ಬೆಂಗಳೂರು : ಇನ್ನು ಮುಂದೆ ನೀವು ವಾಟ್ಸಪ್ ಮುಖಾಂತರ ಡೌನ್ಲೋಡ್ ಮಾಡಬಹುದು. ಸಾಮಾನ್ಯವಾಗಿ ಜನರು ತಮ್ಮ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು UIDAI ವೆಬ್‌ಸೈಟ್‌ಗೆ ಭೇಟಿ ನೀಡುತ್ತಾರೆ ಅಥವಾ mAadhaar ಅಪ್ಲಿಕೇಶನ್ ಅನ್ನು ಬಳಸುತ್ತಾರೆ.
ವಾಟ್ಸ್ಆ್ಯಪ್ನಿಂದ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಮುಖ್ಯ ವಿಷಯ
ನೀವು ವಾಟ್ಸ್ಆ್ಯಪ್ನಿಂದ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ಬಯಸಿದರೆ, ಅದಕ್ಕೂ ಮೊದಲು ನೀವು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಳ್ಳಬೇಕು. ನೀವು ಸರ್ಕಾರದ ಡಿಜಿಲಾಕರ್‌ನಲ್ಲಿ ನಿಮ್ಮ ಖಾತೆಯನ್ನು ರಚಿಸಬೇಕು. ನಿಮಗೆ ಖಾತೆ ಇದ್ದರೆ ಅದು ಒಳ್ಳೆಯದು, ಇಲ್ಲದಿದ್ದರೆ ನೀವು ಡಿಜಿಲಾಕರ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನ ಸಹಾಯದಿಂದ ಖಾತೆಯನ್ನು ರಚಿಸಬಹುದು.
ವಾಟ್ಸ್ಆ್ಯಪ್ನಿಂದ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು, ಮೊದಲು +91-9013151515 ಮೊಬೈಲ್ ಸಂಖ್ಯೆಯನ್ನು ಫೋನ್‌ನಲ್ಲಿ ಉಳಿಸಿ. ಇದು MyGov Helpdesk ನ ಅಧಿಕೃತ ವಾಟ್ಸ್ಆ್ಯಪ್ ಸಂಖ್ಯೆಯಾಗಿದ್ದು, ಇದು ವಾಟ್ಸ್ಆ್ಯಪ್ನಿಂದ ಆಧಾರ್ ಡೌನ್‌ಲೋಡ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ವಾಟ್ಸಪ್ ನಲ್ಲಿ ಆಧಾರ್ ಡೌನ್ಲೋಡ್ ಮಾಡುವ ವಿಧಾನ:
ಹಂತ 1: ವಾಟ್ಸ್ಆ್ಯಪ್ನಿಂದ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು, ಮೊದಲು +91-9013151515 ಮೊಬೈಲ್ ಸಂಖ್ಯೆಯನ್ನು ಫೋನ್‌ನಲ್ಲಿ ಸೇವ್ ಮಾಡಿ. ಆ ಸಂಖ್ಯೆಯನ್ನು ನಿಮ್ಮ ವಾಟ್ಸ್ಆ್ಯಪ್ನಲ್ಲಿ ತೆರೆಯಿರಿ.
ಹಂತ 2: ಸಂಖ್ಯೆಯನ್ನು ತೆರೆದ ನಂತರ, ವಾಟ್ಸ್ಆ್ಯಪ್ಚಾಟ್ಗೆ ಹೋಗಿ ಹಾಯ್ ಅಂತ ಮೆಸೇಜ್ ಕಳಿಸಿ.
ಹಂತ 3: ನೀವು ಚಾಟ್‌ಬಾಟ್‌ನಿಂದ ಪ್ರತಿಕ್ರಿಯೆಯನ್ನು ಪಡೆಯುತ್ತೀರಿ, ಅದರಲ್ಲಿ ನೀವು ಹಲವು ಆಯ್ಕೆಗಳನ್ನು ನೋಡುತ್ತೀರಿ.
ಹಂತ 4: ಆ ಆಯ್ಕೆಗಳಿಂದ, ನೀವು ಡಿಜಿಲಾಕರ್ ಸೇವೆಗಳನ್ನು ಆಯ್ಕೆ ಮಾಡಬೇಕು.
ಹಂತ 5: ನೀವು ಡಿಜಿಲಾಕರ್‌ನಲ್ಲಿ ನಿಮ್ಮ ಖಾತೆಯನ್ನು ರಚಿಸಿರುವುದರಿಂದ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ.
ಹಂತ 6: ನಿಮ್ಮ ಸಂಖ್ಯೆಗೆ OTP ಬರುತ್ತದೆ, ಅದನ್ನು ಚಾಟ್‌ನಲ್ಲಿ ಟೈಪ್ ಮಾಡಿ.
ಹಂತ 7: ಇದು ಪರಿಶೀಲನಾ ಪ್ರಕ್ರಿಯೆಯಾಗಿದ್ದು, ಪೂರ್ಣಗೊಂಡ ನಂತರ ಡಿಜಿಲಾಕರ್‌ನಲ್ಲಿರುವ ಎಲ್ಲಾ ದಾಖಲೆಗಳನ್ನು ನಿಮಗೆ ತೋರಿಸಲಾಗುತ್ತದೆ.
ಹಂತ 8: ಪಟ್ಟಿಯಿಂದ ಆಧಾರ್ ಆಯ್ಕೆಮಾಡಿ. ನಿಮ್ಮ ಆಧಾರ್ ಕಾರ್ಡ್ ಸ್ವಲ್ಪ ಸಮಯದ ನಂತರ ವಾಟ್ಸ್ಆ್ಯಪ್ನಲ್ಲಿ ಕಾಣಿಸಿಕೊಳ್ಳುತ್ತದೆ.

