ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಬೆಂಕಿ ಆವಘಡ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಿಟಿಯ ಸಿಂಘಸಂದ್ರದ ಬಳಿಯ ಮಣಿಪಾಲ್ ಕಂಟ್ರಿ ರಸ್ತೆಯಲ್ಲಿರುವ ಟಿಂಬರ್‌ನಲ್ಲಿ ಬೆಂಕಿ ಕಾಣಿಸಿದೆ.
ಅಲಲಿ ಕಟ್ಟಿಗೆಗಳನ್ನು ಸಂಗ್ರಹ ಮಾಡಲಾಗಿತ್ತು. ಅದೇ ಜಾಗದಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕಿನ್ನಾಲೆಗೆ ಪಕ್ಕದಲ್ಲಿದ್ದ ಕಾರ್ ವಾಸ್ ರೂಂನಲ್ಲಿದ್ದ ಎರಡು ಕಾರುಗಳು ಭಸ್ಮಗೊಂಡಿದೆ. ಇದನ್ನೂ ಓದಿ: ಡಾ. ರಾಜ್‌ಕುಮಾರ್ 95 ನೇ ವರ್ಷದ ಹುಟ್ಟುಹಬ್ಬ ಇಂದು
ಜೊತೆಗೆ ಟಿಂಬರ್ ಹಿಂದೆಯಿದ್ದ ಗಾರ್ಮೆಂಟ್ಸ್ ಕಟ್ಟಡದ ನಾಲ್ಕಾನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬ್ಯ್ರಾಂಡೆಡ್ ರೆಡಿಮೆಡ್ ಬಟ್ಟೆಗಳು ಪ್ಯಾಕ್ ಆಗಿದ್ದ ಬಾಕ್ಸ್ಗಳು ಸುಟ್ಟು ಹೋಗಿವೆ. ಇದನ್ನೂ ಓದಿ: ಆಂಟಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್
ಸದ್ಯ ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಯಶ್ವಸಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ಮೋದಿ ವಿರುದ್ಧ ಕಾಂಗ್ರೆಸ್ ನೀಡಿರುವ ದೂರು ಪರಿಗಣನೆಯಲ್ಲಿದೆ : ಚುನಾವಣಾ ಆಯೋಗ

