Bengaluru : ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸೋಲದೇವನ ಹಳ್ಳಿಯಲ್ಲಿ ನಡೆದಿದೆ.24 ವರ್ಷದ ಕೀರ್ತನಾ ಸಾವನ್ನಪ್ಪಿರುವ ಯುವತಿ.
ಆಚಾರ್ಯ ಕಾಲೇಜ್ ಮೈದಾನದಲ್ಲಿ ನಡೆಯುತ್ತಿರುವ ಸ್ಯಾಂಡಲ್ವುಡ್ ಪ್ರೀಮಿಯರ್ ಲೀಗ್ ಮ್ಯಾಚ್ ನೋಡಿ ಕೊಂಡು ವಾಪಸ್ ಆಗುತ್ತಿದ್ದ ಗೆಳತಿಯರು, ಬೈಕ್‌ನಲ್ಲಿ ಹೆಬ್ಬಾಳ ಕಡೆಗೆ ಬರುತ್ತಿದ್ದರು. ಈ ವೇಳೆ ಸೋಲದೇವಹನಳ್ಳಿ ಬಳಿ ಮರ ಮುರಿದು ಎರಡು ಬೈಕ್‌ಗಳ ಮೇಲೆ ಬಿದ್ದಿದೆ.
ಬೃಹತ್ ಕೊಂಬೆ ಬಿದ್ದ ರಭಸಕ್ಕೆ ಬೈಕ್‌ನಲ್ಲಿದ್ದ ಕೀರ್ತನಾ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಆಕೆ ಜೊತೆ ಇದ್ದ ಸ್ನೇಹಿತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಆಕೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

