ಸಾಮಾನ್ಯವಾಗಿ ಹೆಣ್ಣುಮಕ್ಕಳು ಎದುರಿಸುವ ಅನೇಕ ಸಮಸ್ಯೆಗಳಲ್ಲಿ ಮೊಡವೆ ಕೂಡ ಒಂದು. ಇದೊಂದು ಚರ್ಮದ ಸಮಸ್ಯೆಯಾಗಿದ್ದು ಎಣ್ಣೆಯ ಅತಿಯಾದ ಉತ್ಪಾದನೆ ಹಾಗೂ ಬ್ಯಾಕ್ಟೀರಿಯಾ ರಚನೆಯು ಮುಖದ ಮೇಲೆ ಕೆಂಪನೆಯ, ಕೋಮಲ ಉಬ್ಬುಗಳ ರಚನೆಗೆ ಕಾರಣವಾಗಿದೆ ಇದನ್ನೇ ಮೊಡವೆ, ಪಿಂಪಲ್ ಎಂದು ಕರೆಯಲಾಗುತ್ತದೆ. ಯವ್ವಾನಾವಸ್ಥೆಯಲ್ಲಿ ಹಾರ್ಮೋನ್ (Hormone) ಬದಲಾವಣೆಗಳಿಂದ ಹೆಚ್ಚಾಗಿ ಯುವಕ ಯುವತಿಯರು ಮೊಡವೆಗಳ ಸಮಸ್ಯೆಯನ್ನು ಅನುಭವಿಸುತ್ತಾರೆ. ಮೊಡವೆಗಳು ವಿವಿಧ ಅಂಶಗಳಿಂದ ಉಂಟಾಗಬಹುದು ಮತ್ತು ಮುಖದ ಮೇಲೆ ಬ್ಯಾಕ್ಟೀರಿಯಾದ (Bacteria) ಶೇಖರಣೆಯು ಮೊಡವೆಗಳುಂಟಾಗಲು ಸಾಮಾನ್ಯ ಕಾರಣವಾಗಿದೆ. ಇನ್ನು ಕೆಲವೊಮ್ಮೆ ಮುಖದಲ್ಲಿ ಇಲ್ಲವೇ ಚರ್ಮದಲ್ಲಿನ ಕೊಳಕು ಕೂಡ ಮೊಡವೆಗಳ ಬ್ಯಾಕ್ಟೀರಿಯಾವನ್ನು ಪ್ರಚೋದಿಸಿ ಮೊಡವೆಗಳ ರಚನೆಗೆ ಕಾರಣವಾಗುತ್ತವೆ.
ಮೊಡವೆಗಳು ಉಂಟಾಗಲು ಏನು ಕಾರಣ ಎಂಬುದನ್ನು ನೋಡುವುದಾದರೆ, ಅನೇಕ ಕಾರಣಗಳಿವೆ ಎಂದು verywellhealth.com ತಿಳಿಸುತ್ತದೆ. ಈ ವೆಬ್‌ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ಮುಖದ ಬ್ಯಾಕ್ಟೀರಿಯಾ ಸೋಂಕು ಸಂಭವಿಸಿದಾಗ ಚರ್ಮ ಈ ಸಮಯದಲ್ಲಿ ಸಂರಕ್ಷಣಾ ತಡೆಗೋಡೆಯನ್ನು ನಿರ್ಮಿಸುತ್ತದೆ. ಇದುವೇ ಮೊಡವೆಯಾಗಿ ಮಾರ್ಪಡುತ್ತದೆ ಅಂತೆಯೇ ಸೋಂಕನ್ನು ಪರಿಹರಿಸುವ ಗುರಿಯನ್ನು ಇದು ಹೊಂದಿದೆ. ಮುಖದ ಮೇಲೆ ಮೊಡವೆ ಕಾಣಿಸಿಕೊಂಡಾಗ ಅದು ಬ್ಯಾಕ್ಟೀರಿಯಾವನ್ನು ಎದುರಿಸಲು ದೇಹದಿಂದ ಉತ್ಪತ್ತಿಯಾಗುವ ದ್ರವದಿಂದ ತುಂಬುತ್ತದೆ ಎಂದು ಸೌಂದರ್ಯ ತಜ್ಞರು ಸೂಚಿಸುತ್ತಾರೆ. ಬಿಳಿ ರಕ್ತ ಕಣಗಳನ್ನು ಹೊಂದಿರುವ ಈ ದ್ರವವು ಸೋಂಕನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅದರ ಕಾರ್ಯವು ಪೂರ್ಣಗೊಂಡ ನಂತರ, ಬ್ಯಾಕ್ಟೀರಿಯಾ ನಿರ್ಮೂಲನೆಯಾಗುತ್ತದೆ ಜೊತೆಗೆ ಮೊಡವೆ ಕೂಡ ತನ್ನಷ್ಟಕ್ಕೆ ಕಣ್ಮರೆಯಾಗುತ್ತದೆ.
ಮೊಡವೆ ಸೌಂದರ್ಯ ಕಾಳಜಿಯ ಪ್ರತೀಕವಾಗಿದೆ
ನಿಜವಾಗಿ ನೋಡುವುದಾದರೆ ಮೊಡವೆ ಎಂಬುದು ಸೌಂದರ್ಯದ ಕಾಳಜಿಯ ಪ್ರತೀಕವಾಗಿದೆ ಅಂತೆಯೇ ಇದು ಚರ್ಮದ ಶುದ್ಧೀಕರಣದ ಪ್ರಕ್ರಿಯೆಯ ಒಂದು ಭಾಗವಾಗಿದೆ. ಮೊಡವೆಯನ್ನು ಕೈಯಿಂದ ಒಡೆಯುವುದು ಈ ನೈಸರ್ಗಿಕ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ ಅಂತೆಯೇ ಸೋಂಕು ಹರಡುವ ಬ್ಯಾಕ್ಟೀರಿಯಾ ಇನ್ನಷ್ಟು ಹರಡಲು ಅವಕಾಶವನ್ನೀಯುತ್ತದೆ ಇದರಿಂದ ಮುಖದಲ್ಲಿ ಇನ್ನಷ್ಟು ಮೊಡವೆಗಳು ಉಂಟಾಗುತ್ತದೆ. ಹೀಗಾಗಿಯೇ ಮೊಡವೆಗಳನ್ನು ಒಡೆಯಬಾರದು ಎಂದು ಸೌಂದರ್ಯ ತಜ್ಞರು ಸಲಹೆ ನೀಡಿದ್ದು, ಇದರಿಂದ ಸೋಂಕು ಹೆಚ್ಚಾಗುವುದನ್ನು ತಡೆಯಬಹುದು ಎಂದು ತಿಳಿಸುತ್ತಾರೆ.
ಇದನ್ನೂ ಓದಿ:
ರಜೆಗೆ ಊರಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವು
ಮೊಡವೆಗಳ ಕುರಿತು ಸಾಮಾನ್ಯ ಮಿಥ್ಯ
ಮಲಬದ್ಧತೆಯಿಂದ ಮೊಡವೆ ಉಂಟಾಗುತ್ತದೆ ಎಂಬುದಕ್ಕೆ ನಿರ್ಣಾಯಕ ಪುರಾವೆ ಇಲ್ಲದಿದ್ದರೂ ಹೆಚ್ಚಿದ ಒತ್ತಡವು ಒತ್ತಡದ ಹಾರ್ಮೋನ್‌ಗಳ ಬಿಡುಗಡೆಯ ಮೂಲಕ ಮೊಡವೆಗಳಿಗೆ ಕಾರಣವಾಗುತ್ತದೆ. ಮುಖದ ಕೊಳಕುಗಳಿಂದ ಕೂಡ ಮೊಡವೆ ಉತ್ಪತ್ತಿಯಾಗುವುದಿಲ್ಲ. ಆದರೆ ಮುಖದಲ್ಲಿನ ಕೊಳೆ ಮುಖದ ಮೇಲಿನ ಮೊಡವೆಗಳನ್ನು ಉಲ್ಬಣಗೊಳಿಸಲು ಸೂಕ್ಷ್ಮಜೀವಿಗಳನ್ನು ಪ್ರಚೋದಿಸಬಹುದು ಹಾಗಾಗಿ ಮುಖವನ್ನು ಸ್ವಚ್ಛವಾಗಿರಿಸಲು ಸಲಹೆ ನೀಡಲಾಗುತ್ತದೆ. ಇನ್ನು ಆಗಾಗ್ಗೆ ಹೆಚ್ಚುಚ್ಚು ಬಾರಿ ಮುಖ ತೊಳೆಯುವುದು ಚರ್ಮದ ಕಿರಿಕಿರಿಗೆ ಕಾರಣವಾಗುತ್ತದೆ
ಮೊಡವೆ ನಿರಂತರವಾಗಿ ಮುಖದಲ್ಲಿ ಉಳಿಯುವುದಿಲ್ಲ
ಮೊಡವೆ ಎಂಬುದು ದೀರ್ಘಕಾಲ ಮುಖದಲ್ಲಿಯೇ ಉಳಿಯುವಂತಹದ್ದು ಎಂಬುದು ನಮ್ಮಲ್ಲಿ ಹೆಚ್ಚಿನವರ ನಂಬಿಕೆಯಾಗಿದೆ. ಇದು ಚರ್ಮದ ಮೇಲ್ಮೈ ಅಡಿಯಲ್ಲಿ ದೀರ್ಘಕಾಲದ ಉಪಸ್ಥಿತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಮೊಡವೆಗಳ ನಿರ್ವಹಣೆಗೆ ನಿರಂತರ ಗಮನ ಬೇಕು ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ವೃತ್ತಿಪರ ಸಹಾಯವನ್ನು ಪಡೆಯುವುದು ಸೂಕ್ತವಾಗಿದೆ.
ಒಂದು ಮಗುವಿಗೆ ತಾಯಿಯಾದ್ರೂ ಗ್ಲಾಮರ್ನಲ್ಲಿ ಟಾಪ್ ಕಾಜಲ್!
ನಿರ್ದಿಷ್ಟ ಆಹಾರ, ಒತ್ತಡದಿಂದ ಮೊಡವೆ ಉಂಟಾಗುತ್ತದೆಯೇ?
ಕೆಲವು ಆಹಾರ ತಿಂದಾಗ ಇಲ್ಲವೇ ಒತ್ತಡದಲ್ಲಿದ್ದಾಗ ಮೊಡವೆ ಉಂಟಾಗುತ್ತದೆ ಎಂಬುದು ಸತ್ಯ ವಿಷಯವಲ್ಲ. ಆದರೆ ಇವುಗಳು ಮೊಡವೆಗಳ ಸಮಸ್ಯೆಯನ್ನು ಹೆಚ್ಚಿಸಬಹುದು. ಮೊಡವೆಗಳ ಕುರಿತು ನಡೆಸಿದ ಅಧ್ಯಯನದಲ್ಲಿ ಪರೀಕ್ಷೆಯ ಮೊದಲು ಹಾಗೂ ನಂತರ ದೊರೆತ ಫಲಿತಾಂಶವು ಹೆಚ್ಚಿನ ಒತ್ತಡವು ಮೊಡವೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ ಹಾಗೂ ಅವುಗಳನ್ನು ಹೆಚ್ಚು ಹದಗೆಡಿಸುತ್ತವೆ ಎಂಬುದನ್ನು ಖಾತ್ರಿಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

