ಬೆಂಗಳೂರು: ಬೈಕ್ ಹಾಗೂ ಟಿಪ್ಪರ್ ನಡುವೆ ಭೀಕರ ಅಪಘಾತವಾಗಿದ್ದು, ಮುಖಾಮುಖೀಯಾಗಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುಇವ ಘಟನೆ ಮರತ್ತಹಳ್ಳಿ ಬಳಿಯ ಗುಂಜೂರು ಮುಖ್ಯರಸ್ತೆಯಲ್ಲಿ ನಡೆದಿದೆ.
ರಾಕೇಶ್ (18) ಮೃತಪಟ್ಟ ಬೈಕ್ ಸವಾರ. ಉತ್ತರ ಮೂಲದ ರಾಕೇಶ್ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಮಾರತ್ತಹಳ್ಳಿಯ ಬಳಿಯ ಗುಂಜೂರು ಮುಖ್ಯ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ, ಇದರ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ ಚುನಾವಣೆಯಲ್ಲಿ ನೀನು ಗೆಲ್ಲಲ ಮಿಸ್ಟರ್ ಕುಮಾರಸ್ವಾಮಿ -ಡಿಕೆಶಿ
ಪ್ರಕರಣ ಕುರಿತು ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ. ಇದನ್ನೂ ಓದಿ: ತ್ಯಾಜ್ಯ ತುಂಬಿದ ತೊಟ್ಟಿಗೆ ಬಿದ್ದು ಮಗು ಸಾವು