ದೆಹಲಿ: ನೈಋತ್ಯ ದೆಹಲಿಯ ದ್ವಾರಕದಲ್ಲಿರುವ ಮನೆಯೊಂದರಲ್ಲಿರುವ ಕಪಾಟಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಕೊಲೆಯ ಹಿಂದೆ ಆಕೆಯ ಲೈವ್-ಇನ್ ಸಂಗಾತಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಳದ ಒಂದೂವರೆ ತಿಂಗಳಿನಿoದ ಮಗಳು ವಿಪಾಲ್ ಎಂಬ ಹುಡುಗನ ಜೊತೆ ಬಾಡಿಗೆ ಫ್ಲಾಟ್‌ನಲ್ಲಿ ವಾಸವಾಗಿದ್ದಳು ಎಂದು ಮಹಿಳೆಯ ತಂದೆ ತಿಳಸಿದ್ದಾರೆ. ಇದನ್ನೂ ಓದಿ:ಮಂಡ್ಯದಲ್ಲಿ ಹೆಚ್‌ಡಿಕೆ ನಾಮಪತ್ರ ಸಲ್ಲಿಕೆ: ಕೈ ವಿರುದ್ಧ ಮೈತ್ರಿ ನಾಯಕರ ಬಲ ಪ್ರದರ್ಶನ
ನಡೆದಿದ್ದೇನು?
ಮಹಿಳೆಯ ತಂದೆ ಕೆಲವು ದಿನಗಳ ಹಿಂದೆ ಮಗಳಿಗೆ ಕರೆ ಮಡುತ್ತಿದ್ದರು. ಆದರೆ ಮಗಳ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಪೊಲಿಸರಿಗೆ ದೂರು ನೀಡಿದ್ದರು. ಬುಧವಾರ ರಾತ್ರಿ ಪೊಲೀಸರಿಗೆ ಕರೆ ಬಂದಿದೆ. ಮಗಳನ್ನು ಕೊಲೆ ಮಾಡಿರಬಹುದು ಎಂದು ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ . ಇದನ್ನೂ ಓದಿ:ಎನ್‌ಡಿಎ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ನಾಮಪತ್ರ ಸಲ್ಲಿಕೆ: ಬೆಂಗಳೂರು ಗ್ರಾಮಾಂತರ
ನಂತರ ದಾಬ್ರಿ ಪಲೋಸ್ ಠಾಣೆಯ ತಂಡವು ದ್ವಾರಕಾದ ರಾಜಪುರಿ ಪ್ರದೇಸದಲ್ಲಿ ಹೇಳಿದ ಮಗಳ ಮನೆಗೆ ಹೋಗಿದ್ದಾರೆ. ಫ್ಲಾಟ್‌ಗೆ ತೆರಳಿದಾಗ ಆಕೆಯ ಮೃತದೇಹವು ರೂಮಿನ ಕಪಾಟಿನಲ್ಲಿ ಪತ್ತೆಯಾಗಿದೆ. ತಂದೆ, ಮಗಳನ್ನು ಆಕೆಯ ಲೈವ್-ಇನ್ ಸಂಗಾತಿ ವಿಪಾಲ್ ಹತ್ಯೆ ಮಾಡಿದ್ದಾನೆ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಆರ್ಮಿ ಆಫೀಸ್ ಎಂದು ನಂಬಿಸಿ , ಹಣ ಕೇಳಿದ್ರೆ ಫೇಕ್ ಪೇಮೆಂಟ್
ಕೊನೆಯ ಬಾರಿ ಮಗಳೊಂದಿಗೆ ಮಾತನಾಡಿದ ಅವರು, ವಿಪಾಲ್ ಮಗಳನ್ನು ಥಳಿಸುತ್ತಿದ್ದ ಆಕೆಗೆ ತನ್ನನ್ನು ಕೊಲೆ ಮಾಡಬಹುದೆಂಬ ಭಯವಿತ್ತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿವಣ್ಣ : ಇಂದು ಡಿಸ್ಚಾರ್ಜ್
ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಯ ಪತ್ತೆಗೆ ಪ್ರಯತ್ನಗಳ ನಡೆಯುತ್ತಿವೆ. ಇದನ್ನೂ ಓದಿ:ಪಾರ್ಕಿಂಗ್ ವಿಚಾರಕ್ಕೆ ಪಕ್ಕದ ಮನೆಯವರೊಂದಿಗೆ ಕಿರಿಕ್ ಮಾಡಿಕೊಂಡ ನಟಿ ಶರಣ್ಯ