ದೇಶದ ಹಲವಾರು ಭಾಗಗಳಲ್ಲಿ ಈಗಾಗಲೇ ಚಳಿ ಶುರುವಾಗಿದೆ, ದೀಪಾವಳಿ ಹಬ್ಬದ ನಂತರ ಈ ಚಳಿ ಇನ್ನಷ್ಟು ಜಾಸ್ತಿಯಾಗುತ್ತದೆ ಅಂತ ಸಹ ಹೇಳಲಾಗುತ್ತಿದೆ. ಈ ಬದಲಾಗುತ್ತಿರುವ ಹವಾಮಾನ ಮೊದಲಿಗೆ ಪರಿಣಾಮ ಬೀರುವುದೇ ನಮ್ಮ ನಿಮ್ಮೆಲ್ಲರ ದೇಹದಲ್ಲಿನ ರೋಗನಿರೋಧಕ (Immunity) ಶಕ್ತಿಯ ಮೇಲೆ ಅಂತ ಹೇಳಬಹುದು. ಹೀಗಾಗಿ, ನಾವು ನಮ್ಮ ಆಹಾರದಲ್ಲಿ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಒಳ್ಳೆಯದು. ಇಂತಹ ಆಹಾರ ಪದಾರ್ಥಗಳು ನಮ್ಮನ್ನು ಚಳಿಗಾಲದಲ್ಲಿ (Winter Season) ಬೆಚ್ಚಗಾಗಿಸುತ್ತವೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
ತುಪ್ಪ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತಂತೆ..
ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಆಹಾರಗಳ ಬಗ್ಗೆ ಮಾತನಾಡುವಾಗ, ನಮಗೆ ಮೊದಲಿಗೆ ತಲೆಗೆ ಬರುವ ಜನಪ್ರಿಯ ಪದಾರ್ಥಗಳಲ್ಲಿ ತುಪ್ಪ ಸಹ ಒಂದು.
ಇದು ನಮ್ಮನ್ನು ಬೆಚ್ಚಗಿಡುವುದಲ್ಲದೆ, ನಮ್ಮ ರೋಗನಿರೋಧಕ ಶಕ್ತಿಯನ್ನು ಸಹ ಇದು ಸುಧಾರಿಸುತ್ತದೆ. ಅದಕ್ಕಾಗಿಯೇ ತಜ್ಞರು ಚಳಿಗಾಲದಲ್ಲಿ ತುಪ್ಪವನ್ನು ದೈನಂದಿನ ಆಹಾರದ ಭಾಗವಾಗಿರಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.
ಆದರೆ, ತುಪ್ಪ ತಿಂದರೆ ದಪ್ಪಗಾಗುತ್ತಾರೆ ಅಂತ ಸಹ ಅನೇಕರು ಹೇಳುವುದನ್ನು ನಾವು ಕೇಳಿರುತ್ತೇವೆ. ತುಪ್ಪದಲ್ಲಿ ದೇಹಕ್ಕೆ ಬೇಕಾದ ಆರೋಗ್ಯಕರ ಕೊಬ್ಬು ಇದೆ ಎಂಬ ಅಂಶ ಹೆಚ್ಚಿನ ಜನರಿಗೆ ತಿಳಿದಿಲ್ಲ.
ತುಪ್ಪವು ಕೊಬ್ಬು-ಕರಗಬಲ್ಲ ವಿಟಮಿನ್ ಎ, ಡಿ ಮತ್ತು ಇ ಅನ್ನು ಹೊಂದಿರುತ್ತದೆ, ಇದು ರೋಗನಿರೋಧಕ ಬೆಂಬಲ ಮತ್ತು ಮೂಳೆಗಳ ಆರೋಗ್ಯಕ್ಕೆ ನಿರ್ಣಾಯಕವಾಗಿದೆ.
ತುಪ್ಪದಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ, ತುಪ್ಪ ನಿರ್ವಿಶೀಕರಣಕ್ಕೆ ಸಹ ಸಹಾಯ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ.
ಚಳಿಗಾಲದ ಆಹಾರದಲ್ಲಿ ತುಪ್ಪವನ್ನು ಹೀಗೆಲ್ಲಾ ಸೇರಿಸಿಕೊಳ್ಳಬಹುದಂತೆ..
1. ರೊಟ್ಟಿಗೆ ತುಪ್ಪ ಹಚ್ಚಿಕೊಂಡು ತಿನ್ನಬಹುದು
ರೊಟ್ಟಿಗೆ ತುಪ್ಪವನ್ನು ಹಚ್ಚಿಕೊಂಡು ತಿನ್ನುವುದು ತುಂಬಾನೇ ಸುಲಭವಾದ ಮಾರ್ಗವಾಗಿದೆ. ಇದರ ಹೊರತಾಗಿ, ತುಪ್ಪದೊಂದಿಗೆ ಸ್ಟಫ್ಡ್ ಪರಾಠಗಳನ್ನು ಮಾಡುವ ಮೂಲಕ ನಿಮ್ಮ ಆಹಾರದಲ್ಲಿ ತುಪ್ಪವನ್ನು ಸೇರಿಸಿಕೊಳ್ಳಬಹುದು.
ಇದನ್ನೂ ಓದಿ:
ಈ 5 ನಿಯಮಗಳನ್ನು ತಪ್ಪದೇ ಪಾಲಿಸಿದ್ರೆ ಯಾರು ಬೇಕಾದ್ರೂ ತೂಕ ಇಳಿಸಿಕೊಳ್ಳಬಹುದು!
2. ತುಪ್ಪದಲ್ಲಿ ತರಕಾರಿಗಳನ್ನು ಬೇಯಿಸಿ
ನಿಮ್ಮ ಆಹಾರದಲ್ಲಿ ತುಪ್ಪವನ್ನು ಸೇರಿಸಲು ಉತ್ತಮ ಮತ್ತು ಸುಲಭವಾದ ಮಾರ್ಗವೆಂದರೆ ತುಪ್ಪದಲ್ಲಿ ತರಕಾರಿಗಳನ್ನು ಬೇಯಿಸುವುದು ಅಂತ ಹೇಳಲಾಗುತ್ತದೆ.
ಸಂಸ್ಕರಿಸಿದ ಎಣ್ಣೆಯ ಬದಲು ತುಪ್ಪದಲ್ಲಿ ತರಕಾರಿಗಳನ್ನು ಬೇಯಿಸುವುದು ರುಚಿಯನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಆರೋಗ್ಯಕ್ಕೂ ತುಂಬಾನೇ ಪ್ರಯೋಜನವನ್ನು ನೀಡುತ್ತದೆ. ತರಕಾರಿಗಳಲ್ಲಿ ಕಂಡು ಬರುವ ಕೊಬ್ಬಿನಲ್ಲಿ ಕರಗುವ ಪೋಷಕಾಂಶಗಳನ್ನು ಹೀರಿಕೊಳ್ಳಲು ತುಪ್ಪ ತುಂಬಾ ಸಹಾಯ ಮಾಡುತ್ತದೆ.
3. ಸೂಪ್ ಅಥವಾ ದಾಲ್ ನಲ್ಲಿ ತುಪ್ಪವನ್ನು ಸೇರಿಸಿಕೊಳ್ಳಿ
ನಿಮ್ಮ ಆಹಾರದಲ್ಲಿ ತುಪ್ಪವನ್ನು ಸೇರಿಸಲು ಇದು ಇನ್ನಷ್ಟು ಸುಲಭವಾದ ಮಾರ್ಗವಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಸೂಪ್, ಮಸೂರ, ಕ್ವಿನೋವಾ ಮತ್ತು ಇತರ ಧಾನ್ಯಗಳಿಗೆ ಒಂದು ಚಮಚ ತುಪ್ಪವನ್ನು ಸೇರಿಸಿ ಮತ್ತು ನಂತರ ಚಳಿಗಾಲದಲ್ಲಿ ಅದರ ರುಚಿಯನ್ನು ಆನಂದಿಸಿ ಮತ್ತು ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಿ.
4. ತಿಂಡಿಗಳಲ್ಲಿ ಸಹ ತುಪ್ಪವನ್ನು ಬಳಸಿ
ಮನೆಯಲ್ಲಿ ತಯಾರಿಸಿದ ಪಾಪ್ ಕಾರ್ನ್ ಅಥವಾ ಸ್ವೀಟ್ ಕಾರ್ನ್ ನೊಂದಿಗೆ ತುಪ್ಪವನ್ನು ಬೆರೆಸಿ ತಿನ್ನಬಹುದು. ಇದಲ್ಲದೆ, ನೀವು ವಿವಿಧ ರೀತಿಯ ದಲಿಯಾ ಮತ್ತು ಚೀಲಾ ಮಾಡುವಾಗ ಸಹ ತುಪ್ಪವನ್ನು ಅದರಲ್ಲಿ ಬಳಸಬಹುದು.
5. ಅರಿಶಿನ ಮತ್ತು ತುಪ್ಪವನ್ನು ಹಾಲಿನಲ್ಲಿ ಹಾಕಿಕೊಂಡು ಕುಡಿಯಿರಿ
ಇನ್ನೊಂದು ಪರಿಣಾಮಕಾರಿ ವಿಧಾನವೆಂದರೆ ಹಸಿ ಅರಿಶಿನ ಮತ್ತು ಒಂದು ಚಮಚ ತುಪ್ಪವನ್ನು ಒಟ್ಟಿಗೆ ರುಬ್ಬುವುದು. ಈ ಪೇಸ್ಟ್ ಅನ್ನು ಒಂದು ಕಪ್ ಹಾಲಿನಲ್ಲಿ ಸೇರಿಸಿ ಅಥವಾ ನಿಮ್ಮ ಬೆಳಗಿನ ಕಾಫಿ ಅಥವಾ ಟೀಗೆ ಸೇರಿಸಿಕೊಳ್ಳಿ.
ಸ್ಟೈಲಿಶ್ ಡ್ರೆಸ್‍ನಲ್ಲಿ ಮೊನಾಲಿಸಾ ನಟಿ Sadaa ಪೋಸ್
ಈ ರೀತಿ ತುಪ್ಪವನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ