ಬೆಂಗಳೂರು : ಇಡೀ ಸಿಟಿ ಮಂದಿ ಕಾತುರದಿಂದ ಕಾಯ್ತಿದ್ದ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಗಣನೆ ಶುರುವಾಗಿದೆ.. ಅದೆಷ್ಟೋ ವರ್ಷಗಳ ಇತಿಹಾಸ ಹೊಂದಿರೋ ಜಾತ್ರೆ ನೋಡೋದೆ ಕಣ್ಣಿಗೆ ಒಂಥರಾ ಹಬ್ಬ.. ಈಗ ಅಂತಾ ಸುದಿನ ಬಂದೇಬಿಟ್ಟಿದೆ.. ಹೌದು ಬೆಂಗಳೂರಿನ ಬಹು ನಿರೀಕ್ಷಿತ, ಇತಿಹಾಸ ಪ್ರಸಿದ್ಧ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ದಿನಾಂಕ ಫಿಕ್ಸ್ ಆಗಿದೆ.
ನವೆಂಬರ್ 17 ಅಂದ್ರೆ ಕಾರ್ತಿಕ ಸೋಮವಾರ ಶುಭಾರಂಭ ಆಗಲಿದೆ.. ಈ ಭಾರಿಯ ಕಡಲೆಕಾಯಿ ಪರಿಷೆಗೆ ವಿಶೇಷ ಅಂದ್ರೆ 21 ಬಸವಣ್ಣಗಳನ್ನ ಕರೆಸಿ ಅವುಗಳಿಗೆ ಮೇವು ಹಾಕುವ ಮುಖೇನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಆಗಲಿದೆ.
ಅಲ್ಲದೆ ಪ್ಲಾಸ್ಟಿಕ್ ಮುಕ್ತ ಪರಿಷೆ ಕೈಗೊಳ್ಳಲು ಈ ಭಾರಿಯೂ ಪಣತೊಟ್ಟಿರೋದು ಒಂದು ಕಡೆಯಾದ್ರೆ ಎರಡೇ ದಿನಕ್ಕೆ ಸೀಮಿತವಾಗಿದ್ದ ಪರಿಷೆ ಈ ಬಾರಿ ಐದು ದಿನಕ್ಕೆ ಏರಿಕೆ ಮಾಡಿ ಪರಿಷೆಗೆ ಬರೋ ಜನರಿಗೆ ಶುಭಸುದ್ದಿ ಕೊಟ್ಟಿದೆ. ನವಂಬರ್ 17 ರಿಂದ 22 ರವರೆಗೆ ಕಡಲೆಕಾಯಿ ಪರಿಷೆ ನಡೆಯಲಿದೆ.

