ಹೈದರಾಬಾದ್, ಏಪ್ರಿಲ್ 08: Allu Arjun ಅವರ 44ನೇ ಹುಟ್ಟುಹಬ್ಬದ ಪ್ರಯುಕ್ತ ಬಹು ನಿರೀಕ್ಷಿತ ಹೊಸ ಚಿತ್ರದ ಟೈಟಲ್ ಹಾಗೂ ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆಗೊಂಡಿದೆ. Atlee ನಿರ್ದೇಶನದ ಈ ಸಿನಿಮಾಕ್ಕೆ ತಾತ್ಕಾಲಿಕವಾಗಿ AA22xA6 ಎಂದು ಹೆಸರಿಡಲಾಗಿದ್ದರೂ, ಇದೀಗ ‘ರಾಕಾ’ ಎಂಬ ಶೀರ್ಷಿಕೆ ಅಧಿಕೃತವಾಗಿದೆ. ಪೋಸ್ಟರ್ ಬಿಡುಗಡೆಗೂಡೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಚಿತ್ರತಂಡ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದು, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ಸೂಚನೆ ನೀಡಿದೆ. “ಮಿತಿಗಳನ್ನು ಮೀರಿದ ದೃಷ್ಟಿಕೋನಕ್ಕೆ ಸಿದ್ಧರಾಗಿ” ಎಂಬ ಟ್ಯಾಗ್‌ಲೈನ್ ಚಿತ್ರದ ವಿಭಿನ್ನತೆಯನ್ನು ಸೂಚಿಸುತ್ತದೆ.
ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ವಿಭಿನ್ನ ಮತ್ತು ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದೈತ್ಯಾಕಾರದ ಕೈಗಳು, ತೀಕ್ಷ್ಣ ಕಣ್ಣುಗಳು, ಕೂದಲಿಲ್ಲದ ತಲೆ ಇತ್ಯಾದಿ ಲಕ್ಷಣಗಳು ಅವರ ಪಾತ್ರದ ಬಗ್ಗೆ ಹಲವು ಊಹಾಪೋಹಗಳಿಗೆ ಕಾರಣವಾಗಿವೆ. ‘ರಾಕಾ’ ಎಂಬುದು ಅವರ ಪಾತ್ರದ ಹೆಸರೇ ಆಗಿರಬಹುದೆಂಬ ಚರ್ಚೆಯೂ ಕೇಳಿಬರುತ್ತಿದೆ.
Sun Pictures ನಿರ್ಮಾಣದ ಈ ಚಿತ್ರ ಸೈನ್ಸ್ ಫಿಕ್ಷನ್–ಫ್ಯಾಂಟಸಿ ಆ್ಯಕ್ಷನ್ ಕತೆಯನ್ನು ಒಳಗೊಂಡಿದ್ದು, ಬೇರೆ ಗ್ರಹದಲ್ಲಿ ನಡೆಯುವ ಮಾನವರು ಮತ್ತು ದೈತ್ಯರ ನಡುವಿನ ಯುದ್ಧವನ್ನು ಚಿತ್ರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ದೈತ್ಯ ಜೀವಿಗಳು, ವಿಚಿತ್ರ ಲೊಕೇಶನ್‌ಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಈ ಚಿತ್ರದ ವಿಶೇಷತೆಗಳಾಗಲಿವೆ.
ಚಿತ್ರದಲ್ಲಿ Deepika Padukone ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಜೊತೆಗೆ Rashmika Mandanna ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ವದಂತಿಯೂ ಹರಿದಾಡುತ್ತಿದೆ. ಅಲ್ಲು ಅರ್ಜುನ್ ನಾಲ್ಕು ವಿಭಿನ್ನ ಪಾತ್ರಗಳಲ್ಲಿ—ಅಜ್ಜ, ತಂದೆ ಮತ್ತು ಇಬ್ಬರು ಮಕ್ಕಳಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಚಿತ್ರತಂಡದಿಂದ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.

