By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ತಾಯಿಯ ಕಣ್ಣೆದುರೇ ರೌಡಿಶೀಟರ್ ಪವನ್ ಕುಮಾರ್ ಹತ್ಯೆ: ಥಣಿಸಂದ್ರದಲ್ಲಿ ರಿವೇಂಜ್ ಮರ್ಡರ್ ಶಂಕೆ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಜ್ಯ-Karnataka - ತಾಯಿಯ ಕಣ್ಣೆದುರೇ ರೌಡಿಶೀಟರ್ ಪವನ್ ಕುಮಾರ್ ಹತ್ಯೆ: ಥಣಿಸಂದ್ರದಲ್ಲಿ ರಿವೇಂಜ್ ಮರ್ಡರ್ ಶಂಕೆ

ರಾಜ್ಯ-KarnatakaLatestಬೆಂಗಳೂರು-Bengaluru

ತಾಯಿಯ ಕಣ್ಣೆದುರೇ ರೌಡಿಶೀಟರ್ ಪವನ್ ಕುಮಾರ್ ಹತ್ಯೆ: ಥಣಿಸಂದ್ರದಲ್ಲಿ ರಿವೇಂಜ್ ಮರ್ಡರ್ ಶಂಕೆ

Rowdy sheeter Pawan Kumar murdered in front of his mother

Published February 26, 2026
Share
2 Min Read
sgdshh sgdshh sgdshh
SHARE

ಬೆಂಗಳೂರು, ಫೆಬ್ರವರಿ 26: ರಾಜಧಾನಿಯ ಉತ್ತರ ಭಾಗದಲ್ಲಿ ಬೆಚ್ಚಿಬೀಳಿಸುವಂತಹ ಘಟನೆ ನಡೆದಿದೆ. ನಗರದ ಥಣಿಸಂದ್ರ ವ್ಯಾಪ್ತಿಯ ಅಮರಜ್ಯೋತಿ ಲೇಔಟ್‌ನಲ್ಲಿ ರೌಡಿಶೀಟರ್ ಪವನ್ ಕುಮಾರ್ (25) ಅವರನ್ನು ಆತನ ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ನಡೆದ ಕಪಿಲ ಎಂಬಾತನ ಕೊಲೆಗೆ ಸೇಡಿಗಾಗಿ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ ಪವನ್ ಕುಮಾರ್ ಬುಧವಾರ ಸಂಜೆ ಮನೆಗೆ ಆಗಮಿಸಿದ ವೇಳೆ, ಮೂರು ಬೈಕ್‌ಗಳಲ್ಲಿ ಬಂದಿದ್ದ ಆರು ಮಂದಿ ಆರೋಪಿಗಳು ದಾಳಿ ನಡೆಸಿದ್ದಾರೆ. ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು, ಪವನ್ ಮನೆ ಮುಂದೆ ನಿಂತ ಕ್ಷಣದಲ್ಲೇ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮಗನನ್ನು ರಕ್ಷಿಸಲು ತಾಯಿ ಕೋಮಲ ಕಣ್ಣೀರು ಹಾಕುತ್ತ ಸಹಾಯಕ್ಕಾಗಿ ಗೋಗರೆದರೂ, ಆರೋಪಿಗಳ ಕ್ರೌರ್ಯಕ್ಕೆ ಅಡ್ಡಿಯಾಗಲು ಸಾಧ್ಯವಾಗಲಿಲ್ಲ. ತಾಯಿಯ ಕಣ್ಣೆದುರೇ ನಡೆದ ಈ ಭೀಕರ ಹತ್ಯೆ ಸ್ಥಳೀಯರಲ್ಲಿ ಭೀತಿಯನ್ನು ಉಂಟುಮಾಡಿದೆ.

ಘಟನೆ ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.

ಪವನ್ ಕುಮಾರ್ ಹಿಂದೆ ನಡೆದಿದ್ದ ಕಪಿಲ ಕೊಲೆ ಪ್ರಕರಣದಲ್ಲಿ A5 ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದನು. ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದನು. ಮಗನು ಸರಿದಾರಿಗೆ ಬರಲೆಂದು ಕುಟುಂಬದವರು ಒಂದೂವರೆ ತಿಂಗಳ ಹಿಂದೆ ಮನೆ ಸಮೀಪವೇ ಬೇಕರಿ ಅಂಗಡಿ ಆರಂಭಿಸಲು ಸಹಾಯ ಮಾಡಿದ್ದರು ಎಂದು ತಿಳಿದುಬಂದಿದೆ.

ಜುಲೈ 11, 2023ರಂದು ಡಿಜೆ ಹಳ್ಳಿ ಬಳಿ ಕಪಿಲ ಎಂಬಾತನನ್ನು ಇದೇ ರೀತಿಯಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಆ ಪ್ರಕರಣದಲ್ಲಿಯೇ ಪವನ್ ಕುಮಾರ್ ಆರೋಪಿಯಾಗಿದ್ದನು. ಇದೀಗ ಅದೇ ಮಾದರಿಯಲ್ಲಿ ಪವನ್‌ನ ಹತ್ಯೆ ನಡೆದಿರುವುದರಿಂದ ಇದು ರಿವೇಂಜ್ ಮರ್ಡರ್ ಆಗಿರಬಹುದೆಂಬ ಅನುಮಾನ ಗಟ್ಟಿಯಾಗಿದೆ.

ಕಪಿಲನ ತಮ್ಮ ಪ್ರೇಮ್ ಸೇರಿದಂತೆ ಕೆಲವರ ಮೇಲೆ ಪೊಲೀಸರಿಗೆ ಅನುಮಾನವಿದ್ದು, ಎಲ್ಲಾ ಕೋಣಗಳಿಂದ ತನಿಖೆ ಮುಂದುವರಿದಿದೆ. ನಗರದಲ್ಲಿ ಮತ್ತೆ ಗ್ಯಾಂಗ್ ವೈಷಮ್ಯದ ನೆರಳು ಮೂಡಿದಂತಾಗಿದೆ.

You Might Also Like

55 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕವೂ ಬದುಕಿ ಬರಲಿಲ್ಲ ಬೋರ್​ವೆಲ್​ಗೆ ಬಿದ್ದಿದ್ದ ಬಾಲಕ

ಗೇಮಿಂಗ್ ಆ್ಯಪ್‌ ಅಕ್ರಮ ಹಣ ವರ್ಗಾವಣೆ ; ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಇಡಿ ವಶಕ್ಕೆ

ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ – ಹೆಚ್.ಡಿ. ಕುಮಾರಸ್ವಾಮಿ

ಸಾವು- ನೋವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ : ಸಿಎಂ ಸಿದ್ದರಾಮಯ್ಯ

ವಿಪಕ್ಷ ನಾಯಕನಿಗೆ ರಕ್ಷಣೆ ಕೊಡದ ಗೃಹಸಚಿವರು ದಲಿತರು ಬಡವರಿಗೆ ಹೇಗೆ ರಕ್ಷಣೆ ಕೊಡ್ತಾರೆ..? : ಪಿ.ರಾಜೀವ

TAGGED:Rowdy Sheeter
Share This Article
Facebook Copy Link Print
Previous Article CJ Roy Suicide CJ Roy Suicide CJ Roy Suicide C.J. ರಾಯ್ ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟಿತ್ತಾ 500 ಕೋಟಿ ರೂ. ಹವಾಲಾ ವ್ಯವಹಾರ..?
Next Article Eshwar Khandre Eshwar Khandre Eshwar Khandre ಬೆಂಗಳೂರಲ್ಲಿ ವಾಯು ಮಾಲಿನ್ಯ ಕುರಿತು ಶೀಘ್ರವೇ 28 ಶಾಸಕರೊಂದಿಗೆ ಸಭೆ : ಈಶ್ವರ ಖಂಡ್ರೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sfdagdghgh sfdagdghgh sfdagdghgh
ಅಂಬೇಡ್ಕರ್ ಜಯಂತಿ : ಬಳ್ಳಾರಿಯಲ್ಲಿ ಅದ್ದೂರಿ ಕಾರ್ಯಕ್ರಮ, ಕಲಾ ತಂಡಗಳ ಭವ್ಯ ಮೆರವಣಿಗೆ
ಬಳ್ಳಾರಿ-Ballary
April 14, 2026
asha bhosle asha bhosle asha bhosle
ಆಶಾ ಭೋಸ್ಲೆ ನಿಧನದ ಸುದ್ದಿ ಮಾಡದಂತೆ ಪಾಕ್ ನ್ಯೂಸ್ ಚಾನೆಲ್​ಗಳಿಗೆ ನೋಟೀಸ್
ವಿದೇಶ-International Latest
April 14, 2026
Varanasi
ಸಿನಿಮಾ ಲೀಕ್ ಭೀತಿ: ‘ವಾರಣಾಸಿ’ ಚಿತ್ರತಂಡಕ್ಕೆ ತಲೆನೋವು
Entertainment
April 14, 2026
gsdghh gsdghh gsdghh
ರಾಜ್ಯಕ್ಕಾಗಮಿಸುತ್ತಿರುವ ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ನಾಲ್ವಡಿ ಒಡೆಯರ್ ಮಾದರಿಯ ವಿಶೇಷ ಪೇಟ
ರಾಜ್ಯ-Karnataka
April 14, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up