ಬೆಂಗಳೂರು: ಕೆಆರ್ ನಗರದ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ (Kidnap Case) ಬಂಧನವಾಗಿದ್ದ ಹೆಚ್.ಡಿ. ರೇವಣ್ಣ (HD.Revanna) ಅವರಿಗೆ ಸದ್ಯ ಜಾಮೀನು ಸಿಕ್ಕಿದ್ದು, ಅವರು ಜೈಲಿನಿಂದ (Jail) ಬಿಡುಗಡೆಗೊಂಡು ಟೆಂಪಲ್ ರನ್ ಮಾಡುತ್ತಿದ್ದಾರೆ. ಆದರೆ ಅವರಿಗೆ ಜಾಮೀನು ಸಿಕ್ಕರೂ ಕಾನೂನು ಕಂಟಕ ತಪ್ಪೊದಿಲ್ಲ.
ಈಗಾಗಲೇ ತನಿಖಾ ಹಂತದಲ್ಲಿ ಎಸ್ಐಟಿ (SIT) ಸಾಕಷ್ಟು ಎವಿಡೆನ್ಸ್ ಕಲೆಕ್ಟ್ ಮಾಡಿದ್ದು, ರೇವಣ್ಣ ವಿರುದ್ಧ ಎಸ್‌ಐಟಿ ಮತ್ತೆ ಆಕ್ಟಿವ್ ಆಗಿದೆ. ರೇವಣ್ಣ ಅವರ ಜಾಮೀನು ರದ್ದು ಕೋರಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳದು ಬಂದಿದೆ. ಇದನ್ನೂ ಓದಿ: A2 ಆರೋಪಿ ರೇವಣ್ಣ ಬಂಧನ ಅನುಮಾನಾಸ್ಪದಾ
ಎಸ್‌ಐಟಿ ಅಧಿಕಾರಿಗಳು ಎರಡನೇ ಆರೋಪಿ ಸತೀಶ್ ಬಾಬು ಅವರನ್ನ ಮತ್ತೊಮ್ಮೆ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸತೀಶ್ ಬಾಬು ಮಹಿಳೆಯನ್ನು ಕರೆದುಕೊಂಡು ಹೋಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದ್ದು, ಈ ವಿಚಾರವಾಗಿ ಒಂದಿಷ್ಟು ಮಾಹಿತಿ ಬಾಯಿಬಿಟ್ಟಿದ್ದಾರೆ. ಇದನ್ನೂ ಓದಿ: ದಿನೇ ದಿನೇ ಹೆಚ್ಚಾಗುತಿದೆ ಡೆಂಗ್ಯೂ ಪ್ರಕರಣಗಳು
ಸದ್ಯ ಎಸ್ಐಡಿ ಅಧಿಕಾರಿಗಳು ರೇವಣ್ಣನ ವಿರುದ್ಧ ಸಾಕ್ಷಿ ಕಲೆ ಹಾಕಲು ಮುಂದಾಗಿದ್ದು, ಸಂತ್ರಸ್ತೆ ವಿಡಿಯೋ ಬಗ್ಗೆಯೋ ಸತ್ಯಾಸತ್ಯತೆ ಪರಿಶೀಲನೆ ನಡೆಸಿ ಎಲ್ಲಾ ಅಂಶಗಳನ್ನು ಮುಂದಿಟ್ಟಕೊಂಡು ಮೇಲ್ಮನವಿ ಸಲ್ಲಿಸಲು ಎಸ್ಐಟಿ ಸಿದ್ದತೆ ನಡೆಸುತ್ತಿದೆ.ನ್ಯಾಯಾಲಯ ನೀಡಿದ ಜಾಮೀನು ರದ್ದು ಪಡೆಸುವಂತೆ ಮೇಲ್ಮನವಿ ಸಲ್ಲಿಸುವ ಸಲ್ಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಸುಂದರಿ ಅಂದರ್

