ನವದೆಹಲಿ: ಮಾಲ್ಡೀವ್ಸ್‌ಗೆ (Maldives) ಅಗತ್ಯ ವಸ್ತುಗಳ ರಫ್ತಿಗೆ ಭಾರತದ (India) ಬಂದರು ನಿರ್ಬಂಧ ವಿಧಿಸಿದೆ ಎಂದು ವಿದೇಶಿ ವ್ಯಾಪರ ನಿರ್ದೇಶನಾಲಯದ ಅಧಿಸೂಚನೆ ತಿಳಿಸಿದೆ.
1981 ರಲ್ಲಿ ಭಾರತದ ಮತ್ತು ಮಾಲ್ಡೀವ್ಸ್ ವ್ಯಾಪಾರ ಒಪ್ಪದಂಕ್ಕೆ ಸಹಿ ಹಾಕಿದ್ದವು. ಇದು ಅಗತ್ಯ ಸರಕುಗಳ ರಫ್ತಿಗೆ ಸಂಬಂಧಿಸಿದ್ದಾಗಿದೆ. ಮಾಲ್ಡೀವ್ಸ್ ಪ್ರವರ್ಧಮಾನಕ್ಕೆ ಬರುತ್ತಿರುವ ನಿರ್ಮಾಣ ಉದ್ಯಮಕ್ಕೆ ನಿರ್ಣಾಯಕ ವಸ್ತುಗಳಾದ ನದಿ ಮರಳು ಮತ್ತು ಜಲ್ಲಿಕಲು ರಫ್ತನ್ನು 23% ನಿಂದ 1,000,000 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ ಪಕ್ಷದ ಉದ್ಯಮಿ ಮನೆ ಮೇಲೆ ಐಟಿ ದಾಳಿ
ಮೊಟ್ಟೆ ಅಲೂಗಡ್ಡೆ, ಈರುಳ್ಳಿ, ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆಕಾಳುಗಳ ರಫ್ತು ಶೇ.5 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಭಾರತದಿಂದ ಈ ವಸ್ತುಗಳ ರಫ್ತಿನ ಮೇಲೆ ವಿಶ್ವಾದ್ಯಂತ ನಿಷೇಧದ ಹೊರತಾಗಿಯೂ ಭಾರತವು ಮಾಲ್ಡೀವ್ಸ್ಗೆ ಅಕ್ಕಿ, ಸಕ್ಕರೆ ಮತ್ತು ಈರುಳ್ಳಿ ರಫ್ತು ಮಾಡುವುದನ್ನು ಮುಂದುವರೆಸಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬದಲು ಐಟಿ ಕಂಪನಿ ಸ್ಫೋಟಿಸಲು ತಯಾರಿ ನಡೆಸಿದ ಉಗ್ರರು
ನಾಲ್ಕು ಕಸ್ಟಮ್ಸ್ ಸ್ಟೇಷನ್‌ಗಳ ಮೂಲಕ ಮಾತ್ರ ದ್ವೀಪ ರಾಷ್ಟ್ರಕ್ಕೆ ವಸ್ತುಗಳ ರಫ್ತಿಗೆ ಅನುಮತಿ ನೀಡಲಾಗುತ್ತದೆ. ಮಂಡ್ರಾ ಸೀ ಪೋರ್ಟ್, ಟ್ಯುಟಿಕೋರಿನ್ ಸೀ ಪೋರ್ಟ್, ನ್ಹವಾ ಶೇವಾ ಸೀ ಪೋರ್ಟ್ ಮತ್ತು ಐಸಿಡಿ ತುಘಲಕಾಬಾದ್ ಸ್ಟೇಷನ್‌ಗಳು ಎಂದು ಡಿಜಿಎಫ್‌ಟಿ ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ.ಇದನ್ನೂ ಓದಿ: ದ್ವಾರಕೀಶ್ ನಿಧನಕ್ಕೆ ಸಿಎಂ, ಡಿಸಿಎಂ, ಮಾಜಿ ಸಿಎಂ ಸಂತಾಪ

