By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಇರಾನ್ ರಾಜಧಾನಿ ತಹರಾನ್ ಮೇಲೆ ಇಸ್ರೇಲ್ ‘ಪ್ರಿವೆಂಟಿವ್ ಅಟ್ಯಾಕ್’ : ಸರಣಿ ಸ್ಫೋಟ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ವಿದೇಶ-International - ಇರಾನ್ ರಾಜಧಾನಿ ತಹರಾನ್ ಮೇಲೆ ಇಸ್ರೇಲ್ ‘ಪ್ರಿವೆಂಟಿವ್ ಅಟ್ಯಾಕ್’ : ಸರಣಿ ಸ್ಫೋಟ

ವಿದೇಶ-InternationalLatest

ಇರಾನ್ ರಾಜಧಾನಿ ತಹರಾನ್ ಮೇಲೆ ಇಸ್ರೇಲ್ ‘ಪ್ರಿವೆಂಟಿವ್ ಅಟ್ಯಾಕ್’ : ಸರಣಿ ಸ್ಫೋಟ

Israel Announces 'Preventive Strike' On Iran, Explosions Heard In Tehran

Published February 28, 2026
Share
2 Min Read
Iran 01 Iran 01 Iran 01
SHARE

ತಹರಾನ್‌ : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗುತ್ತಿದೆ. ಇಸ್ರೇಲ್ ಇರಾನ್ ವಿರುದ್ಧ ನೇರ ಮಿಲಿಟರಿ ಕಾರ್ಯಾಚರಣೆ ಆರಂಭಿಸಿರುವುದಾಗಿ ಶನಿವಾರ ಅಧಿಕೃತವಾಗಿ ಘೋಷಿಸಿದೆ. ಇಸ್ರೇಲ್ ರಕ್ಷಣಾ ಸಚಿವರು ನೀಡಿದ ಮಾಹಿತಿಯ ಪ್ರಕಾರ, ಇದು “ಪ್ರಿವೆಂಟಿವ್ ಅಟ್ಯಾಕ್” (ಎಚ್ಚರಿಕೆ ಕ್ರಮವಾಗಿ ದಾಳಿ) ಆಗಿದ್ದು, ಇರಾನ್‌ನ ಭವಿಷ್ಯ ದಾಳಿಗಳನ್ನು ತಡೆಯುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ದಾಳಿಯ ಬೆನ್ನಲ್ಲೇ ಇರಾನ್ ರಾಜಧಾನಿ ತಹರಾನ್ ನಲ್ಲಿ ಭೀಕರ ಸ್ಫೋಟಗಳು ಸಂಭವಿಸಿದವು. ಪ್ರತ್ಯಕ್ಷದರ್ಶಿಗಳ ಪ್ರಕಾರ, ನಗರದ ಕೇಂದ್ರ ಭಾಗದಲ್ಲಿ ಕನಿಷ್ಠ ಮೂರು ದೊಡ್ಡ ಸ್ಫೋಟಗಳು ಕೇಳಿಬಂದಿದ್ದು, ಇಡೀ ನಗರವೇ ಬೆಚ್ಚಿಬಿದ್ದಿದೆ. ತಸ್ನಿಮ್ ಸುದ್ದಿಸಂಸ್ಥೆ ವರದಿಯಂತೆ, ಉತ್ತರ ತಹರಾನ್‌ನ ಸೈಯದ್ ಖಾಂದಾನ್ ಪ್ರದೇಶದಲ್ಲಿಯೂ ಮತ್ತೆರಡು ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ತಿಳಿಸಿದೆ. ಆದರೆ ಸಾವು-ನೋವುಗಳ ಬಗ್ಗೆ ಇರಾನ್ ಸರ್ಕಾರ ಇನ್ನೂ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.

ಇತ್ತ, ಇಸ್ರೇಲ್ ತನ್ನ ನಾಗರಿಕರ ಸುರಕ್ಷತೆಗಾಗಿ ದೇಶಾದ್ಯಂತ ‘ಪ್ರೊಆಕ್ಟಿವ್ ಅಲರ್ಟ್’ ಜಾರಿಗೊಳಿಸಿದೆ. ಇರಾನ್‌ನಿಂದ ಪ್ರತಿದಾಳಿ ಸಾಧ್ಯತೆ ಇರುವುದರಿಂದ ಕ್ಷಿಪಣಿ ದಾಳಿಗಳ ಎಚ್ಚರಿಕೆಗೆ ಸೈರನ್‌ಗಳು ಮೊಳಗುತ್ತಿವೆ. ಜನರು ತಕ್ಷಣವೇ ಬಂಕರ್‌ಗಳು ಅಥವಾ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸರ್ಕಾರ ಸೂಚನೆ ನೀಡಿದೆ.

ಈ ದಾಳಿ ನಡೆದಿರುವ ಸಮಯವೂ ಗಮನಾರ್ಹವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಕಾರ್ಯಕ್ರಮದ ಕುರಿತ ಮಾತುಕತೆಗಳು ಜಿನೀವಾ ನಲ್ಲಿ ಇತ್ತೀಚೆಗೆ ನಡೆದಿದ್ದು, ಮೂರನೇ ಹಂತದ ಚರ್ಚೆಗಳು ಗುರುವಾರ ಮುಕ್ತಾಯಗೊಂಡಿದ್ದವು. ನಾಲ್ಕನೇ ಹಂತದ ಮಾತುಕತೆ ನಡೆಯಬೇಕಿದ್ದ ಸಂದರ್ಭದಲ್ಲಿ ಈ ದಾಳಿ ಸಂಭವಿಸಿರುವುದು ಶಾಂತಿ ಪ್ರಯತ್ನಗಳಿಗೆ ದೊಡ್ಡ ಹೊಡೆತವಾಗಬಹುದು ಎನ್ನಲಾಗುತ್ತಿದೆ.

ಇದಕ್ಕೂ ಮೊದಲು ಡೊನಾಲ್ಡ್ ಟ್ರಂಪ್ ಇರಾನ್ ಅನ್ನು “ಅತ್ಯಂತ ಕಠಿಣ ಮತ್ತು ಅಪಾಯಕಾರಿ ದೇಶ” ಎಂದು ಕರೆಯಿದ್ದರು. ಅಲ್ಲದೆ, ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ಇಸ್ರೇಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಅನಿವಾರ್ಯವಲ್ಲದ ಸಿಬ್ಬಂದಿಯನ್ನು ತೆರವುಗೊಳಿಸಲು ಅನುಮತಿ ನೀಡಿತ್ತು. ಈ ಕ್ರಮವೇ ಇತ್ತೀಚಿನ ಬೆಳವಣಿಗೆಗಳ ಮುನ್ಸೂಚನೆಯಾಗಿತ್ತೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಪಶ್ಚಿಮ ಏಷ್ಯಾದ ರಾಜಕೀಯ ಸಮತೋಲನದ ಮೇಲೆ ಈ ಬೆಳವಣಿಗೆ ಗಂಭೀರ ಪರಿಣಾಮ ಬೀರಲಿದ್ದು, ಜಾಗತಿಕ ಸಮುದಾಯವು ಆತಂಕದಿಂದ ಪರಿಸ್ಥಿತಿಯನ್ನು ಗಮನಿಸುತ್ತಿದೆ.

You Might Also Like

ನೆಟ್​​ಫ್ಲಿಕ್ಸ್ ಮೂಲಕ ಒಟಿಟಿಗೆ ಲಗ್ಗೆಯಿಟ್ಟ ‘ಧುರಂಧರ್’, ಕನ್ನಡಿಗರಿಗೆ ಮಾತ್ರ ನಿರಾಸೆ

ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ತಿಮ್ಮಪ್ಪನ ದರ್ಶನ ಪಡೆದ ಆರ್‌ಸಿಬಿ ಆಟಗಾರರು

ಕಾಪಿರೈಟ್ ಕೇಸ್ : ವಿಚಾರಣೆಗೆ ಹಾಜರಾದ ನಟ ರಕ್ಷಿತ್ ಶೆಟ್ಟಿ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ ಕೊಡ್ತಾರಾ..?

ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ ಗೌರವ; ಅವಾರ್ಡ್ ಬಳಿಕ ಕುಟುಂಬದೊಂದಿಗೆ ಔತಣಕೂಟದಲ್ಲಿ ಭಾಗಿ

TAGGED:IsraelPreventive Striketehran
Share This Article
Facebook Copy Link Print
Previous Article Bel 1 Bel 1 Bel 1 ಬೆಳಗಾವಿಯಲ್ಲಿ ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು
Next Article Bel 2 Bel 2 Bel 2 ಸಾಲ ತೀರಿಸದಿದ್ದಕ್ಕೆ ಮನೆ ಸೀಜ್ ಮಾಡಿದ ಫೈನಾನ್ಸ್ ಕಂಪನಿ, ಹಸುಗೂಸು ಸಮೇತ ಬೀದಿಗೆ ಬಿದ್ದ ಕುಟುಂಬ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Dhurandar Dhurandar Dhurandar
₹3,000 ಕೋಟಿ ಗಡಿ ದಾಟಿದ ‘ಧುರಂದರ್’ ಫ್ರಾಂಚೈಸಿ : ಐತಿಹಾಸಿಕ ಸಾಧನೆ
ಬಾಲಿವುಡ್​ - Bollywood
April 15, 2026
CBSC CBSC CBSC
CBSE 10ನೇ ತರಗತಿಯ ಫಲಿತಾಂಶ ಪ್ರಕಟ
ರಾಷ್ಟ್ರೀಯ-National
April 15, 2026
Adichunchanagiri Adichunchanagiri Adichunchanagiri
ಆದಿಚುಂಚನಗಿರಿಯಲ್ಲಿ ಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ
ರಾಜ್ಯ-Karnataka
April 15, 2026
Samrat Choudhary Samrat Choudhary Samrat Choudhary
ಬಿಹಾರದಲ್ಲಿ ಹೊಸ ಪರ್ವ : ಮೊದಲ ಬಿಜೆಪಿ ಸಿಎಂ ಆಗಿ ಸಾಮ್ರಾಟ್ ಚೌಧರಿ ಪ್ರಮಾಣ ವಚನ
ರಾಷ್ಟ್ರೀಯ-National
April 15, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up