ಬೆಂಗಳೂರು: ಮೈಸೂರಿನ (Mysore) ಕೆ ಆರ್ (KR Nagar) ನಗರ ಠಾಣೆಯಲ್ಲಿ ಮಹಿಳೆಯನ್ನ ಕಿಡ್ನಾಪ್ (Kidnap) ಮಾಡಿರೋ ಆರೋಪದ ಮೇಲೆ ದಾಖಲಾಗಿದ್ದ ಕೇಸ್‌ನಲ್ಲಿ ಸಂತ್ರಸ್ಥೆ ಮಗ ನೀಡಿದ ದೂರಿನ ಆಧಾರದ ಮೇಲೆ ಎಚ್‌ಡಿ ರೇವಣ್ಣ(HD.Revanna) ಅವರನ್ನು ಶನಿವಾರ (Saturday) ಬಂಧಿಸಲಾಗಿದೆ.
ಈ ಸಂಬಂಧ ಎಸ್‌ಐಟಿ (SIT) ನೊಟೀಸ್ ನೀಡಿತ್ತು, ಶನಿವಾರ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಸಿಕ್ಕಿರಲಿಲ್ಲ. ಈ ಬೆನ್ನಲ್ಲೇ ಹೆಚ್.ಡಿ ರೇವಣ್ಣರನ್ನ ಎಸ್‌ಐಟಿ ವಶಪಡಿಸಿಕೊಂಡಿದೆ. ಕಿಡ್ನಾಫ್ ಆಗಿದ್ದ ಮಹಿಳೆಯನ್ನು ಶನಿವಾರ ಎಸ್.ಐ.ಟಿ (SIT) ಪತ್ತೆ ಹಚ್ಚಿದ್ದು, ಇಂದು ಸಂತ್ರಸ್ತೆ ಬಳಿ ಹೇಳಿಕೆಯನ್ನು ಎಸ್‌ಐಟಿ ದಾಖಲೆ ಮಾಡಿಕೊಳ್ಳಲಿದೆ. ಇದನ್ನೂ ಓದಿ: ಪ್ರಜ್ವಲ್ ಅಂತಹ ಸ್ವಭಾವದ ಹುಡುಗ ಅಲ್ಲ: ಜಿ.ಎಸ್ ಬಸವರಾಜ್
ಇಂದು ಸಂತ್ರಸ್ತೆಯರ ಸ್ಟೇಟ್ ಮೆಂಟ್ ಆಧಾರ ಮೇಲೆ ರೇವಣ್ಣರನ್ನು ವಿಚಾರಣ ನಡೆಸಲಿದ್ದಾರೆ. ಅವರು ನಿನ್ನೆ ಇಡೀ ರಾತ್ರಿ ಎಸ್‌ಪಿ ನೇತೃತ್ವದಲ್ಲಿ ಹೆಚ್.ಡಿ ರೇವಣ್ಣರನ್ನು ಡ್ರಿಲ್ ಮಾಡಿದ್ದು, ಈಗಾಗ್ಲೇ ರೇವಣ್ಣ ವಿಚಾರಣೆಗೇ ಎಸ್‌ಐಟಿ ಸಿದ್ದತೆ ಮಾಡಿಕೊಂಡಿದೆ.ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್ ಕೇಸ್; ನಾನು ಆ ವೀಡಿಯೋ ನೋಡೋ ಧೈರ್ಯ ಮಾಡಲಿಲ್ಲ: ನಿಖಿಲ್ ಕುಮಾರಸ್ವಾಮಿ
ಇಂದು ನ್ಯಾಯಾಧೀಶರ ಮುಂದೆ ರೇವಣ್ಣರನ್ನು ಎಸ್‌ಐಟಿ ಹಾಜರುಪಡಿಸಲಿದೆ. ನ್ಯಾಯಾಧೀಶರ ಹಾಜರುಪಡಿಸುವ ಮುನ್ನ ಮೆಡಿಕಲ್ ಟೆಸ್ಟ್ ಮಾಡಲಾಗುತ್ತದೆ. ಆದರಂತೆಯೇ ರೇವಣ್ಣರಿಗೆ ಬೋರಿಂಗ್ ಆಸ್ಪತ್ರೆಯಲ್ಲಿ ನಡೆದಿದೆ. ಮೆಕಲ್ ನಂತರ ನ್ಯಾಯಾಧೀಶರ ಮುಂದೆ ಎಸ್‌ಐಟಿ ಹಾಜರುಪಡಿಸಲಿದೆ. ಇದನ್ನೂ ಓದಿ: ಮೋದಿಯವರನ್ನು ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದಲ್ಲಿ ಎಳೆದು ತರಬೇಡಿ: ನಿಖಿಲ್ ಕುಮಾರಸ್ವಾಮಿ

