ವಿಜಯನಗರ: ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿ ಚಿನ್ನದ ಪದಕ ಘೋಷಿಸಲಾಗಿದೆ. ಉತ್ತಮ ಸೇವೆ ಹಾಗೂ ಕर्तವ್ಯನಿಷ್ಠತೆಗೆ ಈ ಗೌರವ ದೊರೆತಿದೆ.
ಹರಪನಹಳ್ಳಿ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್, ಹೂವಿನ ಹಡಗಲಿ ಪೊಲೀಸ್ ಠಾಣೆಯ ಸಿಪಿಐ ದೀಪಕ್ ಬೂಸರೆಡ್ಡಿ, ಹೊಸಪೇಟೆಯ ಟಿಬಿ ಡ್ಯಾಂ ಪಿಎಸ್‌ಐ ಕೊಡಂಡಪಾಣಿ ಹಾಗೂ ಹರಪನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಆನಂದ್ ಅವರಿಗೆ ಈ ಪ್ರತಿಷ್ಠಿತ ಚಿನ್ನದ ಪದಕ ಲಭಿಸಿದೆ.
ಪದಕ ಪಡೆದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮುಂದಿನ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ ನಡೆಯಲಿದೆ.

