ಧಾರವಾಡ: ಹುಬ್ಬಳ್ಳಿ ಎಂಸಿಎ ವಿದ್ಯಾರ್ಥಿ ನೆಹಾ ಹಿರೇಮಠ (Neha Hiremath) ಕೊಲೆ ಪ್ರಕರಣದಲ್ಲಿ ತನಿಖೆ ಬಹಳ ಛುರುಕಾಗಿದ್ದು, ಇಂದು ಹಂತಕ ಫಯಾಜ್‌ನನ್ನು (Fayaz) ನ್ಯಾಯಾಲಯಕ್ಕೆ ಕರೆ ತಂದಿದ್ದಾರೆ. ಜೊತೆಗೆ ಸಿಐಡಿ (CID) ಅಧಿಕಾರಿಗಳು ಡಿಎನ್‌ಎ ಪರೀಕ್ಷೆಗಾಗಿ ರಕ್ತ (Blood Sample) ಮಾದರಿಯನ್ನು ಸಂಗ್ರಹಿಸಿದ್ದಾರೆ.
ಫಯಜ್‌ಗೆ ಡಿಎನ್‌ಎ ಪರೀಕ್ಷೆ ಯಾಕೆ?ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಕೊಲೆ ಆಗಿರೋ ಜಾಗದಲ್ಲಿ ಸ್ಥಳ ಮಹಜರು ಮಾಡುವಾಗ ಕೆಲವೊಂದು ಸುಳಿವು ಸಿಕ್ಕಿರುತ್ತದೆ. ಅಲ್ಲಿ ಸಿಗುವಂತಹ ವಸ್ತುಗಳನ್ನು ಆರೋಪಿ ಫಯಾಜ್ ಜೊತೆಗೆ ಹೋಲಿಕೆ ಮಾಡಲಾಗುತ್ತದೆ. ಹೀಗಾಗಿ ಆ ವಸ್ತುಗಳು ಆರೋಪಿ ಫಯಾಜ್‌ಗೆ ಮ್ಯಾಚ್ ಮಾಡುವ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಈ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರೂ. ಪರಿಹಾರ ಘೋಷಣೆ
ನಿನ್ನೆಯೇ ಸಿಐಡಿ ಅಧಿಕಾರಿಗಳು ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ಸಂಗ್ರಹಿಸಲು ಕರ‍್ಟ್ ಅನುಮತಿ ಕೇಳಿದ್ದರು. ಒಂದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಯನ್ನ ಕರೆತಂದ ಅಧಿಕಾರಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ರಕ್ತದ ಮಾದರಿ ಸಂಗ್ರಹಿಸಿದರು. ಇದನ್ನೂ ಓದಿ: ಆಯತಪ್ಪಿ ಹೆಲಿಕಾಪ್ಟರ್ ಒಳಗೆ ಬಿದ್ದ ದೀದಿ
ನ್ಯಾಯಾಧೀಶರ ಸಮ್ಮುಖದಲ್ಲಿ ಕಿಮ್ಸ್ ವೈದ್ಯರು ಫಯಾಜ್‌ನಿಂದ ರಕ್ತದ ಮಾದರಿ ಪಡೆದ ಬಳಿಕ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದಾರೆ. ರಕ್ತದ ಮಾದರಿ ಪಡೆದ ಬಳಿಕ ಫಯಾಜ್ ನನ್ನು ಸಿಐಡಿ ಅಧಿಕಾರಿಗಳು ಮತ್ತೆ ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಹೆಂಡತಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದ ಗಂಡ- ಮದುವೆಯಾಗಿ 15 ವರ್ಷಗಳಾದರೂ ಪತ್ನಿ ಮೇಲೆ ಸಂಶಯ

