ಬೆಳಗಾವಿ : ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಿಲ್ದಾಣವಾಗಿರುವ ಸಿವಿಲ್ ನ್ಯಾಯಾಲಯದ ಆವರಣದಲ್ಲೇ ಮಹಿಳೆಯೊಬ್ಬರ ಮೇಲೆ ನಡೆದ ಮಾರಕಾಸ್ತ್ರ ದಾಳಿ ಸ್ಥಳೀಯರಲ್ಲಿ ಭೀತಿಗೊಳಿಸಿದೆ. ಜಮೀನು ವ್ಯಾಜ್ಯ ಹಿನ್ನೆಲೆ ಈ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ.
ಮಿನಾಕ್ಷಿ ಶೀಂಧೆ ಎಂಬ ಮಹಿಳೆ ಜಮೀನು ಸಂಬಂಧಿತ ವಿವಾದಕ್ಕೆ ಸಂಬಂಧಿಸಿ ಅಥಣಿ ಸಿವಿಲ್ ಕೋರ್ಟ್‌ಗೆ ದಾವೆ ಹೂಡಿದ್ದು, ಮಂಗಳವಾರ ಕೋರ್ಟ್‌ಗೆ ಹಾಜರಾಗಲು ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ. ಬಾಳಾಸಾಹೇಬ ಚೌವ್ಹಾಣ್ ಎಂಬಾತ ಆಕೆಯ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿ.
ಹಲ್ಲೆ ವೇಳೆ ಮಿನಾಕ್ಷಿ ತಲೆ ಹಾಗೂ ಕೈ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, “ನ್ಯಾಯಾಲಯಕ್ಕೆ ನೀನು ಬಂದು ಹಾಜರಾಗುತ್ತಿಯಾ..? ನಿನ್ನ ಬಾಳೋಕೆ ಬಿಡಲ್ಲ!” ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಮಹಿಳೆಯನ್ನು ತಕ್ಷಣ ಸಧ್‌ಅಥಣಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಹಿನ್ನೆಲೆಯಲ್ಲಿ ಅಥಣಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಲಾಗಿದೆ.
ವರದಿ : ಸೂರಜ್ ಕೋರೆ, ಚಿಕ್ಕೋಡಿ ವರದಿಗಾರರು

