ನವದೆಹಲಿ : ಭಾರತ ಉಕ್ರೇನ್ ಹಾಗೂ ರಷ್ಯಾ ಜತೆ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡಿದೆ. 2025 ರ ವರ್ಷಾಂತ್ಯಕ್ಕೆ ಇಬ್ಬರೂ ದೊಡ್ಡ ನಾಯಕರು ಭಾರತಕ್ಕೆ ಭೇಟಿ ನೀಡುವುದು ಖಾತ್ರಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನ ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದಾರೆ. ಈ ವರ್ಷಾಂತ್ಯದ ವೇಳೆಗೆ ರಷ್ಯಾ ಅಧ್ಯಕ್ಷ ಪುಟಿನ್ ಸಹ ಭಾರತಕ್ಕೆ ಭೇಟಿ ನೀಡುವುದು ಖಚಿತವಾಗಿದೆ. ಇವಾಗ ಝೆಲೆನ್ಸ್ಕಿ ಕೂಡ ಭಾರತಕ್ಕೆ ಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಹೆಚ್ಚು ಪವರ್ ಫುಲ್ ಅನ್ನೋಕೆ ತಾಜಾ ಉದಾಹರಣೆಯಾಗಿದೆ.
ಭಾರತ ಮತ್ತು ಉಕ್ರೇನ್ ಉಭಯ ದೇಶಗಳು ನಡುವಿನ ಭವಿಷ್ಯದ ಕಾರ್ಯತಂತ್ರಗಳು ವೇಗವಾಗಿ ಸಾಗುತ್ತಿವೆ. ಪ್ರಧಾನಿ ಮೋದಿ ಅವರು ವೊಲೊಡಿಮಿರ್ ಝಲೆನ್ಸ್ಕಿ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ಝಲೆನ್ಸ್ಕಿ ಸಹ ಒಪ್ಪಿದ್ದು, ದಿನಾಂಕವನ್ನು ನಿಗದಿಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಟ್ರಂಪ್ ಎಚ್ಚರಿಕೆ ಬಳಿಕವೂ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಮುಂದುವರಿಸಿದೆ. ಹೀಗಾಗಿ ಭಾರತದ ಮೇಲೆ ಶೇ.25 ವಿಧಿಸಿದ್ದ ಸುಂಕದ ಪ್ರಮಾಣವನ್ನು 50%ಗೆ ಟ್ರಂಪ್ ಹೆಚ್ಚಿದ್ದಾರೆ. ಇದು ಆ.27ರಿಂದ ಅನ್ವಯವಾಗಲಿದೆ. ಈ ನಡುವೆ ಅಮೇರಿಕ ವಿರೋಧಿ ಅಂತ ಬಿಂಬಿಸಿಕೊಂಡಿರೋ ರಷ್ಯಾ ಜತೆ ಭಾರತ ಸೌಹಾರ್ದಯುತ ಸಂಬಂಧ ಮುಂದುವರಿಸಿದ್ದು, ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದೆ. ಮುಂದೆ ಪ್ರಕರಣ ಯಾವ ದಿಕ್ಕಿಗೆ ತಿರುಗಲಿದೆ ಅನ್ನೋದನ್ನ ಕಾದು ನೋಡ್ಬೇಕು.
ಇನ್ನು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮುಖಾಮುಖಿ ಭೇಟಿಗೆ ನಾವು ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತಿಳಿಸಿದ್ದಾರೆ. ಈ ಕ್ರಮದಿಂದ ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ತುಂಬಾ ಒಳ್ಳೆಯ ಹಾಗೂ ಆರಂಭಿಕ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ.
ಯುರೋಪಿಯನ್ ನಾಯಕರು, ನ್ಯಾಟೋ ಅಧಿಕಾರಿಗಳು ಮತ್ತು ಉಕ್ರೇನ್ ಅಧ್ಯಕ್ಷರೊಂದಿಗೆ ಶ್ವೇತಭವನದಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ನಡುವೆ ಶಾಂತಿ ಮಾತುಕತೆಗಳಿಗೆ ಈ ಭೇಟಿ ಹತ್ತಿರವಾಗುವ ಸಾಧ್ಯತೆಯಿದೆ ಎಂದು ಅವರು ಘೋಷಿಸಿದ್ದಾರೆ.
ವಿಶೇಷ ಅತಿಥಿಗಳೊಂದಿಗೆ ಇಲ್ಲಿ ಉತ್ತಮ ಸಭೆ ನಡೆದಿದೆ. ಅದು ಓವಲ್ ಕಚೇರಿಯಲ್ಲಿ ಮತ್ತೊಂದು ಸಭೆಯಲ್ಲಿ ಕೊನೆಗೊಂಡಿತು ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಹೇಳಿದ್ದಾರೆ. ಸಭೆಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಫಿನ್ನಿಷ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಉಪಸ್ಥಿತರಿದ್ದರು.

