ಬೆಂಗಳೂರು: ನೇಹಾ ಹತ್ಯೆ ಕುರಿತು ನನ್ನ ಹೇಳಿಕೆಯಿಂದ ನೇಹಾ (Neha) ಪೋಷಕರಿಗೆ ಬೇಸರವಾಗಿದ್ದರೆ ವಿಷಾದವಿರಲಿ ಎಂದು ಗೃಹ ಸಚಿವ ಜೆ. ಪರಮೇಶ್ವರ್ (G. Parameshwara) ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಕುರಿತು ಪರಮೇಶ್ವರ್ ಅವರು ಪ ನೇಹಾ ಹತ್ಯೆ ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನೇಹಾ ಹತ್ಯೆ ಹೇಳಿಕೆಯಿಂದ ಅವರ ಪೋಷಕರಿಗೆ ಬೇಸರವಾಗಿದ್ದಾರೆ ವಿಷಾದವಿರಲಿ. ಆದರೆ ಸತ್ಯವನ್ನು ಮುಚ್ಚಿಡೋಕೆ ಯಾವತ್ತೂ ಆಗಲ್ಲ. ತನಿಖೆ ಬಳಿಕ ಎಲ್ಲಾ ವಿಷಯ ಹೊರಬರುತ್ತೆ. ನಮಗೆ ಬಂದಿರೋ ವರದಿ ಪ್ರಕಾರ ಮಾತಾಡಿದ್ದೇವೆ. ಎಬಿವಿಪಿ ಮತ್ತೊಬ್ಬರಾಗಲಿ ಅವರಿಗೆ ಸತ್ಯಾಂಶ ಗೊತ್ತಿಲ್ಲ ಎಂದರು. ಇದನ್ನೂ ಓದಿ: ನನ್ನ ಮಗನ ತಪ್ಪಿಗೆ ಕರ್ನಾಟಕದ ಜನತೆ, ನೇಹಾ ತಂದೆ-ತಾಯಿ ಬಳಿ ಕ್ಷಮೆಯಾಚಿಸುತ್ತೇನೆ: ಕೊಲೆಗಾರ ತಾಯಿ ಕಣ್ಣೀರು

ಎಬಿವಿಪಿ (ABVP) ಕಾರ್ಯಕರ್ತರ ಮುತ್ತಿಗೆ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಸತ್ಯಾಸತ್ಯತೆ ಗೊತ್ತಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ನಮಗೆ ಜವಾಬ್ದಾರಿ ಇದೆ. ಅದರ ಬಗ್ಗೆ ತನಿಖೆ ಆಗುತ್ತೆ ಅಲ್ವಾ. ತನಿಖೆಯಲ್ಲಿ ಎಲ್ಲಾ ಸತ್ಯ ಹೊರಬೀಳುತ್ತೆ ಎಂದು ಹೇಳಿದರು. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಗೃಹಸಚಿವರ ಮನೆ ಮುತ್ತಿಗೆಗೆ ಎಬಿವಿಪಿಯಿಂದ ಯತ್ನ

