ನವದೆಹಲಿ, ಫೆ.1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಕೇಂದ್ರ ಬಜೆಟ್ ಅನ್ನು ಇಂದು ಮಂಡಿಸಿದ್ದು, ವಿವಿಧ ವಲಯಗಳ ಬೆಲೆಗಳ ಮೇಲೆ ಪ್ರಭಾವ ಬೀರುವ ಮಹತ್ವದ ಹಣಕಾಸು ನಿರ್ಣಯಗಳನ್ನು ಪ್ರಕಟಿಸಿದ್ದಾರೆ. ತೆರಿಗೆ ಬದಲಾವಣೆಗಳು, ಕಸ್ಟಮ್ಸ್ ಡ್ಯೂಟಿ ತಿದ್ದುಪಡಿ ಹಾಗೂ ವಲಯವಾರು ಅನುದಾನಗಳ ಮೂಲಕ ಸಾಮಾನ್ಯ ಜನರಿಂದ ಕೈಗಾರಿಕೆಗಳವರೆಗೆ ವ್ಯಾಪಕ ಪರಿಣಾಮ ಬೀರುವ ನಿರೀಕ್ಷೆಯಿದೆ.
ಬಜೆಟ್ ಘೋಷಣೆಗಳ ನಂತರ ದೇಶದಾದ್ಯಂತ ಯಾವ ವಸ್ತುಗಳು ಅಗ್ಗವಾಗಲಿವೆ? ಯಾವವು ದುಬಾರಿಯಾಗಲಿವೆ? ಎಂಬುದರ ಬಗ್ಗೆ ಜನರ ಕುತೂಹಲ ಹೆಚ್ಚಾಗಿದೆ.
ಅಗ್ಗವಾಗುವ ಸಾಧ್ಯತೆಯಿರುವ ವಸ್ತುಗಳು
ಭಾರತದಲ್ಲಿ ತಯಾರಿಸಿದ ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳು
ಇಲೆಕ್ಟ್ರಿಕ್ ವಾಹನಗಳು (EVs)
ಕ್ಯಾನ್ಸರ್ ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳು
17 ಕ್ಯಾನ್ಸರ್ ಔಷಧಿಗಳು ಮತ್ತು 7 ಅಪರೂಪದ ರೋಗಗಳ ಔಷಧಿಗಳಿಗೆ ತೆರಿಗೆ ವಿನಾಯಿತಿ
ಗೃಹ ಸಾಲದ ಬಡ್ಡಿ (ತೆರಿಗೆ ರಿಯಾಯಿತಿ ಮೂಲಕ)
ಮೈಕ್ರೋವೇವ್ ಒವನ್‌ಗಳು, ವಿಮಾನ ಭಾಗಗಳು
ವಿದೇಶಿ ಪ್ರವಾಸ ಪ್ಯಾಕೇಜುಗಳು
ಓವರ್‌ಸೀಸ್ ಟೂರ್ ಪ್ಯಾಕೇಜ್‌ಗಳ ಮೇಲೆ TCS ದರ ಕಡಿತ
ದುಬಾರಿಯಾಗುವ ಸಾಧ್ಯತೆಯಿರುವ ವಸ್ತುಗಳು
ಆಮದು ಮಾಡಿಕೊಳ್ಳುವ ಐಷಾರಾಮಿ ವಾಚುಗಳು ಮತ್ತು ಉಡುಪುಗಳು
ವಿದೇಶದಲ್ಲಿ ತಯಾರಾದ ಕಾರುಗಳು (CBUಗಳು)
ಪ್ರೀಮಿಯಂ ಕಾಸ್ಮೆಟಿಕ್ಸ್ ಮತ್ತು ಪರಿಮಳ ದ್ರವ್ಯಗಳು
ಚಿನ್ನ ಮತ್ತು ಬೆಳ್ಳಿ ಆಭರಣಗಳು
ಐಷಾರಾಮಿ ಮದ್ಯ ಮತ್ತು ಇತರೆ ಲಕ್ಸುರಿ ವಸ್ತುಗಳು
ಮದ್ಯಪ್ರಿಯರಿಗೆ ಶಾಕ್, ವಿದೇಶಯಾತ್ರೆ ಇನ್ಮುಂದೆ ಅಗ್ಗ, AI ಮಿಷನ್ ಕ್ರಾಂತಿ
ದೇಶದಲ್ಲಿ ಏಪ್ರಿಲ್ ನಿಂದ ನೂತನ ಐಟಿ ಕಾಯ್ದೆ ಜಾರಿಗೆ ಬರಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ವಿದೇಶ ಯಾತ್ರೆ ಇನ್ಮುಂದೆ ಅಗ್ಗವಾಗಲಿದೆ. ಐಟಿ ರಿಟರ್ನ್ ಮಾಡಲು ಜುಲೈ 31ರವರೆಗೆ ಅವಕಾಶ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೇ. 100 ರಷ್ಟು ದಂಡ. ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೋಟಾರು ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ. ಶಿಕ್ಷಣ, ಆರೋಗ್ಯ, ಕ್ಷೇತ್ರದಲ್ಲಿ ಶೇ. 2 ರಷ್ಟು TCS ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ಯ ಆರಂಭಿಸಲಾಗುವುದು. ಒನ್ ಪ್ರೊಡಕ್ಟ್ ಒನ್ ಸ್ಟೇಟ್ ಯೋಜನೆ ಆರಂಭಿಸಲಾಗುವುದು, ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲು. ಕ್ರೆಡಿಟ್ ಗ್ಯಾರಂಟಿ ಸಪೋರ್ಟ್ ವ್ಯವಸ್ಥೆ ಜಾರಿ, ಹಣಕಾಸು ಹಂಚಿಕೆಗೆ ಕ್ರೆಡಿಟ್ ಗ್ಯಾರಂಟಿ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಸಾಲದ ನೆರವು ಘೋಷಿಸಲಾಗಿದೆ. ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕೇಂದ್ರೀಯ ಔಷಧಿ ನಿಯಂತ್ರಣವನ್ನು ಜಾರಿಗೆ ತರುತ್ತಿದ್ದೇವೆ. ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆ ಬಲಪಡಿಸಲು ಬಯೋಫಾರ್ಮ್ ಶಕ್ತಿ ಯೋಜನೆ ಘೋಷಿಸಲಾಗಿದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.
AI ಮಿಷನ್ ಮೂಲಕ ದೇಶದಲ್ಲಿ ದೊಡ್ಡ ಕ್ರಾಂತಿ, ವಿದ್ಯಾರ್ಥಿಗಳು, ರೈತರಿಗೆ ಇದರಿಂದ ಅನುಕೂಲವಾಗಲಿದೆ. ಹೊಸದಾಗಿ 3 ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಮಧುಮೇಹ, ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಮಾಡಲಾಗುವುದು, ಪ್ರತಿ ಜಿಲ್ಲೆಗಳಲ್ಲೂ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಎಂದು ಹೇಳಿದ್ದಾರೆ.
ರಕ್ಷಣಾ ವಲಯಕ್ಕೆ ಭಾರಿ ಅನುದಾನ
ಬಜೆಟ್ ಭಾಷಣದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ವಲಯಕ್ಕೆ ₹7.85 ಲಕ್ಷ ಕೋಟಿ ಅನುದಾನ ಘೋಷಿಸಿದ್ದಾರೆ. ಇದು 2025–26ರಲ್ಲಿ ನೀಡಿದ್ದ ₹6.81 ಲಕ್ಷ ಕೋಟಿಗಿಂತ ಹೆಚ್ಚು. ಈ ಅನುದಾನವು ಸೇನಾ ಸಿದ್ಧತೆ, ಆಧುನೀಕರಣ, ರಕ್ಷಣಾ ಪಿಂಚಣಿ ಹಾಗೂ ಸಿಬ್ಬಂದಿ ಕಲ್ಯಾಣಕ್ಕೆ ಬಳಕೆಯಾಗಲಿದೆ ಎಂದು ಬಜೆಟ್ ದಾಖಲೆಗಳು ತಿಳಿಸಿವೆ.
ಒಟ್ಟಾರೆ ಪರಿಣಾಮ
2026ರ ಬಜೆಟ್‌ನಲ್ಲಿ ಆರೋಗ್ಯ, ತಂತ್ರಜ್ಞಾನ, ಇಲೆಕ್ಟ್ರಿಕ್ ವಾಹನಗಳು ಮತ್ತು ಮಧ್ಯಮ ವರ್ಗಕ್ಕೆ ಅನುಕೂಲಕರ ಕ್ರಮಗಳು ಗಮನ ಸೆಳೆದರೆ, ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸುವ ಮೂಲಕ ಸರ್ಕಾರ ಹೆಚ್ಚುವರಿ ಆದಾಯ ಸಂಗ್ರಹಕ್ಕೆ ಮುಂದಾಗಿದೆ.
ಬಜೆಟ್‌ನ ಸಂಪೂರ್ಣ ವಿಶ್ಲೇಷಣೆ, ತಜ್ಞರ ಅಭಿಪ್ರಾಯಗಳು ಮತ್ತು ವಲಯವಾರು ಪರಿಣಾಮಗಳಿಗಾಗಿ ದಿನಪೂರ್ತಿ ಅಪ್ಡೇಟ್‌ಗಳನ್ನು ಗಮನಿಸಬಹುದಾಗಿದೆ.

