ಬೆಂಗಳೂರು: ನಾಡ ಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ನೋಡಲು ಹೋಗುವವರಿಗೆ ಕೆ.ಎಸ್.ಆರ್.ಟಿ.ಸಿ. ಶಾಕ್ ನೀಡಿದೆ. ಬಸ್ ದರ ಏಕಾಏಕಿ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಬಸ್ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ದರ ಏರಿಕೆಯಾಗಿದೆ. ಟಿಕೆಟ್ ದರ 19 ರೂಪಾಯಿ ಹೆಚ್ಚಳ ಮಾಡಲಾಗಿದೆ.
ದಸರಾ ಹಬ್ಬಕ್ಕೂ ಮುನ್ನ ಬಸ್ ಟಿಕೆಟ್ ದರ 161 ರೂಪಾಯಿ ಇತ್ತು. ಇದೀಗ 19 ರೂಪಾಯಿ ಏರಿಕೆಯಾಗಿದ್ದು, ಬೆಂಗಳೂರು-ಮೈಸೂರು ಬಸ್ ಟಿಕೆಟ್ ದರ 180ಕ್ಕೆ ಏರಿಕೆಯಾಗಿದೆ.
ಇದು ಕೇವಲ ವಿಶೇಷ ಸಾರಿಗೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದ್ದು, 20 ವರ್ಷಗಳಿಂದಲೂ ಹಬ್ಬದ ದಿನಗಳಲ್ಲಿ ಹೆಚ್ಚುವರಿ ಕಾರ್ಯಾಚರಣೆ ವೆಚ್ಚ ಭರಿಸಲು ಈ ದರ ಏರಿಕೆ ಮಾಡಲಾಗುತ್ತಿದೆ. ಬೆಂಗಳೂರು-ಮೈಸೂರು ಮಾರ್ಗದಲ್ಲಿ 20-30 ರೂ. ಹೆಚ್ಚಳವಾಗಿದೆ.
ಇನ್ನೂ ಕೆಎಸ್‌ಆರ್‌ಟಿಸಿ ವೇಗದೂತ, ತಡೆರಹಿತ, ರಾಜಹಂಸ, ಐರಾವತ ಸೇರಿದಂತೆ ಎಲ್ಲಾ ಬಸ್‌ಗಳ ದರ ಏರಿಕೆ ಆಗಿದೆ. ದಸರಾ ಮುಗಿಯುವವರೆಗೂ ದರ ಏರಿಕೆ ಇರಲಿದೆ.
ಹೊಸ ಬಸ್ ಟಿಕೆಟ್ ದರ ಎಷ್ಟಿದೆ?
ಕರ್ನಾಟಕ ಸಾರಿಗೆ ವೇಗದೂತ – 170 ರೂ. ನಿಂದ 190 ರೂ.ಗೆ
ತಡೆ ರಹಿತ ಸಾರಿಗೆ – 210 ರಿಂದ 240 ರೂ.
ರಾಜಾಹಂಸ – 270 ರಿಂದ 290 ರೂ.
ಐರಾವತ – 430 ರಿಂದ 450 ರೂ.
ಐರಾವತ ಕ್ಲಬ್ ಕ್ಲಾಸ್ – 440 ರಿಂದ 460 ರೂ.

