ನಾವು ಇರುವ ಈ ಜಗತ್ತಿನಲ್ಲಿ ಒಬ್ಬರೇ ಬದುಕಲು ಸಾಧ್ಯವಿಲ್ಲ ಸಂಗಾತಿ ಬೇಕೇ ಬೇಕು ಎಂದು ಹೇಳುವುದನ್ನು ಕೇಳುತ್ತೇವೆ. ಒಬ್ಬಂಟಿಯಾಗಿ ಎಷ್ಟು ಕಾಲ ಬದುಕಬಹುದು ಜೀವನದಲ್ಲಿ ಯಾರಾದರೂ ಸಂಗಾತಿ (Pair) ಜೊತೆಗಿರಲೇಬೇಕು ಎಂದು ಒಂಟಿಯಾಗಿರುವವರಿಗೆ ಹೆಚ್ಚಿನವರು ಸಲಹೆ ನೀಡುತ್ತಾರೆ. ಆದರೆ ಒಬ್ಬಂಟಿಯಾಗಿರುವವರು ತಮ್ಮ ಈ ನಿರ್ಧಾರವನ್ನು (Decision) ಕೆಲವೊಂದು ಕಾರಣಗಳಿಂದ ತೆಗೆದುಕೊಂಡಿರುತ್ತಾರೆ ಹಾಗೂ ಅವರು ತಮ್ಮನ್ನು ತಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ (Physically) ಸಿದ್ಧಪಡಿಸಿಕೊಂಡೇ ಒಬ್ಬಂಟಿಯಾಗಿರಲು ತೀರ್ಮಾನಿಸಿರುತ್ತಾರೆ.
ಇವರ ಪ್ರಕಾರ ಒಬ್ಬಂಟಿಯಾಗಿ ಕೂಡ ಸಂತೋಷವಾಗಿ ಇರಬಹುದು ಎಂದಾಗಿದೆ. ಜೀವನದಲ್ಲಿ ಖುಷಿಯಾಗಿರಲು ಸಂಗಾತಿ ಬೇಕೇ ಬೇಕು ಎಂದೇನಿಲ್ಲ ಎಂದು ತಿಳಿಸುವ ಇವರು ಒಂಟಿಯಾಗಿ ಕೂಡ ಜೀವನದ ಖುಷಿಯನ್ನು ಆಸ್ವಾದಿಸಬಹುದು ಎಂದು ಸಲಹೆ ನೀಡುತ್ತಾರೆ. ಹಾಗಿದ್ದರೆ ಒಬ್ಬಂಟಿಯಾಗಿರುವವರು ಹೇಗೆ ತಮ್ಮತನವನ್ನು ಇಷ್ಟಪಡುತ್ತಾರೆ. ಅವರು ಹೇಗೆ ಕಾಲಕಳೆಯುತ್ತಾರೆ ಅವರ ಸ್ವಭಾವಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಒಬ್ಬಂಟಿ ಸಮಯವನ್ನು ಹೆಚ್ಚು ಆನಂದಿಸುತ್ತಾರೆ
ಒಂಟಿತನ ಎಂಬುದು ಶಾಪವಲ್ಲ ಎಂದು ಹೇಳುವ ಈ ಜನರು ತಮ್ಮನ್ನು ತಾವು ಹೆಚ್ಚು ಪ್ರೀತಿಸುವ ವ್ಯಕ್ತಿಗಳಾಗಿರುತ್ತಾರೆ ಹಾಗಾಗಿ ಒಂಟಿಯಾಗಿರುವುದಕ್ಕೆ ಇವರು ಬೇಸರ ವ್ಯಕ್ತಪಡಿಸುವುದಿಲ್ಲ ಬದಲಾಗಿ ಇದು ಸಂತೋಷದ ಒಂದು ಭಾಗ ಎಂದು ಖುಷಿಪಡುತ್ತಾರೆ. ವೇದನೆ ಇವರ ಮನದಲ್ಲಿರುವುದಿಲ್ಲ ಬದಲಾಗಿ ಹಕ್ಕಿಯಂತೆ ಹಾರಾಡುವ ಸ್ವೇಚ್ಛೆ ಇವರಲ್ಲಿರುತ್ತದೆ.
ಏನೋ ಒಂದು ಶಕ್ತಿ ಮೂಡಿರುತ್ತದೆ
ಕೆಲವು ಕಾಲ ಒಬ್ಬಂಟಿಯಾಗಿ ನಮ್ಮ ಮೀ ಟೈಮ್ ಅನ್ನು ಆನಂದಿಸುವುದು ನಮ್ಮನ್ನು ಬೇರೊಬ್ಬ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ನಮಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳುವುದು ನಮ್ಮೊಳಗಿನ ಸಕ್ರಿಯತೆಯನ್ನು ಚಾರ್ಜ್ ಮಾಡುತ್ತದೆ ಹಾಗೂ ನಮ್ಮ ಒತ್ತಡ, ದುಃಖ, ಬೇಸರವನ್ನು ನಿವಾರಿಸಲು ಸಹಕಾರಿಯಾಗಿದೆ. ಅಂತೆಯೇ ಒಂಟಿಯಾಗಿರುವವರು ಸಾಕಷ್ಟು ತಮ್ಮತನದ ಸಮಯವನ್ನು ಕಳೆಯುವುದರಿಂದ ಎನರ್ಜಿಟಿಕ್ ಆಗಿರುತ್ತಾರೆ ಹಾಗೂ ಸುತ್ತಲೂ ಆ ಎನರ್ಜಿಯನ್ನು ಪಸರಿಸುತ್ತಾರೆ.
ಒಬ್ಬಂಟಿಯಾದರೂ ನಿಮ್ಮ ಸಾಂಗತ್ಯವನ್ನು ಇಷ್ಟಪಡುತ್ತೀರಿ
ನಿಮ್ಮ ಸಾಂಗತ್ಯವನ್ನು ನೀವು ಮೆಚ್ಚಿಕೊಳ್ಳುತ್ತೀರಿ. ನಿಮ್ಮ ಈ ವರ್ತುಲದಲ್ಲಿ ಬರೇ ನೀವು ಮಾತ್ರ ಇರುವುದರಿಂದ ನಿಮ್ಮನ್ನು ನೀವು ತುಂಬಾ ಇಷ್ಟಪಡುತ್ತೀರಿ. ಒಬ್ಬರೇ ಸಮಯ ಕಳೆಯುವುದು ಎಂದರೆ ನಿಮಗೆ ತುಂಬಾ ಇಷ್ಟವಾಗಿರುತ್ತದೆ.
ಶಾಂತವಾದ ವಾತಾವರಣದಲ್ಲಿ ಕಳೆದು ಹೋಗುತ್ತೀರಿ
ಒಂಟಿಯಾಗಿರುವಾಗ ಇನ್ನೊಬ್ಬರ ಮಾತು, ವಾದ ವಿವಾದ ಏನೂ ಇರುವುದಿಲ್ಲ. ಏಕೆಂದರೆ ನಿಮ್ಮ ಜಗತ್ತಿನಲ್ಲಿ ನೀವು ಮಾತ್ರ ಇರುತ್ತೀರಿ. ಇದು ನಿಮಗೆ ಹೆಚ್ಚು ಶಾಂತಿ ಹಾಗೂ ಖುಷಿಯನ್ನು ತಂದುಕೊಡುತ್ತದೆ. ನೀವು ಹೆಚ್ಚು ಸ್ವತಂತ್ರರಾಗಿರುತ್ತೀರಿ ಹಾಗೂ ಈ ಸಮಯವನ್ನು ಆನಂದಮಯವಾಗಿ ನೀವು ಕಳೆಯುತ್ತೀರಿ.
ಆಳವಾದ ಸಂವಾದಗಳಲ್ಲಿ ತೊಡಗಿಕೊಳ್ಳುತ್ತೀರಿ
ನಿಮಗಾಗಿ ನೀವು ಸಾಕಷ್ಟು ಸಮಯವನ್ನು ಹೊಂದಿರುವುದರಿಂದ ಕೆಲವೊಂದು ಆಳವಾದ ಚಿಂತನೆಗಳಲ್ಲಿ ನೀವು ತೊಡಗಿಕೊಳ್ಳುತ್ತೀರಿ ಹಾಗೂ ನಿಮ್ಮೊಳಗಿನ ಆಂತರ್ಯ ಸಂವಾದವನ್ನು ನೀವು ಮಾಡುತ್ತೀರಿ.
ಅರ್ಥಪೂರ್ಣ ಸಂಪರ್ಕಗಳನ್ನು ನೀವು ಬಯಸುತ್ತೀರಿ
ಅಂತರ್ಮುಖಿಗಳು ಆಳವಾದ, ಹೆಚ್ಚು ಅರ್ಥಪೂರ್ಣ ಸಂಪರ್ಕಗಳನ್ನು ಹುಡುಕುತ್ತಾರೆ. ಅವರು ನಿಜವಾದ ಸಂಬಂಧಗಳನ್ನು ಗೌರವಿಸುತ್ತಾರೆ. ಅರ್ಥಪೂರ್ಣ ಸಂಬಂಧಗಳಿಗೆ ಹಂಬಲಿಸುವುದು ಸಾಮಾಜಿಕ ಸಂವಹನವನ್ನು ಕಡ್ಡಾಯಗೊಳಿಸುತ್ತದೆ ಹಾಗೂ ಏನಾದರೊಂದು ಉದ್ದೇಶವನ್ನಿರಿಸಿಕೊಂಡು ನೀವು ಸಂಬಂಧ ನಡೆಸುತ್ತೀರಿ.
ಇದನ್ನೂ ಓದಿ:
ರುಚಿಯಾದ ದಾಲ್ ಮಟನ್ ಕರ್ರಿ ಮಾಡುವ ವಿಧಾನ ಇಲ್ಲಿದೆ
ಅಂತರ್ಮುಖಿಯಾಗಿ ಏಕಾಂತತೆಯನ್ನು ಅನುಭವಿಸುತ್ತೀರಿ
ನಿಮ್ಮದೇ ಲೋಕದಲ್ಲಿ ನೀವು ಇರುವ ಕಾರಣ ಶಾಂತತೆಯನ್ನು ಕಂಡುಕೊಳ್ಳುತ್ತೀರಿ ನೀವು ಆಳವಾದ, ಅರ್ಥಪೂರ್ಣ ಸಂಭಾಷಣೆಗಳನ್ನು ಬಯಸುತ್ತೀರಿ. ನಿಮ್ಮಷ್ಟಕ್ಕೆ ನೀವು ಸಂಹನ ನಡೆಸುವುದು, ಆಳವಾಗಿ ಚಿಂತಿಸುವುದು ನಿಮ್ಮನ್ನು ಅಂತರ್ಮುಖಿಯನ್ನಾಗಿಸುತ್ತದೆ. ಹಾಗಾಗಿ ಇಂತಹುದೇ ಗುಣವಿರುವವರನ್ನು ನೀವು ಇಷ್ಟಪಡುತ್ತೀರಿ.
Kiara Advani ಗ್ಲಾಮರಸ್ ಫೋಟೋಶೂಟ್!
ಏಕಾಂತತೆ ಎಂಬುದು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಚಟುವಟಿಕೆ ಎಂದೆನಿಸಿದೆ. ಇದು ಅವರನ್ನು ಇನ್ನೂ ಚೆನ್ನಾಗಿ ಅರಿತುಕೊಳ್ಳಲು ಸಹಕಾರಿಯಾಗಿದೆ ಅಂತೆಯೇ ಅವರಿಗಾಗಿ ಸಮಯ ಮೀಸಲಿಡಲು ಇದು ಅವಕಾಶವನ್ನೊದಗಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

