ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಾಂಬರ್ ಲಾಡ್ಜ್ಗಲಲ್ಲಿ ತಂಗಲು ಕಲಬುರಗಿ ಮೂಲದ ಯುವಕನ ಆಧಾರ್ ಅನ್ನು ನಕಲು ಮಾಡಿದ್ದರು ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರನ್ನ ಬೆಂಗಳೂರಿಗೆ ಕರೆತರಲಾಗಿದೆ. ಕೋಲ್ಕತತಾದಿಂದ ಬೆಂಗಳೂರಿಗೆ ವಿಮಾನ ನಿಲ್ದಾಣಕ್ಕೆ ಶಂಕಿತರಾಗಿರುವ ಅಬ್ದುಲ್ ಮಾತೀನ್ ತಾಹ, ಮುಸಾವಿರ್ ಹುಸೇನ್‌ನನ್ನು ಏನ್‌ಐಎ ಪೊಲಿಶರು ಕರೆತಂದ್ದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ವೇಳೆ ಆಂಕಿತ ಉಗ್ರ ತೀರ್ಥಹಳ್ಳಿಯ ಮುಸಾವೀರ್ ಲಾಡ್ಜ್ಗಳಲ್ಲಿ ತಂಗೋದಕ್ಕೆ ಕಲಬುರಗಿ ನಗರದ ಯುವಕೆನೊಬ್ಬನ ಆಧಾರ್ ಕಾರ್ಡ್ ಅನ್ನು ನಕಲು ಮಾಡಿ ಬಳಸಿದ್ದಾನೆ ಅನ್ನೋ ಸಂಗತಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಆರೆಸ್ಟ್- ಕೋಡ್‌ವರ್ಡ್ ಸಹಾಯದಿಂದ ಬಾಂಬ್‌ಬ್ಲಾಸ್ಟ್
ಮುಸಾವೀರ್ ಸಾಜೀದ್ ಹುಸೇನ್ ಕಲಬುರಗಿಯ ವರ್ಧನಗರ ಬಡಾವಣೆಯ ಅನ್‌ಮೋಲ್ ಎಂಬ ಯುವಕನ ಆಧಾರ ಕಾರ್ಡ್ ಮಾಡಿಕೊಂಡಿದ್ದು, ಈ ಕಾರ್ಡ್ ಬಳಸಿ ವಿವಿಧ ಲಾಡ್ಜ್ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದ ಎನ್‌ಐಎ ತಂಡ ಆಧಾರ್ ಕಾರ್ಡ್ನಲ್ಲಿದ್ದ ವಿಳಾಸವನ್ನು ಪರಿಶೀಲಿಸಿದ ಬಳಿಕವೇ ಅದು ಫೇಕ್ ಎಂದು ಗೊತ್ತಾಗಿದೆ ಎಂದು ಮೂಲಗಳೂ ತಿಳಿಸಿವೆ. ಇದನ್ನೂ ಓದಿ:ರಾಮೇಶ್ವರಂ ಕೆಫೆ ಬಾಂಬ್‌ಬ್ಲಾಸ್ಟ್ ಪ್ರಕರಣ; ಶಂಕಿತ ಉಗ್ರರರು ಇಂದು ಬೆಂಗಳೂರಿಗೆ
ಸದ್ಯ ಶಂಕಿತ ಉಗ್ರ ಕಲಬುರಗಿ ಮೂಲದ ಯುವಕನ ಆಧಾರ್ ಕರ‍್ಡನ್ನೇ ನಕಲು ಮಾಡಿದ್ದೇಕೆ? ಶಂಕಿತ ಉಗ್ರನಿಗೆ ಆ ಯುವಕನ ಸಂರ‍್ಕ ಇತ್ತಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಿಆರ್‌ಎಸ್ ನಾಯಕಿ ಕವಿತಾ 3 ದಿನ ಸಿಸಿಬಿ ಕಸ್ಟಡಿಗೆ

