ಇಂದು ಕೇಂದ್ರ ಸರ್ಕಾರವು 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು, ಅದಕ್ಕೂ ಮುನ್ನವೇ ಚಿನ್ನ–ಬೆಳ್ಳಿ ದರಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಕಳೆದ ಆರು ವರ್ಷಗಳಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕುಸಿತ ಕಂಡಿರುವುದು ಇದೇ ಮೊದಲ ಬಾರಿ ಎನ್ನಲಾಗುತ್ತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆ ಹಾಗೂ ಬಜೆಟ್‌ಗೂ ಮುನ್ನದ ಅಂದಾಜುಗಳ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ತೀವ್ರವಾಗಿ ಇಳಿಕೆಯಾಗಿದ್ದು, 24 ಕ್ಯಾರಟ್ ಚಿನ್ನದ ದರವು 10 ಗ್ರಾಂಗೆ ಸುಮಾರು ₹9,000 ಇಳಿಕೆಯಾಗಿದೆ. ಇದರಿಂದ ಆಭರಣ ಖರೀದಿಗೆ ಮುಂದಾಗಿರುವ ಗ್ರಾಹಕರಲ್ಲಿ ಸಂತಸ ಮೂಡಿದೆ.
ಇದಕ್ಕೂ ಜತೆಗೆ ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ ₹17,000 ಇಳಿಕೆ ದಾಖಲಾಗಿದೆ. ಬೆಳ್ಳಿ ದರದ ಈ ಕುಸಿತವೂ ವ್ಯಾಪಾರಿಗಳು ಹಾಗೂ ಹೂಡಿಕೆದಾರರ ಗಮನ ಸೆಳೆದಿದೆ.
ವಿಶ್ಲೇಷಕರ ಪ್ರಕಾರ, ಬಜೆಟ್‌ನಲ್ಲಿ ಆಮದು ಸುಂಕ, ತೆರಿಗೆ ನೀತಿ ಹಾಗೂ ಹಣಕಾಸು ಕೊರತೆ ಕುರಿತ ಘೋಷಣೆಗಳ ಮೇಲೆ ಚಿನ್ನ–ಬೆಳ್ಳಿ ದರಗಳ ಮುಂದಿನ ದಿಕ್ಕು ಅವಲಂಬಿತವಾಗಿರಲಿದೆ. ಬಜೆಟ್ ನಂತರ ಹಳದಿ ಲೋಹದ ದರ ಮತ್ತಷ್ಟು ಇಳಿಕೆಯಾಗುತ್ತದೆಯೇ ಅಥವಾ ಮತ್ತೆ ಏರಿಕೆಯಾಗುತ್ತದೆಯೇ? ಎಂಬ ಪ್ರಶ್ನೆ ಇದೀಗ ಮಾರುಕಟ್ಟೆಯಲ್ಲಿ ಚರ್ಚೆಯ ವಿಷಯವಾಗಿದೆ.
ಒಟ್ಟಿನಲ್ಲಿ, ಬಜೆಟ್‌ಗೂ ಮುನ್ನವೇ ದರ ಕುಸಿತ ಕಂಡಿರುವುದು ಆಭರಣ ಪ್ರಿಯರಿಗೆ ತಾತ್ಕಾಲಿಕವಾದರೂ ದೊಡ್ಡ ರಿಲೀಫ್ ನೀಡಿದೆ.

