ಆಹಾರ ಪದ್ಧತಿಗಳು ಅನೇಕ. ಒಂದೊಂದು ಆಹಾರ (Food) ಪದ್ಧತಿಯಲ್ಲೂ ತಿನ್ನುವ ಪದಾರ್ಥಗಳು ಬದಲಾಗುತ್ತೆ. ತರಕಾರಿಗಳನ್ನು ನೇರವಾಗಿ ತಿನ್ನುವುದಕ್ಕೂ ಬೇಯಿಸಿ ತಿನ್ನುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೇ ಒಣದ್ರಾಕ್ಷಿಯನ್ನು ನೇರವಾಗಿ ತಿನ್ನುವುದಕ್ಕೂ ನೀರಿನಲ್ಲಿ ನೆನಸಿ ತಿನ್ನುವುದರಿಂದ ಸಾಕಷ್ಟು ವ್ಯತ್ಯಾಸಗಳಿದೆ. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿಟ್ಟು ಸೇವಿಸೋದು ಅತ್ಯಂತ ಉತ್ತಮ.. ಇದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು (Protien) ಸೇರುತ್ತವೆ. ಅದೇನೇನು ಅಂತ ವಿವರವಾಗಿ ನೋಡೋಣ.
ಒಣದ್ರಾಕ್ಷಿ ನೀರಿನಲ್ಲಿ ನೆನದಷ್ಟು ನೈಸರ್ಗಿಕ ಸ್ವಾದ ಹೆಚ್ಚಾಗುತ್ತದೆ:
ನಿಮಗೆ ಗೊತ್ತಿರಲಿ.. ದ್ರಾಕ್ಷಿಯನ್ನ ಒಣದ್ರಾಕ್ಷಿಯನ್ನಾಗಿ ಪರಿವರ್ತಿಸಲು ಅನೇಕ ಪ್ರಕ್ರಿಯೆಗಳು ನಡೆಯುತ್ತವೆ.. ಆದರೆ, ಒಣದ್ರಾಕ್ಷಿಯಲ್ಲಿನ ನೈಸರ್ಗಿಕ ಸ್ವಾದವನ್ನು ಹೆಚ್ಚಿಸಬೇಕಾದರೆ ಅದನ್ನು ನೀರಿನಲ್ಲಿ ನೆನಸಿ ಇಟ್ಟರೆ ಸಾಕು.
ಹೌದು.. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿ ಇಡುವುದರಿಂದ ಅದರಲ್ಲಿನ ಪೋಷಕಾಂಶಗಳ ಪ್ರಮಾಣ ಹೆಚ್ಚಾಗುತ್ತದೆ. ಒಣದ್ರಾಕ್ಷಿಯನ್ನು ನೆನಸಿ ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶಗಳು ಯಥೇಚ್ಛ ಪ್ರಮಾಣದಲ್ಲಿ ಸೇರುತ್ತವೆ.
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
ವಿಟಮಿನ್ಸ್, ರೋಗ ನಿರೋಧಕ ಶಕ್ತಿ, ಮಿನರಲ್ಸ್ಗಳು ಹೇರಳವಾಗಿ ದೊರೆಯುತ್ತದೆ. ಅಂದಹಾಗೇ, ಒಣದ್ರಾಕ್ಷಿಯಲ್ಲಿ ನಾರಿನಾಂಶವೂ ಉತ್ಕೃಷ್ಟ ಮಟ್ಟದಲ್ಲಿ ದೊರೆಯುತ್ತದೆ.
ಅಲ್ಲದೇ, ಪೋಟ್ಯಾಶಿಯಂ ಅಂಶವೂ ಕೂಡ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿಟ್ಟು ತಿನ್ನುವುದರಿಂದ ದೇಹಕ್ಕೆ ಹೇರಳವಾಗಿ ದೊರೆಯುತ್ತದೆ. ಇದ್ರಿಂದ ರಕ್ತದ ಒತ್ತಡ ಪ್ರಮಾಣವೂ ನಿಯಮಿತವಾಗಿ ಇರುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಇದನ್ನೂ ಓದಿ:
ದಿನ ಒಂದೆರಡು ಏಲಕ್ಕಿ ಜಗಿದು ತಿಂದ್ರೆ ಸಾಕು; ನಿಮ್ಮ ತೂಕ ಫಟಾಫಟ್ ಇಳಿಯುತ್ತೆ!
ಇಡೀ ರಾತ್ರಿ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿ, ಬೆಳಗ್ಗೆ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯೂ ದೇಹದಲ್ಲಿ ಹೆಚ್ಚಾಗುತ್ತದೆ.
ವಿಟಮಿನ್ಸ್ ಮತ್ತು ಮಿನರಲ್ ಗಳು ಹೇರಳವಾಗಿ ದೇಹಕ್ಕೆ ಪೂರೈಕೆ ಆಗುವುದರಿಂದ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುತ್ತದೆ. ಈ ಮೂಲಕ ದೇಹದಲ್ಲಿ ರೋಗವನ್ನು ನಿಯಂತ್ರಿಸುವ ಶಕ್ತಿಯೂ ಹೆಚ್ಚಾಗುತ್ತದೆ.
ಫೈಬರ್ ಹೇರಳವಾಗಿ ದೊರೆಯುತ್ತದೆ**,** ಜೀರ್ಣಕ್ರಿಯೆಗೆ ನೆನಸಿದ ದ್ರಾಕ್ಷಿಯೇ ಮದ್ದು
ಇನ್ನು, ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿ ತಿನ್ನುವುದರಿಂದ ದೇಹಕ್ಕೆ ಯಥೇಚ್ಛವಾಗಿ ನಾರಿನಾಂಶವೂ ದೊರೆಯುತ್ತದೆ. ಇದ್ರಿಂದ ಜೀರ್ಣ ಕ್ರಿಯೆಯೂ ಉತ್ತಮವಾಗುತ್ತದೆ.
ಮತ್ತೊಂದು ಪ್ರಮುಖ ವಿಷಯ ಏನಂದ್ರೆ, ಫೈಬರ್ ಅಂಶವೂ ಹೇರಳವಾಗಿ ದೊರೆಯುವುದರಿಂದ ಕರಳು ಕ್ಯಾನ್ಸರ್ ಅನ್ನು ಕೂಡ ತಡೆಗಟ್ಟಬಹುದು. ಹೀಗಾಗಿ, ನೀರಿನಲ್ಲಿ ನೆನಸಿಟ್ಟು ಸೇವಿಸುವ ಒಣಗಿದ ದ್ರಾಕ್ಷಿಯು ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಾದ ಆಹಾರ ಅಂತ ಹೇಳಿದರೆ ತಪ್ಪಾಗಲಾರದು.
ದೇಹಕ್ಕೆ ಶಕ್ತಿಯನ್ನ ಆ ಕ್ಷಣವೇ ಪೂರೈಸುತ್ತದೆ:
ಸುಸ್ತು, ನಿಶ್ಯಕ್ತಿ ಉಂಟಾದಾಗ ಒಣಗಿದ ದ್ರಾಕ್ಷಿಯೂ ದೇಹಕ್ಕೆ ಅತ್ಯಂತ ವೇಗವಾಗಿ ಶಕ್ತಿಯನ್ನು ಪೂರೈಸುತ್ತದೆ. ಅದ್ರಲ್ಲೂ ನೀರಿನಲ್ಲಿ ನೆನಸಿಟ್ಟ ದ್ರಾಕ್ಷಿಯನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯೂ ವೇಗವಾಗಿ ವೃದ್ಧಿಸುತ್ತದೆ.
ಇದ್ರಿಂದಾಗೇ ಅನೇಕ ಕ್ರೀಡಾಪಟುಗಳು ಒಣಗಿದ ದ್ರಾಕ್ಷಿಯನ್ನು ತಮ್ಮ ಆಹಾರದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರ ಜತೆಗೆ ಹೊರಗಡೆ ಕೆಲಸ ಕಾರ್ಯಗಳಿಗೆ ತೆರಳುವ ಉದ್ಯಮಿಗಳು, ರಾಜಕೀಯ ನಾಯಕರು ಕೂಡ ಒಣದ್ರಾಕ್ಷಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ನೀರಿನ್ಲಲಿ ನೆನಸಿಟ್ಟ ದ್ರಾಕ್ಷಿಯನ್ನು ಸೇವಿಸುವುದರಿಂದ ದೇಹವೂ ಬೇಗನೇ ಸುಸ್ತಾಗುವುದಿಲ್ಲ.
ನೀರಿನಲ್ಲಿ ನೆನಸಿಟ್ಟ ಒಣದ್ರಾಕ್ಷಿಯನ್ನು ನೇರವಾಗಿ ತಿನ್ನಲು ಇಷ್ಟಪಡದವರು ಬೇರೆ ಬೇರೆ ರೀತಿಯಲ್ಲೂ ಸೇವಿಸಬಹುದು. ಓಟ್ಸ್ನಲ್ಲಿ ಬೆರೆಸಿಯೂ ಒಣದ್ರಾಕ್ಷಿಯನ್ನು ಸೇವಿಸಬಹುದು. ಇದ್ರ ಜತೆಗೆ, ಯೋಗಾರ್ಟ್, ಕೇಕ್ ಜತೆಗೆ ಬೇಕರಿಯ ಪದಾರ್ಥಗಳ ಜತೆಗೆ ಒಣದ್ರಾಕ್ಷಿಯನ್ನು ತಿನ್ನಬಹುದು.
ಮತ್ತೊಂದು ವಿಷಯ ಏನಂದ್ರೆ, ನೀರಿನಲ್ಲಿ ನೆನಸಿಟ್ಟ ಒಣದ್ರಾಕ್ಷಿಯನ್ನು ಮುಂಜಾನೆಯೇ ಸೇವಿಸಿದ್ರೆ ಉತ್ತಮ. ಯಾಕಂದ್ರೆ, ಖಾಲಿ ಹೊಟ್ಟೆಯಲ್ಲಿ ನೀರಿನಲ್ಲಿ ನೆನಸಿಟ್ಟ ಒಣದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಪೋಷಕಾಂಶಗಳು ಅತ್ಯಂತ ಹೆಚ್ಚಾಗಿ ದೊರೆಯುತ್ತದೆ.
Bad Signಗಳು ಎಂದರೆ ಇವೇ ನೋಡಿ
ವಿಟಮಿನ್ಸ್, ಮಿನರಲ್ಸ್, ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಇನ್ನು, ನೀರಿನಲ್ಲಿ ನೆನಸಿಟ್ಟ ದ್ರಾಕ್ಷಿಯನ್ನು ಸೇವಿಸಿದ ನಂತರ, ಉಳಿದ ನೀರನ್ನು ಕೆಲವರು ಸೇವಿಸಲು ಇಷ್ಟ ಪಡುವುದಿಲ್ಲ. ಇದು ಅವರವರ ಅಭಿರುಚಿಗೆ ಬಿಟ್ಟಿದ್ದು. ದ್ರಾಕ್ಷಿ ನೆನೆಸಿಟ್ಟ ನೀರಿನಿಂದ ಆ ಮಟ್ಟಿಗೆ ಪೋಷಕಾಂಶಗಳು ದೇಹಕ್ಕೆ ಪೂರೈಕೆ ಆಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

