ಚಳಿಗಾಲ (Winter Season) ಈಗಾಗಲೇ ಶುರುವಾಗಿದ್ದು, ಚಳಿ ತುಂಬಾನೇ ಹೆಚ್ಚಾಗಿವೆ ಮತ್ತು ಈ ಋತುವಿನಲ್ಲಿ ವಯಸ್ಸಾದ ಹಿರಿಯರಿಗೆ ಮತ್ತು ವಯಸ್ಕರಿಗೆ ಕಾಡುವ ಒಂದು ಆರೋಗ್ಯ ಸಮಸ್ಯೆ ಎಂದರೆ ಅದು ಸಂಧಿವಾತ ಅಂತ ಹೇಳಬಹುದು. ಹೌದು, ಈ ಸಂಧಿವಾತದ ನೋವನ್ನು ಅನೇಕರಿಗೆ ಸಹಿಸಿಕೊಳ್ಳಲು ಆಗುವುದೇ ಇಲ್ಲ. ಸಂಧಿವಾತ ನೋವನ್ನು ಹೊಂದಿರುವ ಜನರಿಗೆ ಚಳಿಗಾಲದ ಸವಾಲುಗಳು ಹೆಚ್ಚಾಗಿದ್ದು ವಿವಿಧ ಕಾರಣಗಳು (Reason) ಕೊಡುಗೆ ನೀಡುತ್ತವೆ. ಈ ತಂಪಾದ ತಿಂಗಳುಗಳಲ್ಲಿ ಸಂಧಿವಾತ ನೋವನ್ನು ನಿವಾರಿಸಲು ಯಾವುದೇ ಉಪಾಯ ಇಲ್ಲವೇ ಅಂತ ಅನೇಕರು ಯೋಚನೆ (Think) ಮಾಡುತ್ತಿರುತ್ತಾರೆ. ಸಂಧಿವಾತದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸರಳ ಜೀವನಶೈಲಿಯ ಹೊಂದಾಣಿಕೆಗಳನ್ನು ಕೆಳಗೆ ನೀಡಲಾಗಿದೆ ನೋಡಿ.
ಚಳಿಯ ವಾತಾವರಣವು ಸಂಧಿವಾತ ಎಂಬ ಸ್ವಯಂ ನಿರೋಧಕ ಸ್ಥಿತಿಗೆ ಸಂಬಂಧಿಸಿದ ಅಸ್ವಸ್ಥತೆ ಮತ್ತು ನೋವನ್ನು ಉಲ್ಬಣಗೊಳಿಸಬಹುದು. ಚಳಿಗಾಲದಲ್ಲಿ ಸಂಧಿವಾತ ಪೀಡಿತರು ಎದುರಿಸುವ ಸವಾಲುಗಳಿಗೆ ಹಲವಾರು ಅಂಶಗಳು ಕಾರಣವಾಗುತ್ತವೆ.
ಸಂಧಿವಾತ ಮತ್ತು ಇತರ ಸ್ನಾಯುಗಳ ಸಮಸ್ಯೆಗಳಿರುವ ವ್ಯಕ್ತಿಗಳು ವಾಯುಭಾರ ಒತ್ತಡದಲ್ಲಿನ ಏರಿಳಿತಗಳಿಗೆ ಹೆಚ್ಚು ಸೂಕ್ಷ್ಮವಾಗಿರಬಹುದು. ಈ ಸೂಕ್ಷ್ಮತೆಯು ಕೀಲುಗಳೊಳಗೆ ಮೂಳೆಗಳನ್ನು ಮೆತ್ತಿಸುವ ಕಾರ್ಟಿಲೆಜ್ ಅನ್ನು ಹದಗೆಡಿಸುತ್ತದೆ.
ಇದರಿಂದಾಗಿ ತೆರೆದ ಮೂಳೆಗಳಲ್ಲಿನ ನರಗಳು ಒತ್ತಡದಲ್ಲಿನ ಬದಲಾವಣೆಗಳಿಗೆ ಪ್ರತಿಕ್ರಯಿಸುತ್ತವೆ. ಇಷ್ಟೇ ಅಲ್ಲದೆ ಇನ್ನೊಂದು ಕಾರಣವೆಂದರೆ ಚಳಿಗಾಲದಲ್ಲಿ, ಮನುಷ್ಯನ ದೇಹವು ಶಾಖವನ್ನು ಸಂರಕ್ಷಿಸುತ್ತದೆ ಮತ್ತು ಹೆಚ್ಚಿನ ಪ್ರಮಾಣದ ರಕ್ತವನ್ನು ಪ್ರಮುಖ ಅಂಗಗಳಿಗೆ ಮರು ನಿರ್ದೇಶಿಸುತ್ತದೆ.
ಇದರ ಪರಿಣಾಮವಾಗಿ, ತೋಳುಗಳು, ಕಾಲುಗಳು, ಭುಜಗಳು ಮತ್ತು ಮೊಣಕಾಲಿನ ಕೀಲುಗಳಲ್ಲಿನ ರಕ್ತನಾಳಗಳು ಗಟ್ಟಿಯಾಗಬಹುದು, ಇದು ಅಸ್ವಸ್ಥತೆ ಮತ್ತು ನೋವಿಗೆ ಕಾರಣವಾಗುತ್ತದೆ.
ಕಡಿಮೆ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವ ಉದ್ಯೋಗಗಳನ್ನು ಹೊಂದಿರುವ ವ್ಯಕ್ತಿಗಳು ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವವರಿಗಿಂತ ಚಳಿಗಾಲದಲ್ಲಿ ಸಂಧಿವಾತ-ಸಂಬಂಧಿತ ಸಮಸ್ಯೆಗಳನ್ನು ಮತ್ತು ಸಂಧಿವಾತ ನೋವನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸಂಧಿವಾತದಿಂದ ಬಳಲುವವರು ತಮ್ಮ ಜೀವನಶೈಲಿಯ ಈ ಬದಲಾವಣೆಗಳನ್ನ ಮಾಡಿಕೊಳ್ಳಿ
– ಸದಾ ಚಳಿಗಾಲದ ಉಡುಪುಗಳಾದ ಸ್ವೆಟರ್ ಮತ್ತು ಕಿವಿ ಮತ್ತು ತಲೆಗೆ ಗಾಳಿ ತಾಗದಂತೆ ನೋಡಿಕೊಳ್ಳಲು ಟೋಪಿ ಧರಿಸುವ ಮೂಲಕ ಮತ್ತು ವಾಸಿಸುವ ಮನೆಯನ್ನು ಬಿಸಿಯಾಗಿರುವಂತೆ ನೋಡಿಕೊಳ್ಳುವ ಮೂಲಕ ಚಳಿಗಾಲದ ಹವಾಮಾನಕ್ಕಾಗಿ ತಯಾರಿ ಮಾಡಿಕೊಳ್ಳಬಹುದು.
ಇದನ್ನೂ ಓದಿ:
ಕಾಲು, ಉಗುರು, ಕಿವಿಯ ಮೂಲಕ ಕೂಡ ಸೈಲೆಂಟ್ ಕಿಲ್ಲರ್ ಹೃದ್ರೋಗದ ಎಚ್ಚರಿಕೆಯ ಸಂಕೇತಗಳನ್ನು ಪತ್ತೆಹಚ್ಚಬಹುದಂತೆ!
– ಸ್ವಲ್ಪ ಬಿಸಿಲಿಗೆ ಹೋಗಿ ನಡೆದಾಡುವುದು ಅಥವಾ ಜಿಮ್‌ನಲ್ಲಿ ಹೋಗಿ ತಾಲೀಮು ಮಾಡಿ ಬರುವಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನಿಮ್ಮ ಚಯಾಪಚಯ ಶಾಖವನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳ ಮತ್ತು ಸ್ನಾಯುಗಳ ಕಾರ್ಯವನ್ನು ಹೆಚ್ಚಿಸುತ್ತದೆ.
– ಹಣ್ಣುಗಳು, ತರಕಾರಿಗಳು, ಮೀನುಗಳು ಮತ್ತು ಬೀಜಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ.
– ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಧನಾತ್ಮಕ ಪರಿಣಾಮಗಳನ್ನು ತೋರಿಸಲಾಗಿದೆ. ಬೆಚ್ಚಗಿನ ಸ್ನಾನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಬೆಚ್ಚಗಿನ ಕೊಳದಲ್ಲಿ ಈಜುವುದು ಅಥವಾ ಬೆಚ್ಚಗಿನ ನೀರಿನ ವ್ಯಾಯಾಮಗಳನ್ನು ಮಾಡುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಸಂಧಿವಾತ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
– ನಿಯಮಿತವಾದ ಮೃದುವಾದ ವಿಸ್ತರಣೆಗಳು ಸ್ನಾಯುಗಳ ಚಲನಶೀಲತೆಯನ್ನು ಸುಧಾರಿಸುತ್ತದೆ ಮತ್ತು ಸಂಧಿವಾತಕ್ಕೆ ಸಂಬಂಧಿಸಿದ ನೋವು ಮತ್ತು ಬಿಗಿತವನ್ನು ಕಡಿಮೆ ಮಾಡುತ್ತದೆ. ಸಂಧಿವಾತವನ್ನು ನಿರ್ವಹಿಸಲು ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳುವುದು ಮತ್ತು ತೂಕವನ್ನು ನಿರ್ವಹಿಸುವುದು ಸಹ ನಿರ್ಣಾಯಕವಾಗಿದೆ.
– ಓಡುವುದು, ಜಂಪ್ ಮಾಡುವುದು ಮತ್ತು ಹೆಚ್ಚಿನ ಪ್ರಭಾವದ ಏರೋಬಿಕ್ಸ್ ಅಂತಹ ನಿಮ್ಮ ದೇಹದ ಮೇಲೆ ಅತಿಯಾದ ಒತ್ತಡವನ್ನು ಉಂಟು ಮಾಡುವ ಚಟುವಟಿಕೆಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು.
ಬೋಲ್ಡ್ ಅವತಾರದಲ್ಲಿ ಫೋಸ್ ಕೊಟ್ಟ Niharika Konidela!
– ಧೂಮಪಾನವನ್ನು ನಿಲ್ಲಿಸುವುದು ಸಹ ಮುಖ್ಯವಾಗಿದೆ, ಏಕೆಂದರೆ ಇದು ಸಂಯೋಜಕ ಅಂಗಾಂಶಗಳ ಮೇಲೆ ಒತ್ತಡವನ್ನು ಉಂಟು ಮಾಡಬಹುದು, ಸಂಧಿವಾತದ ಅಸ್ವಸ್ಥತೆಯನ್ನು ಇನ್ನಷ್ಟು ಹದಗೆಡಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

