ಬೆಂಗಳೂರು: ಮದ್ಯಪಾನ ಮಾಡಬೆಡವೆಂದು ಬುದ್ಧಿ ಮಾತು ಹೇಳಿದ್ದಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.
ವೆಂಕಟೇಶ್(45) ಕೊಲೆಯಾದ ವ್ಯಕ್ತಿ. ಪವನ್ ಹಾಗೂ ನಂದಕುಮಾರ್ ಎಂಬ ಯುವಕರು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಮನೆಗೆ ತೆರಳುತ್ತಿದ ವೆಂಕಟೇಶ್ ಅವರು, ಕುಡಿಯುತ್ತಿದ್ದ ಯುವಕರಿಗೆ ಮದ್ಯಪಾನ ಮಾಡಬೇಡಿ, ಇನ್ನು ಚಿಕ್ಕ ವಯಸ್ಸಿದೆ. ಎಂದು ಬುದ್ಧಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ಹೆತ್ತ ಮಕ್ಕಳನೇ ಕೊಲೆ ಮಾಡಿದ ಪಾಪಿ ತಾಯಿ
ಇದರಿಂದ ಕೋಪಗೊಂಡ ಪವನ್‌ಕುಮಾರ್ , ವ್ಯಕ್ತಿಗೆ ಚಾಕು ತೆಗೆದುಕೊಂಡು ಇರಿದು ಎಸ್ಕೇಪ್ ಆಗಿದ್ದನು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವೆಂಕಟೇಶನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹೆಂಡತಿಯ ಬರ್ಬರ ಹತ್ಯೆ, ಜಗಳ ಬಿಡಿಸಲು ಬಂದ ಅತ್ತೆಯೂ ಗಂಭೀರ
ವಿದ್ಯಾರಣ್ಯಪುರ ಪೊಲೀಸರು ಶೋಧಕಾರ್ಯ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪಕ್ರಟ.. ದಕ್ಷಿಣ ಕನ್ನಡ ಪ್ರಥಮ