ಬೆಂಗಳೂರು, ಫೆ. 5: ಬುಧವಾರದಂದು ಚಿನ್ನ–ಬೆಳ್ಳಿ ದರದಲ್ಲಿ ಬರೋಬ್ಬರಿ 6,600 ರೂಪಾಯಿ ಏರಿಕೆಯಾಗುವ ಮೂಲಕ ಗ್ರಾಹಕರಲ್ಲಿ ಆತಂಕ ಮೂಡಿಸಿದ್ದ ಮಾರುಕಟ್ಟೆ, ಇಂದು ಮತ್ತೆ ತೀವ್ರ ಇಳಿಕೆಗೆ ಸಾಕ್ಷಿಯಾಗಿದೆ. ಗುರುವಾರವಾದ ಫೆಬ್ರವರಿ 5ರಂದು ಚಿನ್ನದ ಬೆಲೆಯಲ್ಲಿ ಭರ್ಜರಿ 5,020 ರೂಪಾಯಿ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯೂ 3 ಲಕ್ಷ ರೂಪಾಯಿಗೆ ಇಳಿದಿದೆ.
ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ ಒಂದೇ ದಿನದಲ್ಲಿ 502 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಂಗೆ 5,020 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 15,442 ರೂಪಾಯಿಗೆ ತಲುಪಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ 1,54,420 ರೂಪಾಯಿಯಾಗಿದೆ.
ಅದೇ ರೀತಿ 22 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದ್ದು, ಒಂದು ಗ್ರಾಂಗೆ 460 ರೂಪಾಯಿ ಹಾಗೂ 10 ಗ್ರಾಂಗೆ 4,600 ರೂಪಾಯಿ ಇಳಿಕೆಯಾಗಿದೆ. ಇದರಿಂದ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,41,550 ರೂಪಾಯಿಗೆ ಕುಸಿದಿದೆ.
ಇನ್ನು ಬೆಳ್ಳಿ ಬೆಲೆಯಲ್ಲೂ ಬದಲಾವಣೆ ಕಂಡುಬಂದಿದ್ದು, ಇಂದು ಒಂದು ಗ್ರಾಂಗೆ 20 ರೂಪಾಯಿ ಇಳಿಕೆಯಾಗಿದ್ದು, ಗ್ರಾಂ ಬೆಲೆ 300 ರೂಪಾಯಿಯಾಗಿದೆ. ಕಿಲೋಗ್ರಾಂ ಬೆಲೆಯಲ್ಲಿ 20 ಸಾವಿರ ರೂಪಾಯಿ ಇಳಿಕೆಯಾಗಿ, ಕೆಜಿಗೆ 3,00,000 ರೂಪಾಯಿ ನಿಗದಿಯಾಗಿದೆ.
ಚಿನ್ನ–ಬೆಳ್ಳಿ ದರದಲ್ಲಿ ನಿರಂತರ ಏರಿಳಿತ ಕಂಡುಬರುತ್ತಿರುವುದು ಹೂಡಿಕೆದಾರರು ಹಾಗೂ ಗ್ರಾಹಕರಲ್ಲಿ ಗೊಂದಲ ಉಂಟುಮಾಡುತ್ತಿದೆ.

