ಕುಣಿಗಲ್: ಮೇಕೆದಾಟು ಯೋಜನೆ ಕುರಿತಂತೆ ರಾಜ್ಯದಲ್ಲಿ ಮತ್ತೊಮ್ಮೆ ಚರ್ಚೆ ಚುರುಕುಗೊಂಡಿದೆ. ಯೋಜನೆ ಜಾರಿಗೆ ಸರ್ಕಾರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಕುಣಿಗಲ್‌ನಲ್ಲಿ ಮಾತನಾಡಿದ ಮಾಜಿ ಸಂಸದ ಡಿಕೆ ಸುರೇಶ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಪಾದಯಾತ್ರೆಯಿಂದ ಜನರಲ್ಲಿ ದೊಡ್ಡ ಮಟ್ಟದ ಪ್ರಭಾವ ಮೂಡಿದೆಯೆಂದು ಅವರು ಹೇಳಿದ್ದಾರೆ. “ಮೇಕೆದಾಟು ಪಾದಯಾತ್ರೆಗೆ ಈಗ ಜಯ ಸಿಕ್ಕಿದೆ” ಎಂದು ಡಿಕೆ ಸುರೇಶ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು.
ಯೋಜನೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಡಿಪಿಆರ್ ತಯಾರಿಕೆಗೆ ಅಗತ್ಯವಾದ ಸರ್ವೇ ಕಾರ್ಯಕ್ಕೆ ಅತೀ ಶೀಘ್ರದಲ್ಲೇ ಆದೇಶ ನೀಡಲಾಗುತ್ತದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಜಾರಿಯಾದರೆ ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯಿದೆ.

