ಬೆಂಗಳೂರು: LPG ಸಿಲಿಂಡರ್ ದರ ಏರಿಕೆಯಿಂದಾಗಿ ನಗರದಲ್ಲಿ ಸಿಲಿಂಡರ್ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶ್ರೀರಾಂಪುರದ ಬಳಿ ಮನೆಗಳಿಗೆ ಸಿಲಿಂಡರ್ ವಿತರಣೆ ಮಾಡುತ್ತಿದ್ದ ವೇಳೆ ಮೂರು LPG ಸಿಲಿಂಡರ್‌ಗಳನ್ನು ಕಳ್ಳರು ಕದ್ದು ಪರಾರಿಯಾದ ಘಟನೆ ನಡೆದಿದೆ.
ರಾಜಾಜಿನಗರದ ರಾಮ್ ಏಜೆನ್ಸಿಸ್‌ನಿಂದ ಸಿಲಿಂಡರ್ ವಿತರಣೆ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಏಜೆನ್ಸಿಯ ಸಿಬ್ಬಂದಿ ಮನೆಗಳಿಗೆ ಸಿಲಿಂಡರ್ ನೀಡಲು ಹೋಗಿದ್ದ ಸಮಯದಲ್ಲಿ ಆಟೋದಲ್ಲಿ ಇರಿಸಿದ್ದ ಮೂರು ಸಿಲಿಂಡರ್‌ಗಳನ್ನು ದುಷ್ಕರ್ಮಿಗಳು ಕದ್ದುಕೊಂಡು ಪರಾರಿಯಾಗಿದ್ದಾರೆ.
ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಕಾರಣ ಕಳ್ಳರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಸಿಲಿಂಡರ್ ಕೊರತೆ ಎದುರಿಸುತ್ತಿರುವ ಸಮಯದಲ್ಲೇ ಈ ರೀತಿಯ ಕಳ್ಳತನಗಳು ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಈ ಬಗ್ಗೆ ಮಾತನಾಡಿದ ಏಜೆನ್ಸಿ ಪ್ರತಿನಿಧಿ ರಾಜು, “ಬೆಳಗ್ಗೆ ನಮ್ಮ ಸಿಬ್ಬಂದಿ ಮನೆಗಳಿಗೆ ಸಿಲಿಂಡರ್ ಕೊಡಲು ಹೋಗಿದ್ದರು. ಶ್ರೀರಾಂಪುರದಲ್ಲಿ ಆಟೋ ನಿಲ್ಲಿಸಿ ಮನೆಗೆ ಸಿಲಿಂಡರ್ ಹಾಕಲು ಹೋಗಿದ್ದಾಗ, ಆಟೋದಲ್ಲಿದ್ದ ಮೂರು ಸಿಲಿಂಡರ್‌ಗಳನ್ನು ಯಾರೋ ಕದ್ದು ಪರಾರಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಒಂದು ಕಡೆ ಸಿಲಿಂಡರ್ ಸಿಗದೆ ಜನರು ಪರದಾಡುತ್ತಿರುವಾಗ, ಇನ್ನೊಂದು ಕಡೆ ಸಿಲಿಂಡರ್ ಕಳ್ಳತನವಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಸಿಲಿಂಡರ್ ಅಭಾವದಿಂದ ಈ ರೀತಿಯ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

