ನವದೆಹಲಿ, ಏಪ್ರಿಲ್ 08: ಇರಾನ್ ಮತ್ತು ಅಮೇರಿಕಾ ನಡುವೆ ಕದನ ವಿರಾಮ ಘೋಷಣೆಗೊಂಡಿದ್ದರೂ, ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ತುರ್ತು ಎಚ್ಚರಿಕೆ ನೀಡಿದೆ.
ಈ ಮೊದಲು “ಎಲ್ಲಿದ್ದೀರೋ ಅಲ್ಲೇ ಇರಿ” ಎಂದು ಸೂಚಿಸಿದ್ದ ರಾಯಭಾರ ಕಚೇರಿ, ಈಗ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು “ತಕ್ಷಣ ಇರಾನ್ ದೇಶವನ್ನು ತೊರೆಯಿರಿ” ಎಂದು ಸೂಚನೆ ನೀಡಿದೆ.
ಇದಲ್ಲದೆ, ರಾಯಭಾರ ಕಚೇರಿಯ ಅನುಮತಿಯಿಲ್ಲದೆ ಯಾವುದೇ ಅಂತರರಾಷ್ಟ್ರೀಯ ಭೂ ಗಡಿಗಳನ್ನು ದಾಟಲು ಪ್ರಯತ್ನಿಸಬಾರದು ಎಂದು ಕಟ್ಟುನಿಟ್ಟಾಗಿ ಎಚ್ಚರಿಸಲಾಗಿದೆ.
ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಯಭಾರ ಕಚೇರಿ ಸಹಾಯವಾಣಿ ಸಂಖ್ಯೆಗಳನ್ನೂ ಪ್ರಕಟಿಸಿದೆ:
+989128109115, +989128109109, +989128109102, +989932179359
ಹಾಗೂ ಇಮೇಲ್ ವಿಳಾಸ: cons.tehran@mea.gov.in
ಈಗಾಗಲೇ ಅಮೇರಿಕಾ ಮತ್ತು ಇರಾನ್ ನಡುವೆ ಎರಡು ವಾರಗಳ ಕಾಲ ಕದನ ವಿರಾಮ ಜಾರಿಯಲ್ಲಿದೆ. ಆದರೂ ಏಕಾಏಕಿ ಬಂದಿರುವ ಈ ಸೂಚನೆ ಭಾರತೀಯರಲ್ಲಿ ಆತಂಕ ಮೂಡಿಸಿದೆ.

