ದಾವಣಗೆರೆ: ತಾಯಿ (Mother) ಸಾವಿಗೆ ತಂದೆ (Father) ಕಾರಣ ಎಂದು ಮಗ (Son) ತಂದೆಯನ್ನು ಕೊಲೆ ಮಾಡಿರುವ ಘಟನೆ ಜೆಲ್ಲೆಯ ಜಗಳೂರು (Jagaluru) ತಾಲೂಕಿನ ಲಕ್ಕಿಂಪುರ ಗ್ರಾಮದಲ್ಲಿ ನಡೆದಿದೆ.
ಅಂಜನಪ್ಪ (60) ರನ್ನು ಮಗ ರಮೇಶ್ ಹತ್ಯೆಗೈದಿದ್ದಾನೆ. ಅಂಜನಪ್ಪ ಅವರು ನಿತ್ಯ ಕುಡಿದು ಮನೆಗೆ ಬರುತ್ತಿದ್ದರು. ಮನೆಗೆ ಬಂದು ನಿತ್ಯವೂ ಜಗಳವಾಡುತ್ತಿದ್ದರು. ಪತಿ ಕಿರುಕುಳಕ್ಕೆ ಬೇಸೆತ್ತ ಪತ್ನಿ ತಪ್ಪಮ್ಮ (52) ಅವರು ತಡರಾತ್ರಿ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ರಾಜಸ್ಥಾನದ ಜೈಸಲ್ಮೇರ್ ಬಳಿ ಬಳಿ ಐಎಎಫ್ ಕಣ್ಗಾವಲು ವಿಮಾನ ಪತನ
ಇದನ್ನು ಗಮನಿಸಿದ ರಮೇಶ್ ತಾಯಿ ಸಾವಿಗೆ ತಂದೆಯೇ ಕಾರಣ ಎಂದು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ರಮೇಶ್‌ನನ್ನು ಜಗಳೂರು ಠಾಣೆ ಪೊಲೀಸ್‌ರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬರದಿಂದ ಏರಿಕೆಯಾದ ತರಕಾರಿ – ಸೆಂಚುರಿ, ಡಂಬಲ್ ಸೆಂಚುರಿ ದಾಟಿದ ಬೆಳೆ