ಧನುಷ್ ಮತ್ತು ಐಶ್ವರ್ಯ ಡಿವೋರ್ಸ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ತಮ್ಮಗೆ ಡಿವೋರ್ಸ್ ಬೇಕೆಂದು ಒಟ್ಟಾಗಿಯೇ ಚೆ ಕೌಟುಂಬಿಕ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು.
ಇದೀಗ ಈ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು ಒಟ್ಟಾಗಿಯೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಢಿದೆ. ಅಕ್ಟೋಬರ್ 7 ರಂದು ಇಬ್ಬರೂ ನ್ಯಾಯಾಲಕ್ಕೆ ಬರಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದೆ.
ಇಬ್ಬರೂ ತಮ್ಮ ಸಾಮಾಜಿಕ ಜಾಲತಣದಲ್ಲಿ ಡಿವೋರ್ಸ್ ಬಗ್ಗೆ ಹಂಚಿಕೊಂಡ ನಂತರ ಒಟ್ಟಾಗಿಸುವ ಪ್ರಯತ್ನ ನಡೆಯಿತ್ತು. ಸ್ವತಃ ರಜನಿಕಾಂತ್ ಅವರೇ ಇಬ್ಬರೊಂದಿಗೂ ಮಾತನಾಡಿದ್ದರು. ಆದರೆ ಈ ಪ್ರಯತ್ನ ವಿಫಲವಾಗಿತ್ತು.
ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿಗೆ 18 ವರ್ಷಗಳ ನೆನಪುಗಳಿವೆ. ಲಿಂಗ ಮತ್ತು ಯಾತ್ರಾ ಹೆಸರಿನ ಇಬ್ಬರೂ ಪುತ್ರರೂ ಇದ್ದಾರೆ. ಐಶ್ವರ್ಯ ನಿರ್ದೇಶಕಿಯಾಗಿ ಹಲವಾರು ಚಿತ್ರಗಳನ್ನು ಮಾಡಿದ್ದಾರೆ, ಧನುಷ್ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಹಾಗಾಗಿ ಈ ಜೋಡಿ ದೂರ ಆಗುತ್ತಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಶಾಕ್ ಆಗಿದೆ.

