ನವದೆಹಲಿ, ಮಾ. 25: ಕಾಂಗ್ರೆಸ್ ನಾಯಕಿ Sonia Gandhi ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದರಿಂದ, ವಿಪಕ್ಷ ನಾಯಕ Rahul Gandhi ಅವರು ತಮ್ಮ ಕೇರಳ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಮಂಗಳವಾರ (ಮಾ.24) ರಾತ್ರಿ Sonia Gandhi ಅವರು ಆರೋಗ್ಯ ಸಮಸ್ಯೆಯಿಂದ Sir Ganga Ram Hospital ನಲ್ಲಿ ದಾಖಲಾಗಿದ್ದಾರೆ. ಈ ಹಿನ್ನೆಲೆ Rahul Gandhi ಅವರು ಕೇರಳದ Kozhikode ಪ್ರವಾಸವನ್ನು ರದ್ದುಪಡಿಸಿದ್ದಾರೆ. ಅವರ ಬದಲಿಗೆ ಎಐಸಿಸಿ ಅಧ್ಯಕ್ಷ Mallikarjun Kharge ಅವರು ಭಾಗವಹಿಸಲಿದ್ದಾರೆ.
ಇಂದು (ಮಾ.25) Rahul Gandhi ಅವರು Kozhikode ಗೆ ತೆರಳಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ವತಿಯಿಂದ ನಡೆಯಲಿದ್ದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಬೇಕಿತ್ತು. ಸಂಜೆ 4:30ರ ಸುಮಾರಿಗೆ ಕಾರ್ಯಕ್ರಮ ನಿಗದಿಯಾಗಿತ್ತು.
ಹವಾಮಾನ ಬದಲಾವಣೆಯಿಂದಾಗಿ Sonia Gandhi ಅವರಿಗೆ ಅಸ್ವಸ್ಥತೆ ಉಂಟಾಗಿದ್ದು, ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

