By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಇನ್ನಿಲ್ಲ..!
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಜ್ಯ-Karnataka - ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಇನ್ನಿಲ್ಲ..!

ರಾಜ್ಯ-KarnatakaEntertainmentLatest

ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಇನ್ನಿಲ್ಲ..!

Famous comedian Raju Talikote is no more

Published October 13, 2025
Share
2 Min Read
Raju Talikote Raju Talikote Raju Talikote
SHARE

ವಿಜಯಪುರ: ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ (59) ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ರಾಜು ತಾಳಿಕೋಟೆ ಚಿತ್ರಿಕರಣದಲ್ಲಿ ಭಾಗಿಯಾಗಿದ್ದರು. ಭಾನುವಾರ ರಾತ್ರಿ ಚಿತ್ರೀಕರಣ ಮುಗಿಸಿ ರಾತ್ರಿ 11:59 ರ ವೇಳೆಗೆ ವಿಶ್ರಾಂತಿಯಲ್ಲಿದ್ದಾಗ ಉಸಿರಾಟದ ಸಮಸ್ಯೆಯಾಗಿದೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆ ತರಲಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟೆ ನಗರದಲ್ಲಿ ವಾಸವಾಗಿದ್ದರು. ರಾಜು ತಾಳಿಕೋಟೆಯವರು ಮೊದಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ಅವರು ಕೇವಲ ನಟನಾಗಿರದೇ ತಾಳಿಕೋಟೆಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು.

ಕುಡುಕನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಇವರ ʼಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಬಹಳ ಫೇಮಸ್‌ ಆಗಿದ್ದವು. ಈ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದವು.

ನಿರ್ದೇಶಕ ಯೋಗರಾಜ್ ಭಟ್ ಅವರ ‘ಮನಸಾರೆ’ ಚಿತ್ರದ ಮೂಲಕ ಅವರು ಜನಪ್ರಿಯತೆ ಗಳಿಸಿದರು. ನಂತರ ‘ಪಂಚರಂಗಿ’, ‘ಮತ್ತೊಂದ್ ಮದುವೇನಾ..!’ ಮತ್ತು ‘ಮೈನಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಬಿಗ್‌ ಬಾಸ್‌ ಸೀಸನ್‌ 7ರಲ್ಲಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಅನಾರೋಗ್ಯ ಕಾರಣದಿಂದಾಗಿ ರಾಜು ತಾಳಿಕೋಟೆ ನಾಟಕ ಹಾಗೂ ಸಿನಿಮಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ರಾಜು ತಾಳಿಕೋಟೆಯವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಕಂಬನಿ ಮಿಡಿದಿದೆ.

ಶಿವರಾಜ ತಂಗಡಗಿ ಸಂತಾಪ
ಕನ್ನಡ ರಂಗಭೂಮಿಯ ಜನಪ್ರಿಯ ಕಲಾವಿದ ರಾಜು ತಾಳಿಕೋಟೆ ವರ ನಿಧನದ ಸುದ್ದಿ ತೀವ್ರ ಆಘಾತ ಉಂಟು ಮಾಡಿದೆ, ಅವರ ಈ ಅಕಾಲಿಕ ಸಾವು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗಕ್ಕೆ ಆದ ಬಹುದೊಡ್ಡ ನಷ್ಟ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಂತಾಪ ಸೂಚಿಸಿದ್ದಾರೆ.

ಪ್ರಸ್ತುತ ಅವರು ಧಾರವಾಡ ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನನ್ನೊಂದಿಗೆ ಆತ್ಮೀಯ ಒಡನಾಟ ಇರಿಸಿಕೊಂಡಿದ್ದ ರಾಜು ತಾಳಿಕೋಟೆ ಧಾರವಾಡ ರಂಗಾಯಣವನ್ನು ಹೊಸ ದೃಷ್ಟಿಕೋನದೊಂದಿಗೆ ಕಟ್ಟುತ್ತಾರೆ ಎಂಬ ಭರವಸೆ ಇತ್ತು. ಖಾಸ್ಗತೇಶ್ವರ ನಾಟಕ ಮಂಡಳಿ ಎಂಬ ಕಂಪನಿ ಹೊಂದಿದ್ದ ರಾಜು ತಾಳಿಕೋಟೆ ಅನೇಕ ಜನಪ್ರಿಯ ನಾಟಕಗಳ ಮೂಲಕ ಹೆಸರು ಮಾಡಿದ್ದರು. ಅವರು ನಟಿಸಿದ್ದ ಪಂಚರಂಗಿ, ಮನಸಾರೆ ಚಲನಚಿತ್ರಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು.ಇ

You Might Also Like

ಶೋಭಾ ಕರಂದ್ಲಾಜೆ ಕಾರು ಅಪಘಾತ ಪ್ರಕರಣದಲ್ಲಿ ಇಬ್ಬರು ಚಾಲಕರ ಮೇಲೆ FIR

ಚಿತ್ರದುರ್ಗದಲ್ಲಿ ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ಸಾವು

55 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕವೂ ಬದುಕಿ ಬರಲಿಲ್ಲ ಬೋರ್​ವೆಲ್​ಗೆ ಬಿದ್ದಿದ್ದ ಬಾಲಕ

ಉಗ್ರರಿಂದ ಹತ್ಯೆಯಾದ ಪ್ರವಾಸಿಗರಿಗೆ ಮಾನವ ಸರಪಳಿ ಮಾಡುವ ಮೂಲಕ ಶೃದ್ದಾಂಜಲಿ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ​: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಎನ್​ಐಎ ದಾಳಿ

Share This Article
Facebook Copy Link Print
Previous Article agdghhsrh agdghhsrh agdghhsrh Kerala : ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸುವಾಗ ಅಗ್ನಿಶಾಮಕ ಸಿಬ್ಬಂದಿ ಸೇರಿ ಮೂವರು ಸಾವು
Next Article BSY BSY BSY ಪ್ರಧಾನಿ ಮೋದಿ ಭೇಟಿ ಮಾಡಿ ಮಾಡಿದ ಬಿಎಸ್ವೈ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up