ಧಾರವಾಡ: ಹಾಲಿ ಸಂಸದ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹದ್ ಜೋಶಿ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅತ್ಯುನ್ನತ ನಾಯಕ ಪ್ರಧಾನ ಮಂತ್ರಿ ನರೇಂದ್ರಮೊಧಿ ಮತ್ತು ಜನರ ಶುಭಾರ್ಶೀವಾದಗಳೋದಿಗೆ ತಾನಿಂದು ನಾಮಪತ್ರ ಸಲ್ಲಿಸುತ್ತಿರುವೆನೆಂದು ಹೇಳಿ, ಕಾರ್ಯಕರ್ತರಲ್ಲದೆ, ಹಿರಿಯ ನಾಯಕರಾದ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಮತ್ತು ಉದ್ಯಮಿ ವಿಜಯ ಸಂಕೇಶ್ವರ್ ನಾಮಪತ್ರ ಸಲ್ಲಿಸುವ ಕಾರ್ಯಕಮ್ರದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಪತಿ ನೇರ ಭೇಟಿಗೆ ಪತ್ನಿ ಸುನಿತಾಗೆ ಅನುಮತಿ ನಿರಾಕರಣೆ: ತಿಹಾರ್ ಅಧಿಕಾರಿಗಳ ವಿರುದ್ಧ ಆಪ್ ಆರೋಪ
ಪ್ರಲ್ಹಾದ್ ಜೋಶಿಯವರಿಗೆ ಟಿಕೆಟ್ ನೀಡುವ ಕುರಿತು ಸ್ಥಳಿಯ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಕೊನೆ ರಾಜ್ಯ ಬಿಜೆಪಿ ನಾಯಕರು ಜೋಶಿಯವರ ಪರ ಬ್ಯಾಟ್ ಮಾಡಿದ ಕಾರಣ ಅವರಗೆ ಟಿಕೆಟ್ ಸಿಕ್ಕಿತು. ತಾನು ಈ ಮೊದಲು ನಾಮಪತ್ರ ಸಲ್ಲಿಸುವಾಗ ನೆರೆಯುತ್ತಿದ್ದ ಜನಕ್ಕಿಂತ ಬಹುಪಾಲು ಹೆಚ್ಚು ಜನ ಜಲ್ಲಾಧಿರಿ ಕಚೇರಿಗೆಬರಲಿದ್ದಾರೆ ಎಂದು ಜೋಶಿ ಹೇಳಿದರು. ಇದನ್ನೂ ಓದಿ: ಪ್ರತಿಕ್ರಿಯೆಗಳಿಗೆ , ಉಗ್ರರಿಗೆ ನಿಯಮ, ನಿಯಮಗಳಿಲ್ಲ: ಜೈಶಂಕರ್

