ಕ ದರ್ಶನ್ ಹಾಗೂ ಪವಿತ್ರಾ ಗೌಡ ಫೋಟೋಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ತೆಗೆಯಲಾಗಿದೆ.
ನಟ ದರ್ಶನ್ ಜೈಲಿನ ಒಳಗಡೆ ತೆರಳೋ ಮುನ್ನ ತಪಾಸಣೆ ಮಾಡಿದಾಗ ಫೋಟೋಗಳು ರಿವೀಲ್ ಆಗಿವೆ. ಅವುಗಳಲ್ಲಿ ನಟ ದರ್ಶನ್ ಬೋಳು ತಲೆ, ಸುಕ್ಕುಗಟ್ಟಿದ ಮುಖ ಹಾಗೂ ಬಿಳಿಯಾದ ಗಡ್ಡವನ್ನು ಕಾಣಬಹುದಾಗಿದೆ.
ಪವಿತ್ರಾ ಗೌಡ ಅವರ ಫೋಟೊವನ್ನು ಸಹ ಕ್ಲಿಕ್ಕಿಸಲಾಗಿದ್ದು, ಇನ್ಸ್ಟಾಗ್ರಾಂ ಫೋಟೋ, ರೀಲ್ಸ್ಗಳ ರೀತಿ ಅಲ್ಲದೆ ಸಾಮಾನ್ಯವಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಈಗ ವೈರಲ್ ಆಗಿರುವ ಒಂದು ಫೋಟೋದಲ್ಲಿ ಪವಿತ್ರಾ ಗೌಡ ನಗುತ್ತಿದ್ದಾರೆ. ಫೋಟೋದಲ್ಲಿ ತುಟಿಗೆ ಹಚ್ಚಿರುವ ಲಿಪ್ಸ್ಟಿಕ್ ಎದ್ದು ಕಾಣುತ್ತಿದೆ. ಕಳೆದ ಬಾರಿ ಪವಿತ್ರಾ ಬಂಧನವಾದಾಗ ಇದೇ ಲಿಪ್ಸ್ಟಿಕ್ ಕಾರಣಕ್ಕೆ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಅಮಾನತ್ತಾಗಿದ್ದರು.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಎಲ್ಲರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ. ಹೀಗೆ ನ್ಯಾಯಾಂಗ ಬಂಧನಕ್ಕೆ ಕಳಿಸುವ ಮುಂಚೆ ಎಲ್ಲ ಆರೋಪಿಗಳ ಚಿತ್ರಗಳು, ಬೆರಳಚ್ಚು ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಕೊಂಡಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ರದ್ದುಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ನಟ ದರ್ಶನ್ ಹಾಗೂ ಗ್ಯಾಂಗ್ ಗೆ ನೀಡಿದ್ದ ಜಾಮೀನು ರದ್ದುಗೊಳಿಸಿತ್ತು. ಹೀಗಾಗಿ ಎರಡು ದಿನಗಳ ಹಿಂದೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
- ರಾಮ್ ಚರಣ್ ಹುಟ್ಟುಹಬ್ಬಕ್ಕೆ ‘ಪೆದ್ದಿ’ ಟೀಸರ್ ರಿಲೀಸ್ : ಪೈಲ್ವಾನ್ ಅವತಾರದಲ್ಲಿ ಮಿಂಚಿದ ನಟ
- ರಾಮನವಮಿ ವಿಶೇಷ : ಅಯೋಧ್ಯೆಯಲ್ಲಿ ಬಾಲರಾಮನಿಗೆ ಸೂರ್ಯ ತಿಲಕ, ಕಣ್ತುಂಬಿಕೊಂಡ ಪ್ರಧಾನಿ ಮೋದಿ
- ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ
- ಟ್ರಂಪ್ ಮಹತ್ವದ ಘೋಷಣೆ : ಹಾರ್ಮುಜ್ ಜಲಸಂಧಿ ತೆರೆಯಲು ಏಪ್ರಿಲ್ 6ರವರೆಗೆ ಡೆಡ್ ಲೈನ್
- ತರಗತಿಯಲ್ಲೇ ಪ್ರಪೋಸ್ ಮಾಡಿದ ಪ್ರೊಫೆಸರ್‌ಗೆ ವಿದ್ಯಾರ್ಥಿನಿಯಿಂದ ಚಪ್ಪಲಿ ಏಟು

