ಬೆಂಗಳೂರು: ರಾಮೇಶ್ವರಂ ಕಫೆ ಸ್ಪೋಟದಲ್ಲಿ ಸೆರೆಯಾದ ಆರೋಪಿಗಳ ಟಾರ್ಗೆಟ್ ಮಹಾದೇವಪುರ ವ್ಯಪ್ತಿಯಲ್ಲಿರುವ ಕಂಪನಿ ಸ್ಪೋಟಕ್ಕೆ ಸಂಚು ರೂಪಿಸಿದ್ದರು ಎಂಬ ವಿಚಾರ ಎನ್‌ಐಎ ತನಿಖಾ ದಳದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ರಾಜ್ಯದ ಮಹಾದೇವಪುರ ವಲಯದಲ್ಲಿ ಸಾಕಷ್ಟು ಐಟಿ ಕಂಪನಿಗಳೀದ್ದು ಯಾವುದಾದಾರೂ ಕಂಪನಿಯನ್ನು ಸ್ಪೋಟ ಮಾಡಿದರೆ ವಿದೇಶಿ ಬಂಡವಾಳ ಹೊಡಿಕೆದಾರರು ಭಾರತಕ್ಕೆ ಹೂಡಿಕೆ ಮಾಡಲು ಬರುವುದಿಲ್ಲ 4 ಇದರಿಂದ ದೇಶದ ಆರ್ಥಿಕತೆಗೆ ಪೆಟ್ಟು ಕೂಡಲು ಪ್ಲಾನ್ ಮಾಡಿದರು. ಇದರಿಂದಾಗಿ ದೇಶದ ಆರ್ಥಿಕತೆ ಕುಸಿಯುತ್ತದೆ ಎಂದು ಭಾವಿಸಿ ಐಟಿ ಕಂಪನಿ ಬಳಿ ದಾಳಿ ನಡೆಸಲು ತಯಾರಿ ನಡೆಸಿದ್ದರು. ಇದನ್ನೂ ಓದಿ:ದ್ವಾರಕೀಶ್ ನಿಧನಕ್ಕೆ ಸಿಎಂ, ಡಿಸಿಎಂ, ಮಾಜಿ ಸಿಎಂ ಸಂತಾಪ
ಆದರೆ ಐಟಿ ಕಂಪನಿಗಳ ಬಳಿ ಸಂಚುರುಪುಸಿದಾಗ ಅಲ್ಲಿ ಸಿಸಿಟಿವಿಗಳು ಇರುತ್ತವೆ ಮತ್ತು ಭದ್ರತಾ ಸಿಬ್ಬಂದಿ ಇರುತ್ತಾರೆ. ಪಾರ್ಕ್ ಒಳಗಡೆ ಹೋಗಲು ಅಷ್ಟು ಸುಲಭವಗಿ ಆಗುವುದಿಲ್ಲ ಎಂದು ಆ ಪ್ಲಾನ್ ಅನ್ನು ಕೈ ಬಿಟ್ಟಿದ್ದಾರೆ. ಇದನ್ನೂ ಓದಿ:ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ತೋರಿಸಿ, ಶಿಕ್ಷಕನಿಂದ ಲೈಂಗಿಕ ಕಿರುಕುಳ
ನಂತರ ಅವರು ಟೆಕ್ಕಿಗಳು ಹೆಚ್ಚು ಸೇರುವ ಜಾಗವನ್ನು ಟಾರ್ಗೆಟ್ ಮಾಡಿ ನಗರದ ಕುಂದಲಹಳ್ಳಿಯ ಬ್ರೂಕ್‌ಫೀಲ್ಡ್ ಬಳೀ ಇರುವ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿ ಬಾಂಬ್ ಸ್ಫೋಟ ಮಾಡಿದ್ದಾರೆ ಎಂಬ ವಿಚಾರ ಎನ್‌ಐಎ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಒಕ್ಕಲಿಗರ ಬ್ರಿಗೇಡ್ ವತಿಯಿಂದ ಉಚಿತ ಆರೋಗ್ಯ ಶಿಬಿರ