ನಟ ದರ್ಶನ್ (Darshan) ಎರಡು ದಿನಗಳ ಹಿಂದೆಯಷ್ಟೇ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Chandru) ಪರ ಮತಯಾಚನೆ ಮಾಡಿದ್ದರು. ಅವರು ಇದೀಗ ಮತ್ತೋರ್ವ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ದರ್ಶನ್ ಮುಂದಾಗಿದ್ದಾರೆ.
ಇಂದು ಬೆಂಗಳೂರು ಗ್ರಾಮಂತರ ಕ್ಷೇತ್ರದ ಅಭ್ಯರ್ಥಿ ಡಿ.ಕೆ ಸುರೇಶ್ ಅವರ ಪರವಾಗಿ ಡಿಬಾಸ್ ಪ್ರಚಾರ ಮಾಡಲಿದ್ದು, ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ – 280.64 ಕೋಟಿ ರೂ ಆಸ್ತಿ ಘೋಷನೆ
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಯಶವಂತ ಪುರ ಮಾರ್ಕೆಟ್, ಲಗ್ಗೆರೆ ಸರ್ಕಲ್, ಕೊಟ್ಟಿಪಾಳ್ಯ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉತರಹಳ್ಳಿ, ವೀವರ್ಸ್ ಕಾಲೋನಿ, ಕೊಟ್ಟಿಗೆರೆ ವಾರ್ಡ್ಗಳಲ್ಲಿ ಇಂದು ದರ್ಶನ್ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ