ಬೆಂಗಳೂರು: ಮೂವರು ಯುವಕರು (Youths) ರೈಲಿಗೆ (Train) ಸಿಲುಕಿ ಸಾವನ್ನಪ್ಪಿರುವ ಘಟನೆ ಮಾರತ್ತಹಳ್ಳಿ ರೈಲ್ವೇ (Railway Station) ನಿಲ್ದಾಣದ ಬಳಿ ನಡೆದಿದೆ.
ಶಶಿಕುಮಾರ್ (23) ಲೋಕೇಶ್ (25) ಮೃತರು. ಇವರು ಮೂಲತಃ ಅಂಧ್ರಪ್ರದೇಶದ ಚಿತ್ತೂರಿನವರು ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಸಾರ್ವಜನಿಕರು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರಿಗೆ ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸದ್ಯ ಅಪಘಾತದಲ್ಲಿ ಸಾವಿಗೀಡಾದ ಮತ್ತೋರ್ವನ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಡಿ ನೀಡಿ ಪರಿಶಿಲನೆ ನಡೆಸಿದ್ದಾರೆ.
ಯುವಕರು ಆತ್ಮಹತೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

