ಕಾರವಾರ: ಮನೆಯಲ್ಲಿ ಅಡುಗೆ (Cooking) ಮಾಡುತಿದ್ದ ವೇಳೆ ಗ್ಯಾಸ್ ಸಿಲಿಂಡರ್ (Gas Cylinder) ಸ್ಫೋಟಗೊಂಡು ಮನೆಯ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ (Uttar Kannda) ಜಿಲ್ಲೆಯ ಕಾರವಾರ (Karwar) ತಾಲೂಕಿನ ನಂದನಗದ್ದಾದಲ್ಲಿ ನಡೆದಿದೆ.
ನಿಲೇಶ್ ತಾಳೇಕರ್ ಎಂಬುವವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯಲ್ಲಿರುಬ ಬೆಲೆ ಬಾಳುವ ವಸ್ತುಗಳು ಬೆಂಗಾಹುತಿಯಾಗಿದೆ. ಮನೆಯಲ್ಲಿದ್ದ ಪೀಠೋಪಕರಣ, ಫ್ರಿಜ್ , ವಾಶಿಂಗ್ ಮಿಷನ್, ಅಡುಗೆ ಸಾಮಗ್ರಿ ಸೇರಿ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಶವ ಪತ್ತೆ
ಈ ಘಟಯಿಂದಾಗಿ ಮನೆಯಲ್ಲಿದ್ದ ಸುಮಾರು 8 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿವೆ. . ಇದನ್ನೂ ಓದಿ: ತನ್ನ ರ್ಡಾಲಿಂಗ್ ಬಗ್ಗೆ ಸುಳಿವು ಕೊಟ್ಟ ರ್ಡಾಲಿಂಗ್ ಪ್ರಭಾಸ್ – ಕೈ ಹಿಡಿಯುವ ಹುಡುಗಿ ಯಾರು?
ಸ್ಫೋಟದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮನೆ ಮಾಲೀಕ ನಿಲೇಶ್ ತಾಳೇಕರ್ ಗಾಯಗೊಂಡಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. . ಇದನ್ನೂ ಓದಿ: ಬೇಟೆಗೆ ತೆರಳಿದ್ದಾಗ ಮಿಸ್ ಫೈರ್ ಆಗಿ ಯುವಕ ದುರ್ಮರಣ

