–ಮತಹಾಕದವರಗೆ ಬೀದಿ ಬೀದಿಯಲ್ಲಿ ಬ್ಯಾನರ್ ಹಾಕಿ ಶ್ರದ್ಧಾಂಜಲಿ ಅರ್ಪಣೆ
ಬೆಂಗಳೂರು: ಲೋಕಸಭಾ ಚುನಾವಣೆ (Loka Sabha Election) ಮೊದಲ ಹಂತದ ಚುನಾವಣೆ ಮುಕ್ತಾಯ ಬೆನ್ನಲೆ ರಾಜಧಾನಿ ಬೆಂಗಳೂರು ವಲಸೆ ನಿವಾಸಿಗಳ ವಿರುದ್ಧ ನಾಗರಿಕರು ಕೆಂಡಕಾರಿದ್ದಾರೆ.-
ಪ್ರತೀ ಸಲದಂತೆ 2024 ರ ಲೋಕಸಭಾ ಚುನಾವಣೆಗೂ ಸಹ ವಲಸಿಗರು ಕೈ ಕೊಟ್ಟಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ (Silicon City) ಮಾತದಾನ ಮಾಡುವಂತೆ ಚುನಾವಣಾ ಆಯೋಗ ಬೀದಿ ಬೀದಿ ಪ್ರಚಾರ ಮಾಡಿದ್ದರು. ಆದರೂ ವೋಟ್ ಹಾಕದೆ ನಿರ್ಲಕ್ಷ್ಯ ಮಾಡಿದ್ದಾರೆ.ಇದನ್ನೂ ಓದಿ: ಕೋಲ್ಕತ್ತಾ ಸೇರಿ ದೇಶದ 4 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ
ಬೆಂಗಳೂರಿನಲ್ಲಿ ಮತದಾನ ಮಾಡದಿದ್ದಕ್ಕೆ ನಾಗರೀಕರು ಪೋಸ್ಟರ್ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಮತಹಾಕದವರಿಗೆ ಬೀದಿ ಬೀದಿಯಲ್ಲಿ ಬ್ಯಾನರ್ ಹಾಕಿ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ. ಅಲ್ಲದೇ ಬದುಕಿದ್ದು ಸತ್ತಂತೆ ವರ್ತಿಸಿ ಮತದಾನ ಮಾಡದೆ ಇರುವುದಕ್ಕೆ ಬೇಸರದ ವಿಷಯವಾಗಿದೆ. ಇದನ್ನೂ ಓದಿ: ಚಿನ್ನದ ನಾಡಲ್ಲಿ ಇವಿಎಂ ಮೆಷಿನ್ ಸಾಗಿಸುತ್ತಿದ್ದ ಟೈರ್ ಬ್ಲಾಸ್ಟ್
ಇದೇ ಕಾರಣಕ್ಕೆ ಬೆಂಗಳೂರು ಉತ್ತರದಲ್ಲಿ 54.42 %, ಬೆಂಗಳೂರು ಸೆಂಟ್ರಲ್ 52.81% ಹಾಗೂ ಬೆಂ. ದಕ್ಷಿಣ 53.15% ಅಷ್ಟೇ ಮತದಾನ ಆಗಿದೆ. ನಗರದ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಕಲ್ಸಿದ್ರೂ ಮತದಾನದ ಮೌಲ್ಯ ಗೊತ್ತಿಲ್ಲದೇ ನಿರ್ಲಕ್ಷ್ಯ ಮಾಡಲಾಗಿದ್ದೆ. ಹೀಗಾಗಿ ನಗರದ ಹಲವು ಕಡೆ ಸತ್ ಪ್ರಜೆಗಳು, ಅವರು ಬದುಕಿದ್ದು ಸತ್ತಂತೆ ವರ್ತಿಸಿದವರ ವಿರುದ್ಧ ನಾಗರಿಕರು ನಿಮಗಿದೋ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಗ್ರರಿಂದ ಬಂಬ್ ದಾಳಿ- 2 ಯೋಧರು ಹುತಾತ್ಮ

