ಎಷ್ಟೇ ಹೊಸ ಸಿನಿಮಾಗಳು ಬಂದರು ಹಳೇ ಸಿನಿಮಾಗಳ ಟ್ರೇಂಡ್ ಮಾತ್ರ ಬದಲಾಗುವುದಿಲ್ಲ. ಅದರಲ್ಲೂ ಈಗ ಹೊಸ ಸಿನಿಮಾಗಳ ಅಬ್ಬರ ಇಲ್ಲದ ಕಾರಣ ಹಳೆಯ ಕ್ಲಾಸಿಕ್ ಸಿನಿಮಾಗಳು ರೀ-ರಿಲೀಸ್ (Re-Release) ಆಗುತ್ತಿವೆ. ಹಲಾವರು ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಜಾಕಿ, ಅಂಜನಿಪುತ್ರ ಮತ್ತು ಪವರ್ ರೀರಿಲೀಸ್ ಆಗಿತ್ತು. ಆದರಂತೆ ಇದೀಗ ಉಪೇಂದ್ರ (Upendra) ಅವರು ನಿರ್ದೇಶಿಸಿ (Direction) ನಟಿಸಿದ “A” ಸಿನಿಮಾ ಇಂದು ಮರುಬಿಡುಗಡೆಯಾಗಿದೆ.
ಈ ಚಿತ್ರಕ್ಕೆ ಮುಂಜಾನೆ 6 ಗಂಟೆಗೆ ಶೋ ಇಡಲಾಗಿತ್ತು. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಶೋ ಆಯೋಜನೆ ಮಾಡಲಾಗಿತ್ತು. ಉಪ್ಪಿ ಅಭಿನಯದ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬಂದಿದ್ದರು. ಇದನ್ನೂ ಓದಿ: ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ-ಮನೆ ಕೆಲಸದಾಕೆಯಿಂದ್ಲೇ ಕೃತ್ಯ

ಬೆಳೆಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಳೆ ಆಗುತ್ತಿದೆ. ಮಳೆಊ ನಡುವೆಯೂ ಜನ ಚಿತ್ರಮಂದಿರಗಳಿಗೆ ಬಂದು ಸಿನಿಮಾ ವಿಕ್ಷಣೆ ಮಾಡಿದ್ದಾರೆ. ಉಪ್ಪಿ ಅವರ ಎಂಟ್ರಿಗೆ ಅಭಿಮಾನಿಗಳು ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: 11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾಡುಗಾರ ಜಿ.ವಿ ಪ್ರಕಾಶ್

