ನವದೆಹಲಿ : ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ಮಸೂದೆಗಳನ್ನು ಮಂಡಿಸಿದರು. ಭಾರಿ ವಿರೋಧಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ, 2025, ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ (ತಿದ್ದುಪಡಿ) ಮಸೂದೆ, 2025 ಅನ್ನು ಮಂಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದಂತ ಪಿಎಂ, ಸಿಎಂ, ಸಚಿವರ ವಿರುದ್ಧದ ಪದಚ್ಯುತಿಗೊಳಿಸುವಂತ ಮಸೂದೆಗೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಲೋಕಸಭೆಯಲ್ಲಿ ಗದ್ದಲ, ಕೋಲಾಹಲ ಕೂಡ ಉಂಟಾಯಿತು.
ಗಂಭೀರ ಕ್ರಿಮಿನಲ್ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಧಾನಿ, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸೇರಿದಂತೆ ಚುನಾಯಿತ ಪ್ರತಿನಿಧಿಗಳನ್ನು ಸತತ 30 ದಿನಗಳವರೆಗೆ ಬಂಧನದಲ್ಲಿದ್ದರೆ ಅವರನ್ನು ಅವರ ಸ್ಥಾನದಿಂದ ತೆಗೆದುಹಾಕುವ ಪ್ರಸ್ತಾಪವನ್ನು ಹೊಂದಿರುವ ಮಸೂದೆ ಸೇರಿದಂತೆ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದರು. ಅವುಗಳೆಂದರೆ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ-2025, ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ, ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ (ತಿದ್ದುಪಡಿ) ಮಸೂದೆ- 2025. ಕ್ರಿಮಿನಲ್ ಕೇಸ್ನಲ್ಲಿ ಪ್ರಧಾನಿಗಳು, ಕೇಂದ್ರ ಸಚಿವರು, ಸಿಎಂಗಳು, ರಾಜ್ಯಗಳ ಸಚಿವರು ಬಂಧನಕ್ಕೆ ಒಳಗಾದರೆ ಅವರನ್ನು ಆ ಹುದ್ದೆಯಿಂದ ವಜಾ ಮಾಡುವ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಂಡಿಸಿದ್ದಾರೆ.
ಗಂಭೀರ ಕ್ರಿಮಿನಲ್ ಆರೋಪದ ಮೇಲೆ ಬಂಧನಕ್ಕೆ ಒಳಗಾದರೆ ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ಹುದ್ದೆಯಿಂದ ವಜಾಗೊಳಿಸುವ ಮಸೂದೆ ಮಂಡನೆಯಾಗಿದೆ. ಆದರೆ, ಪ್ರಧಾನಿ, ಸಿಎಂಗಳ ವಿರುದ್ಧದ ಆರೋಪಗಳಿಗೆ ವಜಾ ನಿಯಮ ಅನ್ವಯವಾಗುವುದಿಲ್ಲ. ಈಗಿನ ಕಾನೂನಿನಲ್ಲಿ ಪಿಎಂ, ಕೇಂದ್ರ ಸಚಿವರ ವಜಾಕ್ಕೆ ಅವಕಾಶವಿಲ್ಲ. ಹೊಸ ಮಸೂದೆಯಿಂದ ಪಿಎಂ, ಸಿಎಂ, ಸಚಿವರ ವಜಾಕ್ಕೆ ಅವಕಾಶವಿರಲಿದೆ. ಅವರು 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾದರೆ ಹುದ್ದೆಯಿಂದ ವಜಾಗೊಳಿಸಲಾಗುವುದು. ಯಾವುದೇ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಗಳ ಸಚಿವರನ್ನು ವಶಕ್ಕೆ ಪಡೆದರೆ ಅಥವಾ ಬಂಧನಕ್ಕೆ ಒಳಗಾದರೆ ಅವರನ್ನು 30 ದಿನದೊಳಗೆ ಹುದ್ದೆಯಿಂದ ವಜಾಗೊಳಿಸಲು ಅವಕಾಶವಿದೆ. ಅಥವಾ ಅವರು 30 ದಿನದೊಳಗೆ ರಾಜೀನಾಮೆ ನೀಡುವುದು ಕಡ್ಡಾಯವಾಗಲಿದೆ.

