ಬೆಂಗಳೂರು: ಲೋಕಸಭಾ ಚುನಾವಣೆಗೆ ಎಲ್ಲೆಡೆ ಮತದಾರೆನ್ನು ಸೆಳೆಯಲು ಅರ್ಭಯರ್ಥಿಗಳು ನೂರಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜನರಿಗೆ ಹಂಚಲು ತಂದಿದ್ದಂತಹ 18 ಕೋಟಿಗೂ ಅಧಿಕ ಮೊತ್ತದ ಹಲವಾರು ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ಮೂಲಕ ಸೀಜ್ ಮಾಡಿದ್ದಾರೆ. ಇದರಲ್ಲಿ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸಹ ಸೇರಿವೆ.
ಚುನಾವಣೆ ಬೆನ್ನಲೇ ಇವರೆಗೂ 4 ಕೋಟಿ ನಗದು ಸೀಜ್ ಮಾಡಿದ್ದಾರೆ ಎಂದು ಬೆಂಗಳೂರು ಜೆಲ್ಲಾ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೆಂಡತಿಯ ಬರ್ಬರ ಹತ್ಯೆ, ಜಗಳ ಬಿಡಿಸಲು ಬಂದ ಅತ್ತೆಯೂ ಗಂಭೀರ
ಇಲ್ಲಿಯವರೆಗೆ 93640.935 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಜೊತೆಗೆ 37,50,000 ರೂಪಾಯಿ ಮೌಲ್ಯದ 18.409 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. 6,72,77,420 ರೂಪಾಯಿ ಮೌಲ್ಯದ 103.564 ಕೆಜಿ ಮಾದಕ ದ್ರವ್ಯವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪಕ್ರಟ.. ದಕ್ಷಿಣ ಕನ್ನಡ ಪ್ರಥಮ
1,09,34,877 ರೂಪಾಯಿ ಮೌಲ್ಯದ ಇತರೆ ವಸ್ತುಗಳು ಹಾಗೂ ಈ ಎಲ್ಲ ವಸ್ತುಗಳನ್ನು ಸಾಗಿಸುತ್ತಿದ್ದಂತಹ ಒಟ್ಟು 65 ವಾಹನಗಳನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವಾಹನಗಳ ಮೌಲ್ಯ 1,52,41,560 ರೂಪಾಯಿ ಆಗಿದೆ. ಯಾವುದೇ ದಾಖಲೆ ಇಲ್ಲದ 18,28,49,790 ರೂಪಾಯಿ ಸೀಜ್ ಮಾಡಲಾಗಿದೆ. ಈವರೆಗೆ ನಗರ ವ್ಯಾಪ್ತಿಯಲ್ಲಿ ಒಟ್ಟು 18,36,14,569 ರೂಪಾಯಿ ಮೌಲ್ಯದ ವಸ್ತುಗಳನ್ನ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರ ಜೊತೆಗೆ ಇಲ್ಲಿಯವರೆಗೆ ಚೆಕ್ ಪೋಸ್ಟ್ ತಪಾಸಣೆ ಮಾಡುವಾಗ ಒಟ್ಟು 1,939 ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೆತ್ತ ಮಕ್ಕಳನೇ ಕೊಲೆ ಮಾಡಿದ ಪಾಪಿ ತಾಯಿ