ಕನ್ನಡದ ನಟ ನಟಿಯರು ಈಗಾಗಲೇ ವಿವಿದ ಪಕ್ಷಗಳಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದಾರೆ. ಅವರು ತಮ್ಮಗೆ ಇಷ್ಟವಾದ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರದಲ್ಲೂ ಅವರು ತೊಡಗಿಕೊಂಡಿದ್ದಾರೆ.

ಇದೀಗ ಮಿಸ್ ಇಂಡಿಯಾ ವಿಜೇತೆ ಮತ್ತು ಚಿಕ್ಕಮಗಳೂರು ಮೂಲದ ನಟಿ ಪೂಜಾ ರಮೇಶ್ (Pooja Ramesh) ಬಿಜೆಪಿ (BJP) ಸೇರಿಕೊಂಡಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಪೂಜಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ವಿಜಯ್ ಜೊತೆ ರಾಜಕೀಯಕ್ಕೆ ಬರೋಕೆ ಸಜ್ಜಾದ ವಿಶಾಲ್
ಸದ್ಯ ಪುಜಾ ಅವರು ನಾಲ್ಕು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಸಮಾಜಸೇವೆಯಲ್ಲಿ ಗುರುತಿಸಿಕೊಂಡು ರಾಜಕೀಯ ಅಂಗಳಕ್ಕೆ ಪ್ರವೇಶ ಮಾಡಿದ್ದಾರೆ. ಈ ಹಿಂದೆ ರಾಯಚೂರು ಕ್ಷೇತ್ರದಿಂದ ಎಎಪಿನಿಂದ ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಂತು ಅನುಭವ ಪಡೆದುಕೊಂಡಿದ್ದರು. ಸದ್ಯ ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ನೇಹಾ ಹಿರೇಮಠ ತಂದೆ ಬಳಿ Very Sorry ಎಂದ ಸಿಎಂ