ಬೆಂಗಳೂರು: ದೇವೇಗೌಡರ ಕುಟುಂಬವನ್ನ (Devegowdaʼs Family) ಪೆನ್‌ಡ್ರೈವ್ ಪ್ರಕರಣದಲ್ಲಿ (Pendrive Case) ಟಾರ್ಗೆಟ್ ಮಾಡಿದ್ದಾರೆ. ಇದನ್ನ ನಾವು ಹೇಳೋದಲ್ಲ. ಯಾವುದೇ ಹಳ್ಳಿಗೆ ಹೋದರೂ ಜನ ಇದರ ಬಗ್ಗೆ ಮಾತಾಡ್ತಿದ್ದಾರೆ ಅಂತಾ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅವರ, ಪೆನ್ ಡ್ರೈವ್ ಕೇಸ್ ನಲ್ಲಿ (Pendrive Case) ದೇವೇಗೌಡ ಕುಟುಂಬ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಹೇಳಿಕೆಗೆ ಜೆಪಿ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರ ಫ್ಯಾಮಿಲಿ ಟಾರ್ಗೆಟ್ ಮಾಡಿದ್ದಾರೆ ಅನ್ನೋದು ನಾವು ಹೇಳೋದಲ್ಲ. ಯಾವುದೇ ಹಳ್ಳಿಗೆ ಹೋದರೂ ಜನ ಇದರ ಬಗ್ಗೆ ಮಾತಾಡ್ತಿದ್ದಾರೆ. ಸರ್ಕಾರದವರು ಟಾರ್ಗೆಟ್ ರಾಜಕಾರಣ ಮಾಡ್ತಿದ್ದಾರೆ. ದೇವೇಗೌಡರ ಕುಟುಂಬ ಇರಬಹುದು ಅಥವಾ ರೇವಣ್ಣ ಅವರನ್ನ ಸಾಫ್ಟ್ ಟಾರ್ಗೆಟ್ ಮಾಡಿಕೊಂಡು ಜೈಲಿಗೆ ಕಳಿಸಬೇಕು ಅನ್ನೋ ದುರುದ್ದೇಶದಿಂದ ರೇವಣ್ಣ ಅವರನ್ನ ಕಳಿಸಿರೋದು. ಇದೆಲ್ಲವನ್ನು ಜನ ಗಮನಿಸುತ್ತಿದ್ದಾರೆ. ಬಹಳ ದಿನ ಇವೆಲ್ಲ ನಡೆಯೋದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಲಿಕಾನ್ ಸಿಟಿಯ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ
ಇದೇ ವೇಳೆ ಕುಮಾರಸ್ವಾಮಿ (HD Kumaraswamy) ಕುಟುಂಬದವರ ಫೋನ್ ಕದ್ದಾಲಿಕೆ ನಾವು ಮಾಡ್ತಿಲ್ಲ, ಕುಮಾರಸ್ವಾಮಿ ವಿಷಯ ದಿಕ್ಕುತಪ್ಪಿಸಲು ಆರೋಪ ಮಾಡ್ತಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಸರ್ಕಾರದ ವಿರುದ್ದ ಅಪಪ್ರಚಾರ ನಡೆಸುವವರಿಗೆ ಅಗ್ರೆಸಿವ್ ಕೌಂಟರ್ ಕೊಡುವಂತೆ ಸಿಎಂ ಸೂಚನೆ
ಈಗಾಗಲೇ ಕುಮಾರಸ್ವಾಮಿ ಅವರು ಫೋನ್ ಟ್ಯಾಪ್ (Phone Tap) ವಿಷಯ ಪ್ರಸ್ತಾಪ ಮಾಡಿದ್ದಾರೆ. ಅವರಿಗೆ ಯಾವುದೋ ಒಂದು ಮೂಲದ ಮಾಹಿತಿ ಸಿಕ್ಕಿರಬಹುದು. ಹೀಗಾಗಿ ಅವರು ಫೋನ್ ಟ್ಯಾಪ್ ಬಗ್ಗೆ ಮಾತಾಡಿದ್ದಾರೆ. ಈ ಪ್ರಕರಣದಲ್ಲಿ ಮೊದಲ ದಿನದಿಂದಲೂ SIT ರಚನೆ ಆದಾಗಿನಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿಲ್ಲ. ಇದು ಇಡೀ ರಾಜ್ಯದಲ್ಲಿ ಪ್ರಶ್ನೆ ಎದ್ದಿದೆ. ಕುಮಾರಸ್ವಾಮಿ ಅವರಿಗೆ ಮಾಹಿತಿ ಬಂದಿರಬಹುದು. ಅವರು ಸುಮ್ಮನೆ ಮಾತಾಡೋದಿಲ್ಲ. ಮಾಹಿತಿ ಇದ್ದೇ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಳ್ಳೊದು ಬಿಟ್ಟು ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಮುಂದಾದ MEA

