ನವದೆಹಲಿ: ಅರವಿಂದ್ ಕೇಜ್ರಿವಾಲ್ (Aravind kerziwal) ಮನೆಯಲ್ಲಿ ನನ್ನ ಚಾರಿತ್ರ್ಯ ವಧೆ ನಡೆದಿದೆ, ನಾನು ಎಫ್‌ಐಆರ್‌ನಲ್ಲಿ ಹೇಳಿರುವುದೆಲ್ಲವೂ ನಿಜ, ನಾನು ಪಾಲಿಗ್ರಾಫ್ ಹಾಗೂ ನಾರ್ಕೊ ಪರೀಕ್ಷೆಗೆ ಸಿದ್ಧನಿದ್ದೇನೆ ಎಂದು ಎಎಪಿ(AAP) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swathi Maliwal) ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್(Swati Maliwal) ಅವರು ಅರವಿಂದ್ ಕೇಜ್ರಿವಾಲ್(Arvind Kejriwal) ಅವರ ನಿವಾಸದಲ್ಲಿ ಅವರ ಆಪ್ತ ಕಾಯದರ್ಶಿ ವಿಭವ್ ಕುಮಾರ್ ತಮ್ಮ ಮೇಲೆ ನಡೆಸಿದ ಹಲ್ಲೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಮನೆಯಲ್ಲಿ ನನ್ನ ಮಾನಭಂಗ ನಡೆದಿದೆ, ಚಾರಿತ್ರ್ಯ ವಧೆಯಾಗಿದೆ, ಎಫ್‌ಐಆರ್‌ನಲ್ಲಿ ತಾನು ಹೇಳಿರುವುದು ನಿಜ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. ನಾರ್ಕೋ ಪರೀಕ್ಷೆ ಮತ್ತು ಪಾಲಿಗ್ರಾಫ್‌ಗೆ ಒಳಗಾಗಲು ಸಿದ್ಧ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು, ಹಾಸನ, ಕೊಡಗು ಸೇರಿದಂತೆ ಹಲವೆಡೆ ಇಂದು ಮಳೆ ಸಾಧ್ಯತೆ
ಸದ್ಯ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರಿಗೆ ನನ್ನ ರಾಜ್ಯಸಭಾ ಸ್ಥಾನ ಬೇಕಿದ್ದರೆ ಪ್ರೀತಿಯಿಂದ ಕೇಳಿದ್ದರೆ ನನ್ನ ಪ್ರಾಣವನ್ನು ಬೇಕಿದ್ದರೂ ಬಿಡುತ್ತಿದ್ದೆ, ಸಂಸದೆ ಎಂಬುದು ಸಣ್ಣ ವಿಷಯ, ಆದರೆ ಈಗ ನನ್ನ ಮೇಲೆ ಹಲ್ಲೆ ನಡೆದಿದೆ, ಪ್ರಪಂಚದ ಯಾವೊಂದು ಶಕ್ತಿ ಬಂದು ಹೇಳಿದರೂ ನಾನು ರಾಜೀನಾಮೆ ನೀಡುವ ಮಾತೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋರಟ ಕಾರು ಪಲ್ಟಿ -ನಾಲ್ವರು ಸ್ಥಳದಲ್ಲೇ ಸಾವು!

ನಾನು ಒತ್ತಡಕ್ಕೆ ಮಣಿದು ಈ ಪ್ರಕರಣವನ್ನು ಇಲ್ಲಿಗೆ ಬಿಡುತ್ತೇನೆ ಎಂದುಕೊಂಡಿದ್ದಾರೆ, ನನ್ನನ್ನು ಟ್ರೋಲ್ ಮಾಡಲಾಗುತ್ತಿದೆ, ಆದರೆ ನಾನು ಎಫ್‌ಐಆರ್‌ನಲ್ಲಿ ಹೇಳಿರುವುದೆಲ್ಲವೂ ನಿಜ, ನಾನು ಪಾಲಿಗ್ರಾಫ್ ಹಾಗೂ ನಾರ್ಕೊ ಪರೀಕ್ಷೆ ಸಿದ್ಧನಿದ್ದೇನೆ, ನಾನು ಹೋರಾಡುತ್ತೇನೆ ಎಂದಿದ್ದಾರೆ. ಅರವಿಂದ್ ಜಿ ಆರೋಪಿಯನ್ನು ರಕ್ಷಿಸುತ್ತಿದ್ದು, ಇವರೆಗೆ ಅವರು ನನ್ನ ಯಾವುದೇ ಕರೆ ಸ್ವೀಕರಿಸಿಲ್ಲ, ಮತ್ತು ಭೇಟಿಯೂ ಮಾಡಿಲ್ಲ ಎಂದರು. ಇದನ್ನೂ ಓದಿ: ವಕೀಲೆ ಚೈತ್ರಾ ಗೌಡ ಸಾವು ಪ್ರಕರಣ: ಅನುಮಾನಾಸ್ಪದ ಸಾವು ಕೊಲೆಯಲ್ಲ, ಆತ್ಮಹತ್ಯೆ
ನನ್ನ ಬಟ್ಟೆ ಹರಿದಿದೆ ಎಂದು ನಾನು ಎಫ್‌ಐಆರ್‌ನಲ್ಲಿ ಯಾವಾಗ ಹೇಳಿದ್ದೇನೆ, ನನ್ನ ತಲೆಗೆ ಗಾಯವಾಗಿದೆ ಎಂದು ನಾನು ಎಫ್‌ಐಆರ್‌ನಲ್ಲಿ ಹೇಳಿದ್ದೇನೆ. ನನಗೆ ಏನಾಯಿತು ಎಂದು ನಾನು ನಿಖರವಾಗಿ ಬರೆದಿದ್ದೇನೆ, ನಾನು ಅದಕ್ಕಿಂತ ಹೆಚ್ಚಿನದನ್ನು ಬರೆದಿಲ್ಲ. ತಾವು ಸತ್ಯವನೇ ಹೇಳುತ್ತಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಕ್ರಿಕೆಟ್ ಜಗಳ ತಾರಕಕ್ಕೇರಿ ಗಲಾಟೆ -ಓರ್ವ ಪೊಲೀಸ್ ಪೇದೆಗೆ ಗಾಯ

